ಹಣಕ್ಕಾಗಿ ಬೇಡಿಕೆ: ಇಬ್ಬರ ಬಂಧನ
ಬೆಂಗಳೂರು, ಜು.22: ಖಾಸಗಿ ಕಂಪೆನಿಯೊಂದರ ಅಸಿಸ್ಟೆಂಟ್ ಮ್ಯಾನೇಜರ್‌ಗೆ ಹಣಕ್ಕಾಗಿ ಬೇಡಿಕೆ ಇಟ್ಟು ಹಣ ವಸೂಲಿ ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ದಾಬಸಪೇಟೆಯ ರೌಡಿ ರಘು ಹಾಗೂ ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ದಾಬಸ್‌ಪೇಟೆಯಲ್ಲಿರುವ ಲಭ್ಯತಾ ಎಚ್.ಆರ್. ಸರ್ವಿಸ್ ಕಂಪೆನಿಯಿಂದ ಸುಮಾರು 15ಕ್ಕೂ ಹೆಚ್ಚು ಕಾರ್ಮಿಕರನ್ನು ಡಾಬಸ್‌ಪೇಟೆ ಸಮೀಪದ ಕೆಂಗಲ್ ಕೆಂಪೊಹಳ್ಳಿ ಬಳಿಯಿರುವ ಅಭಿಮಾನಿ ಪ್ರಿಂಟರ್ಸ್ ಕಂಪೆನಿಗೆ ಕೆಲಸಕ್ಕೆ ಕಳುಹಿಸಿದ್ದರು. ಜೂನ್ ತಿಂಗಳಲ್ಲಿ ಕಾರ್ಮಿಕರಿಗೆ ಸಂಬಳ ನೀಡಲು ವಿಳಂಬವಾಗಿತ್ತು. ಹೀಗಾಗಿ, ಕಾರ್ಮಿಕರು ಅಲ್ಪಸಂಖ್ಯಾತ ಹಿಂದುಳಿದ ದಲಿತ ವೇದಿಕೆಯ ರಾಜ್ಯ ಉಪಾಧ್ಯಕ್ಷ ಮಹೇಶ್ ಎಂಬುವರಿಗೆ ಸಮಸ್ಯೆಯನ್ನು ಹೇಳಿಕೊಂಡಿದ್ದರು.
ಇದರಿಂದ ಮಹೇಶ್ ಮತ್ತು ರೌಡಿ ಶೀಟರ್ ರಘು ಇದೆ ತಿಂಗಳು 14ರಂದು ಅಭಿಮಾನಿ ಪ್ರಿಂಟರ್ಸ್ ಕಂಪನಿಗೆ ತೆರಳಿ ಲಭ್ಯತಾ ಎಚ್.ಆರ್. ಸರ್ವಿಸ್ ಕಂಪೆನಿಯ ಅಸಿಸ್ಟೆಂಟ್ ಮ್ಯಾನೇಜರ್ ಬಸವರಾಜು ಎಂಬುವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಲ್ಲದೆ ಒಂದು ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.
ಇದರಿಂದ ನೊಂದ ಅಸಿಸ್ಟೆಂಟ್ ಮ್ಯಾನೇಜರ್ ಬಸವರಾಜು ದಾಬಸ್‌ಪೇಟೆ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಡಾಬಸ್‌ಪೇಟೆ ಪಿಎಸ್‌ಐ ಶ್ರೀನಿವಾಸ್ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಮಹೇಶ್ ಮತ್ತು ರೌಡಿಶೀಟರ್ ರಘುನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.







