ಕಾಂಗ್ರೇಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ

ಹನೂರು, ಜು.22: ಹನೂರು ವಿಧಾನಸಭಾ ವ್ಯಾಪ್ತಿಯ ಮಾರ್ಟಳ್ಳಿ ಜಿಲ್ಲಾ ಪಂಚಾಯತ್ ಸೇರಿದ ಊಗ್ಯಮ್ ಗ್ರಾಮ ಪಂಚಾಯತಿಗೆ ಸೇರಿದ ಕೂಡ್ಲೂರು, ನೆಲ್ಲೂರು, ಪೆದ್ದನ ಪಾಳ್ಯದ 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಬಿಜೆಪಿ ಪಕ್ಷವನ್ನುತೊರೆದು ಶಾಸಕ ನರೇಂದ್ರ ರಾಜು ಗೌಡರ ನೇತ್ರತ್ವದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ ಆದರು.
ಹನೂರು ಪಟ್ಟಣದಲ್ಲಿ ಏರ್ಪಡಿಸಿದ್ದ ಕಾಂಗ್ರೇಸ್ ಪಕ್ಷದ ಸೇರ್ಪಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಸಿದ್ದರಾಮಯ್ಯರವರ ನೇತ್ರತ್ವದ ಸರ್ಕಾರದಲ್ಲಿ ಆಗುತ್ತಿರುವ ಕುಡಿಯುವ ನೀರು ಯೋಜನೆ, ನಮ್ಮ ಗ್ರಾಮ ನಮ್ಮರಸ್ತೆ , ಕಾಂಗ್ರೇಸ್ ಪಕ್ಷದ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಾಗೂ ಈ ಸರ್ಕಾರದಿಂದ ಆಗುತ್ತಿರುವ ಅಭಿವೃದ್ದಿಗಳ ಮಹಾಪೂರವನ್ನು ಮನಗಂಡೂ ಈ ದಿನ ನೂರಾರು ಕಾರ್ಯಕರ್ತರು ಬಿಜೆಪಿ ಪಕ್ಷವನ್ನು ತೊರೆದು ನಮ್ಮ ಪಕ್ಷಕ್ಕೆ ಸೇರ್ಪಡೆ ಆಗಿದ್ಧಾರೆ ಎಂದು ಹೇಳಿದರು. ನಿಮ್ಮಯಾವುದೇ ವೈಯಕ್ತಿಕ ಕೆಲಸಗಳು ಅಥವಾ ಗ್ರಾಮದ ಕೆಲಸಗಳು ಇನ್ನಿತರ ಯಾವುದೇ ಕೆಲಸಗಳಿರಲಿ ನೀವು ನೇರವಾಗಿ ನನ್ನನ್ನು ಬೇಟಿಯಾಗಬಹುದು ಎಂದು ಹೇಳಿದರು.
ತಾಲೂಕ್ ಪಂಚಾಯತ್ ಅಧ್ಯಕ್ಷ ರಾಜೂ, ಸ್ಥಾಯೀ ಸಮಿತಿ ಅಧ್ಯಕ್ಷ ಜಾವಿದ್ ಅಹಮ್ಮದ್, ಪ.ಪಂ.ಉಪಾಧ್ಯಕ್ಷ ಬಸವರಾಜು ಮುಖಂಡರಾದ ಈಶ್ವರ್, ಪಂ. ಮಾಜಿ ಸದಸ್ಯ ಈಶ್ವರ್ ಮತ್ತಿತರರು ಇದ್ದರು.





