ಹನೂರು: ವಿಕಲಚೇತನ ಮಕ್ಕಳ ವೈದಕೀಯ ತಪಾಸಣಾ ಶಿಬಿರ ಕಾರ್ಯಕ್ರಮ

ಹನೂರು, ಜು.22: ವೀಕಲಚೇತನ ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಅವರು ಸ್ವಾವಲಂಬನೆಯಿಂದ ಬದುಕು ರೂಪಿಸಿಕೂಂಡು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ನೋಡಿಕೂಳ್ಳುವುದು ನಮ್ಮಲ್ಲರ ಕರ್ತವ್ಯವಾಗಿದೆ ಎಂದು ಶಾಸಕ ನರೇಂದ್ರ ರಾಜೂಗೌಡ ತಿಳಿಸಿದರು.
ಪಟ್ಟಣದ ಪ್ರಾಥಮಿಕಶಾಲೆ ಆವರಣದಲ್ಲಿ ನಡೆದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರಸಂಪನ್ಮೂಲಧಿಕಾರಿಗಳ ಕಛೇರಿ ಹಾಗೂ ಸರ್ವಶಿಕ್ಷ ಅಭಿಯಾನದಡಿಯಲ್ಲಿ 2017-18 ಸಾಲಿನ ವಿಕಲಚೇತನ ಮಕ್ಕಳ ವೈದಕೀಯ ತಪಾಸಣಾ ಶಿಬಿರವನ್ನ್ನು ಉದ್ಘಾಟಿಸಿ ಮಾತನಾಡಿದ ಅವರು, ವೀಕಲಚೇತನ ಮಕ್ಕಳು ಹುಟ್ಟಿದ್ದರೆ ಶಾಪ ಎಂಬ ಭಾವನೆಯಿಂದ ಪೋಷಕರು ಹೋರಬರಭೇಕು. ಅವರಿಗೆ ಸೂಕ್ತವಾದ ಚಿಕಿತ್ಸೆ ಮತ್ತು ಸೌಲಭ್ಯಗಳನ್ನು ಒದಗಿಸಿಕೂಟ್ಟರೆ ಅವರು ಎಲ್ಲರಂತೆ ಬದುಕಬಲ್ಲರು. ಅವರು ಆತ್ಮ ವಿಶ್ವಾಸದಿಂದ ಮುನ್ನಗ್ಗಬೇಕು. ನಮ್ಮ ಕರ್ನಾಟಕದಲ್ಲೇ ಒಬ್ಬ ಹುಟ್ಟಿನಿಂದಲೂ ಕುರಡುತನದಿಂದ ಇದ್ದಂತಹ ಅವತು ಐ.ಎ.ಎಸ್ ಪಾಸ್ ಮಾಡಿರುವಂತದ್ದು ನಮ್ಮೆಲರಿಗೂ ಹೆಮ್ಮೆ ತರುವಂತಹ ವಿಷಯವಾಗಿದೆ .ಪೋಷಕರು ಎದೆ ಗುಂದದೆ ಮಕ್ಕಳನ್ನು ಚೆನ್ನಾಗಿ ನೋಡಿಕೂಳ್ಳಬೇಕು. ಇನ್ನೂ ಸಹ ವಿಕಲಚೇತನರು ಸಮಾಜದಲ್ಲಿ ಸಾಧನೆ ಮಾಡಿರುವ ಅನೇಕ ಉದಾರಣೆಗಳಿವೆ. ನಮ್ಮ ಸರ್ಕಾರ ವೀಕಲಚೇತನ ಮಕ್ಕಳಿಗೆ ಶೇ3% ರಷ್ಟು ಮೀಸಲಾತಿ ಕಲ್ಪಿಸುತ್ತಿದೆ. ಶಿಕ್ಷಣ ಉದ್ಯೋಗ ಇನ್ನು ಹಲವಾರು ಕಡೆ ಸರ್ಕಾರ ಮೀಸಲಾತಿ ಕಲ್ಪಿಸಿ ಅವರ ಬದುಕನ್ನು ಹಸನಾಗಿಸಲು ಮುಂದಾಗಿದ್ದು. ಇದಕ್ಕೆ ಪೂರಕವೆಂಬತೆ ವಿದ್ಯಾರ್ಥಿಗಳ ಉಚಿತ ಆರೋಗ್ಯ ತಪಾಸಣೆ ಶಿಬರವನ್ನು ನಾಲ್ಕೈದು ವರ್ಷಗಳಿಂದ ನೆಡಸಲಾಗುತ್ತದೆ ಎಂದು ತಿಳಿಸಿದರು.
ಈ ತಪಾಸಣಾ ಶಿಬರದಲ್ಲಿ ಹನೂರು ತಾಲ್ಲೂಕಿನ ವಿವಿಧ ಶಾಲೆಯಿಂದ 312 ವಿಕಲಚೇತನ ಮಕ್ಕಳು ಹಾಗೂ ಪೂಷಕರು ಬಾಗವಹಿಸಿದ್ದರು. ಈ ಸಮಾರಂಭದಲ್ಲಿ ತಾಲ್ಲೂಕೂ ಪಂಚಾಯತಿ ಅದ್ಯಕ್ಷ ರಾಜೂ, ಸ್ಥಾಯಿಸಮಿತಿಯ ಅದ್ಯಕ್ಷ ಜಾವಿದ್ ಅಹಮದ್, ತಾಲ್ಲೂಕ್ ಪಂಚಾಯತ್ ಸದ್ಯಸ ಮಹದೇವಸ್ವಾಮಿ ಪಟ್ಟಣ ಪಂಚಾಯತಿ ಉಪಾದ್ಯಕ್ಷ ಬಸರಾಜು, ಬಿಇಓ ತಿಮ್ಮೇಗೌಡ ಹಾಗೂ ಬಿ ಆರ್ ಸಿ ಕಾರ್ತಿಕ್ ಪ್ರೌಡಶಾಲೆ ಮುಖ್ಯಶಿಕ್ಷಕ ಸಂಘದ ಅದ್ಯಕ್ಷ ನಾಗರಾಜು, ಶಿಕ್ಷಕರ ಸಂಘದ ಕಾರ್ಯದರ್ಶಿ ಶ್ರೀನಿವಾಸ್ ಸಿದ್ದರಾಜು, ಅಂಗವಿಕಲರ ಸಂಘದ ಪದಾಧಿಕಾರಿಗಳು ಕವಿರತ್ನ, ಬಿಆರ್‌ಪಿಗಳಾದ ಆಶೋಕ್ ಶ್ರೀನಿವಾಸ್‌ನಾಯ್ಡು, ಸತೀಶ್ ವೆಂಕಟರಾಜು, ಶಿವಕುಮಾರಿ, ಐಆರ್‌ಟಿ ಅಧಿಕಾರಿಯಾದ ಕೃಷ್ಣ, ಸಿ ಅರ್ ಪಿಗಳಾದ ಮಹದೇವಸ್ವಾಮಿ, ಶ್ವೇತಾ ವಿಜಯ್ ಗುರುಪ್ರಸಾದ್, ವಿರುಪಾಕ್ಷ ತುಳುಸಿನ್ ಇನ್ನಿತರರು ಹಾಜರಿದ್ದರು.







