ಗುಂಡ್ಲುಪೇಟೆ: ಕೊಲೆ ಆರೋಪಿಯ ಬಂಧನ

ಗುಂಡ್ಲುಪೇಟೆ, ಜು.22: ತನ್ನ ಅನೈತಿಕ ಸಂಪರ್ಕದ ಬಗ್ಗೆ ಪ್ರಶ್ನಿಸಿದ್ದ ಪತ್ನಿಯನ್ನು ಕೊಲೆಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತಾಲೂಕಿನ ಯರಿಯೂರು ಗ್ರಾಮದ ಆರೋಪಿ ರಾಜು ಜುಲೈ 14ರಂದು ತನ್ನ ಹೆಂಡತಿಗೆ ಕೊಡಲಿಯಿಂದ ಹೊಡೆದು ಕೊಲೆಮಾಡಿ ಪರಾರಿಯಾಗಿದ್ದನು. ಈ ಬಗ್ಗೆ ಮೃತಳ ಸಹೋದರ ನೀಡಿದ ದೂರನ್ನು ಸ್ವೀಕರಿಸಿದ ತೆರಕಣಾಂಬಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು.
ಶನಿವಾರ ಬೆಳಗ್ಗೆ ನಂಜನಗೂಡಿನ ಬಸ್ ನಿಲ್ದಾಣದಲ್ಲಿ ಆರೋಪಿಯನ್ನು ಪತ್ತೆಹಚ್ಚಿದ ಪೊಲೀಸರು ಅವನಿಂದ ಕೊಲೆಗೆ ಬಳಸಿದ ಆಯುಧವನ್ನು ವಶಕ್ಕೆ ಪಡೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪತ್ತೆ ಕಾರ್ಯಾಚರಣೆಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಕೆ.ವಿ.ಕೃಷ್ಣಪ್ಪ, ಸಹಾಯಕ ಸಬ ಇನ್ಸ್ ಪೆಕ್ಟರ್‌ಗಳಾದ ಮಹದೇವ, ಶಿವಣ್ಣ, ಸಿಬ್ಬಂದಿ ಪುಟ್ಟರಾಜು, ಮಲ್ಲೇಶ್, ಕುಮಾರ್ ಹಗಊ ಅಸಾದುಲ್ಲಾ ಭಾಗವಹಿಸಿದ್ದರು.
Next Story





