Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ದಲಿತರೇನು ಪ್ರಚಾರದ ಸಾಮಗ್ರಿಗಳೇ?

ದಲಿತರೇನು ಪ್ರಚಾರದ ಸಾಮಗ್ರಿಗಳೇ?

ಕೆ.ಎಸ್.ನಾಗರಾಜ್, ಬೆಂಗಳೂರುಕೆ.ಎಸ್.ನಾಗರಾಜ್, ಬೆಂಗಳೂರು21 July 2017 11:57 PM IST
share

ಮಾನ್ಯರೆ,

ರಾಜ್ಯದಲ್ಲಿ ಹಿಂದೆಂದಿಗಿಂತಲೂ ಇಂದು ಎಲ್ಲಾ ರಾಜಕೀಯ ಪಕ್ಷಗಳಿಗೆ ದಲಿತರ ಬಗ್ಗೆ ಎಲ್ಲಿಲ್ಲದ ಪ್ರೀತಿ ಉಕ್ಕಿ ಹರಿಯುತ್ತಿದೆ. ಎಲ್ಲೆಲ್ಲಿಯೂ ಅಂಬೇಡ್ಕರ್ ಮತ್ತು ಬಾಬು ಜಗಜೀವನ್‌ರಾಮ್ ಅವರ ಭಾವಚಿತ್ರಗಳು ಅವರ ಕಾರ್ಯಕ್ರಮಗಳಲ್ಲಿ ರಾರಾಜಿಸುತ್ತಿವೆೆ. ದಲಿತರ ಮನೆಯಲ್ಲಿ ಊಟ, ದಲಿತರ ಕೇರಿ ಯಲ್ಲಿ ಓಡಾಟ, ದಲಿತರೊಂದಿಗೆ ಸಹಭೋಜನ, ದಲಿತರನ್ನು ಮನೆಗೆ ಆಹ್ವಾನಿಸುವ ವಿಶೇಷ ಕಾರ್ಯಕ್ರಮಗಳು, ಹೀಗೆ ಒಂದಲ್ಲಾ ಒಂದು ಕಾರ್ಯಕ್ರಮಗಳು ದಲಿತರ ಹೆಸರಿನಲ್ಲಿ ನಡೆಯುತ್ತಲೇ ಇವೆೆ. ಸದ್ಯಕ್ಕೆ ದಲಿತರೇ ಕರ್ನಾಟಕ ರಾಜ್ಯದಲ್ಲಿ ನಿರ್ಣಾಯಕ ಮತದಾರರೆನ್ನುವುದು ಸತ್ಯವಾಗಿರುವುದು ಸಂತೋಷದ ಸಂಗತಿ.

ರಾಜಕೀಯ ಪಕ್ಷಗಳಿಗೆ ದಲಿತರೆಂದರೆ, ಪ್ರಚಾರದ ಸಾಮಗ್ರಿಗಳಾಗಿದ್ದಾರೆ. ದಲಿತರ ಮನೆಯಲ್ಲಿ ಊಟ ಮಾಡುತ್ತೇವೆ ಎನ್ನುವುದು ಮನುಷ್ಯತ್ವ ಇಲ್ಲದ ಮಾತುಗಳು. ದಲಿತರೇನು ಮನುಷ್ಯರಲ್ಲವೇ? ಅವರ ಜೊತೆಯಲ್ಲಿ ಊಟ ಮಾಡುವುದು ದೊಡ್ಡ ಕಾರ್ಯಕ್ರಮವೇ? ಮನುಷ್ಯತ್ವ ಇರುವವರಿಗೆ ದಲಿತರು ಮತ್ತು ಇತರರು ಎನ್ನುವ ಭೇದಭಾವದ ಅರಿವೇ ಇರುವುದಿಲ್ಲ. ಯಾರು ತಮ್ಮ ಮನಸ್ಸಿನಲ್ಲಿ ಅಸ್ಪಶ್ಯತೆಯ ರೋಗವನ್ನು ಮೈಗೂಡಿಸಿಕೊಂಡಿರುತ್ತಾರೋ, ಅಂತಹವರಿಗೆ ಇಂತಹ ಪದಗಳು ಹೊಸದಾಗುತ್ತವೆ. ದಲಿತರ ಬಗ್ಗೆ ಮಾತನಾಡುವ ರಾಜಕೀಯ ಪಕ್ಷದವರು ದಲಿತರನ್ನೇಕೆ ಮುಂದಿನ ಮುಖ್ಯಮಂತ್ರಿಯೆಂದು ಯಾರೂ ಹೇಳುತ್ತಿಲ್ಲ.

