4 ವರ್ಷದ ಮೊಮ್ಮಗಳ ಗುಪ್ತಾಂಗವನ್ನು ಸುಟ್ಟ ಮಹಿಳೆ
ಕುಟುಂಬದಲ್ಲಿ ಗಂಡು ಮಗುವಿಲ್ಲದ ಕೋಪ

ಹರ್ಯಾಣ, ಜು.22: ಕುಟುಂಬದಲ್ಲಿ ಗಂಡು ಮಕ್ಕಳಿಲ್ಲವೆಂಬ ಕೋಪದಲ್ಲಿ 50 ವರ್ಷದ ಮಹಿಳೆಯೊಬ್ಬಳು 4 ವರ್ಷದ ಮೊಮ್ಮಗಳ ಗುಪ್ತಾಂಗವನ್ನು ಸುಟ್ಟ ಘಟನೆ ಹರ್ಯಾಣದ ಮೊಜುಖೇರಾ ಗ್ರಾಮದಲ್ಲಿ ನಡೆದಿದೆ.
10 ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿರ್ಸಾ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ನೀಡಲಾಗುತ್ತಿದೆ.
“ಬಾಲಕಿಯ ಅಜ್ಜಿ ತನ್ನ ಕುಟುಂಬದಲ್ಲಿ ಗಂಡು ಮಗು ಇರಬೇಕು ಎಂದು ಬಯಸಿದ್ದಳು. 10 ದಿನಗಳ ಹಿಂದೆ ತನ್ನ ಮುಂದೆ ಬಾಲಕಿ ಆಟವಾಡುತ್ತಿರುವುದನ್ನು ಕಂಡು ಕೋಪಗೊಂಡ ಆಕೆ ಬಾಲಕಿಯ ಗುಪ್ತಾಂಗಕ್ಕೆ ಸುಟ್ಟಿದ್ದಾಳೆ. ಈ ಬಗ್ಗೆ ನಾವು ಪೊಲೀಸರಿಗೆ ಮಾಹಿತಿ ನೀಡಿದೆವು” ಎಂದು ಮಕ್ಕಳ ರಕ್ಷಣಾ ಸಮಿತಿಯ ಗೀತಾ ಕತುರಿಯಾ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಎಸ್ಪಿ ವಿಜಯ್ ಕಕ್ಕರ್, ಈ ಬಗ್ಗೆ ಮಕ್ಕಳ ರಕ್ಷಣಾ ಸಮಿತಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದ್ದು, ಶೀಘ್ರವೇ ತಪ್ಪಿತಸ್ಥರನ್ನು ಬಂಧಿಸಲಿದ್ದೇವೆ ಎಂದಿದ್ದಾರೆ.
Next Story





