ನವಿಲಿನ ಹತ್ಯೆ ವಿಷಯದಲ್ಲಿ ಗುಂಪು ಘರ್ಷಣೆ

ಸಹಾರನಪುರ,ಜು.22: ಇಲ್ಲಿಯ ಗ್ರಾಮವೊಂದರಲ್ಲಿ ಶನಿವಾರ ರಾಷ್ಟ್ರಪಕ್ಷಿ ನವಿಲಿನ ಹತ್ಯೆ ಕುರಿತಂತೆ ಎರಡು ಗುಂಪುಗಳ ನಡುವೆ ಘರ್ಷಣೆಗಳು ನಡೆದಿವೆ.
ಶಂಶಾದ್ ಎಂಬಾತ ಸಾಕಿದ್ದ ನವಿಲು ಆಗಾಗ್ಗೆ ನೆರೆಯ ದೀಪೇಶ್‌ನ ಮನೆಯ ಟೆರೇಸ್‌ಗೆ ಹಾರಿ ಕಿರಿಕಿರಿಯನ್ನುಂಟು ಮಾಡುತ್ತಿತ್ತು ಮತ್ತು ಈ ಬಗ್ಗೆ ಅವರ ನಡುವೆ ಆಗಾಗ್ಗೆ ವಾಗ್ವಾದಗಳು ನಡೆದಿದ್ದವು.
ಶನಿವಾರ ಬೆಳಿಗ್ಗೆಯೂ ನವಿಲು ದೀಪೇಶ್‌ನ ಮನೆಯ ಟೆರೇಸ್ ಹತ್ತಿದ್ದು, ಕುಪಿತಗೊಂಡಿದ್ದ ಆತ ಕೋಲಿನಿಂದ ಅದಕ್ಕೆ ಹೊಡೆದು ಸಾಯಿಸಿದ್ದ. ಇದು ಎರಡು ಗುಂಪುಗಳ ನಡುವೆ ಘರ್ಷಣೆಗಳಿಗೆ ಕಾರಣವಾಗಿತ್ತು ಎಂದು ಹೆಚ್ಚುವರಿ ಎಸ್‌ಪಿ ಪ್ರಬಲ ಪ್ರತಾಪ ಸಿಂಗ್ ತಿಳಿಸಿದರು.
ದೀಪೇಶ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ನವಿಲಿನ ಮರಣೋತ್ತರ ಪರೀಕ್ಷೆಯ ಬಳಿಕ ಆತನ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಅವರು ಹೇಳಿದರು.
Next Story