ತಮ್ಮ ತಮ್ಮ ಗೆಲುವಿಗೆ ದಲಿತರ ಮನೆಗಳು ಬೇಕು, ತಮ್ಮ ಪ್ರಚಾರಕ್ಕೆ ದಲಿತರ ಮನೆಯ ತಿಂಡಿ ಬೇಕು, ತಮ್ಮ ವ್ಯಕ್ತಿತ್ವದ ವೈಭವೀಕರಣಕ್ಕೆ ದಲಿತರೊಂದಿಗೆ ಕಾಣಿಸಿಕೊಳ್ಳಬೇಕು. ಆದರೆ, ರಾಜ್ಯದ ಚುಕ್ಕಾಣಿ ಮಾತ್ರ ಅವರ ಕೈಗೆ ನೀಡಲು ಮನಸ್ಸಿಲ್ಲ. ನಿಜಕ್ಕೂ ದಲಿತರ ಮೇಲೆ ಪ್ರೀತಿ ಇದ್ದರೆ, ಎಲ್ಲಾ ರಾಜಕೀಯ ಪಕ್ಷಗಳು ಮುಂದಿನ ಮುಖ್ಯಮಂತ್ರಿಯನ್ನು ತಮ್ಮ ತಮ್ಮ ಪಕ್ಷದಿಂದ ದಲಿತರನ್ನೇ ಮಾಡುತ್ತೇವೆಂದು ಬಹಿರಂಗವಾಗಿ ಘೋಷಿಸಲಿ. ದಲಿತ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಮುಂಚೂಣಿಗೆ ತಂದು ಅವರ ನೇತೃತ್ವದಲ್ಲಿ ಚುನಾವಣೆಯನ್ನು ನಡೆಸಲಿ. ಕೇವಲ ತೋರಿಕೆಗಾಗಿ, ಓಟಿಗಾಗಿ ದಲಿತರ ಹೆಸರನ್ನು ಹೇಳುತ್ತಿರುವ ನಾಯಕರ ಬಗ್ಗೆ ಎಚ್ಚರವಿರಲಿ.

ಇವತ್ತಿಗೂ ನಮ್ಮ ರಾಜ್ಯದ ಅನೇಕ ಭಾಗಗಳಲ್ಲಿ ಮರ್ಯಾದಾ ಹತ್ಯೆಗಳು ನಿರಂತರವಾಗಿ ನಡೆಯುತ್ತಿವೆ. ದಲಿತರ ಮನೆಯ ಮಕ್ಕಳನ್ನು ಮೇಲ್ವರ್ಗದವರು ವಿವಾಹವಾಗಲು ನೂರಾರು ಅಡ್ಡಿ ಆತಂಕಗಳಿವೆ. ದಲಿತರ ಬಗ್ಗೆ ಮಾತಾಡುವ ನಾಯಕರು ತಮ್ಮ ಕುಟುಂಬದಲ್ಲಿ ಯಾವುದಾದರೊಬ್ಬ ಸದಸ್ಯರಿಗೆ ದಲಿತರ ಮನೆಯ ಮಕ್ಕಳನ್ನು ತಂದು ಅವರೊಂದಿಗೆ ಮದುವೆ ಮಾಡಲಿ. ಆಗ ಇವರ ಬದ್ಧತೆಯನ್ನು ನಾವು ಪ್ರಾಮಾಣಿಕವಾಗಿದೆ ಎಂದು ಭಾವಿಸಬಹುದು. ದಲಿತರೊಂದಿಗೆ ಸಂಬಂಧ ಬೇಡ, ದಲಿತರಿಗೆ ಅಧಿಕಾರ ಬೇಡ, ಆದರೆ ದಲಿತರ ಮತಗಳು ಮಾತ್ರ ಬೇಕು.

share
ಕೆ.ಎಸ್.ನಾಗರಾಜ್, ಬೆಂಗಳೂರು
ಕೆ.ಎಸ್.ನಾಗರಾಜ್, ಬೆಂಗಳೂರು
Next Story
X