Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಮಲೆನಾಡಿಗರ ಬದುಕಲ್ಲಿ ದೋಣಿ

ಮಲೆನಾಡಿಗರ ಬದುಕಲ್ಲಿ ದೋಣಿ

ಕಲ್ಕುಳಿ ವಿಠಲ್ ಹೆಗಡೆಕಲ್ಕುಳಿ ವಿಠಲ್ ಹೆಗಡೆ22 July 2017 11:07 PM IST
share
ಮಲೆನಾಡಿಗರ ಬದುಕಲ್ಲಿ ದೋಣಿ

ಒಣಗಿ ಬಿದ್ದ ದೊಡ್ಡ ದೊಡ್ಡ ಮರಗಳು, ಹೊಳೆಯ ದಂಡೆಯಲ್ಲಿದ್ದ ಬಿದಿರಿನ ಮೆಳೆಗಳು ಪ್ರವಾಹದಲ್ಲಿ ತೇಲಿ ಬಂದು ದೋಣಿಗೆ ಢಿಕ್ಕಿ ಹೊಡೆಯುವುದಿರುತ್ತದೆ. ನೆರೆ ಹೊಳೆಯಲ್ಲಿ ತೇಲಿ ಬರುವ ಹಾವುಗಳು ದೋಣಿ ಹತ್ತುವ ಪ್ರಯತ್ನ ಮಾಡುತ್ತವೆ.

       ಕಲ್ಕುಳಿ ವಿಠಲ್ ಹೆಗಡೆ

ಮಳೆನಾಡಿನಲ್ಲಿ ಮಾರಿಗೊಂದು ಹಳ್ಳ, ಹೊಳೆ. ಓಡಾಡುವ ದಾರಿಗಳ ನಡುವೆ ಬರುವ ಹೊಳೆ, ಹಳ್ಳಗಳಿ ಗೆ ಸೇತುವೆಗಳನ್ನು ಕಟ್ಟಿ ಓಡಾಟ ಈಗ ಬಹುತೇಕ ಸುಗಮವಾಗಿದೆ.

ಐವತ್ತು ವರ್ಷಗಳ ಹಿಂದೆ ಶೃಂಗೇರಿಯಂತಹ ಪ್ರಮುಖ ಊರು ಗಳಿಗೇ ಮಳೆಗಾಲದಲ್ಲಿ ರಸ್ತೆ ಸಂಪರ್ಕವಿರಲಿಲ್ಲ.

ಮಳೆಗಾಲದ ಸಂಪರ್ಕವೆಂದರೆ ದೋಣಿಗಳು ಮಾತ್ರ. ಸ್ವತಂತ್ರ ಭಾರತದ ಸರಕಾರ ಬಂದ ಮೇಲೆ ತಾಲೂಕು ಅಭಿವೃದ್ಧಿ ಮಂಡಳಿಗಳು ಅಸ್ತಿತ್ವಕ್ಕೆ ಬಂದವು. ಜನಸಾಮಾನ್ಯರ ಅಗತ್ಯಗಳನ್ನು ಅಭಿವೃದ್ಧಿ ಪಡಿಸು ವುದು, ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ತಾಲೂಕು ಅಭಿವೃದ್ಧಿ ಮಂಡಳಿಯ ಜವಾಬ್ಧಾರಿಯಾಗಿತ್ತು. ಮಳೆನಾಡಿಗರ ಮಳೆಗಾಲದ ಪ್ರಮುಖ ಸಮಸ್ಯೆ ಎಂದರೆ ಹೊಳೆ ದಾಟುವುದು. ಹೊಳೆ ದಾಟಲು ಅಗತ್ಯವಾದ ದೋಣಿಗಳಿಗೆ ಸುಂಕ ವಿಧಿಸಲು ಹರಾಜು ಹಾಕುವುದು ತಾಲೂಕು ಬೋರ್ಡಿನದ್ದೇ ಕೆಲಸ ಆಗಿರುತ್ತಿತ್ತು. ತಾಲೂಕು ಬೋರ್ಡ್ ಕಾರ್ಯಭಾರದಲ್ಲಿ ಹೊಳೆಗೆ ದೋಣಿಹಾಕುವ ಹರಾಜಿನ ಪ್ರಕ್ರಿಯೆ ಬಹಳ ದೊಡ್ಡದು. ಮಾರ್ಚ್ ಮೂವತ್ತನೆ ತಾರೀಕು ವಾರ್ಷಿಕ ಆಯವ್ಯಯ ಮುಗಿದ ನಂತರ ಮುಂದಿನ ವರ್ಷದ ಮೊದಲನೆ ಕಾರ್ಯವೇ ದೋಣಿ ಹರಾಜು ಏರ್ಪಡಿಸುವುದು. ಅದು ತಾಲೂಕು ಅಭಿವೃದ್ಧಿ ಮಂಡಳಿಯ ಪ್ರಮುಖ ಆದಾಯ ಮೂಲವೂ ಹೌದು. ಜಾನುವಾರು ಜಾತ್ರೆ ಮುಗಿದ ಕೂಡಲೆ ದೋಣಿ ಹರಾಜು ದಿನ ಗೊತ್ತು ಮಾಡಲಾಗುತ್ತಿತ್ತು. ಆ ದಿನವನ್ನು ಸಾರ್ವಜನಿಕವಾಗಿ ಟಾಂ ಟಾಂ ಮಾಡಲಾಗುತ್ತಿತ್ತು.

ದೋಣಿಯ ಹರಾಜು ಊರಿನಲ್ಲಿ ದೊಡ್ಡ ಸುದ್ದಿ. ದೋಣಿ ದಾಟು ವವರೆಲ್ಲರಿಗೂ ಸಂಬಂಧಪಟ್ಟದಾದ್ದರಿಂದ ಹರಾಜಿನ ಬಗ್ಗೆ ಎಲ್ಲರಿಗೂ ಕುತೂಹಲವಿರುತ್ತಿತ್ತು.

ದೋಣಿಯ ಹರಾಜು ಹಲವು ಶ್ರೀಮಂತರ ಪ್ರತಿಷ್ಠೆಯ ಪ್ರಶ್ನೆ ಯಾದರೂ ಅದು ಜೂಜಿನ ಪಣದಂತೆ ಆಗಿಬಿಡುತ್ತಿತ್ತು. ಅದರಲ್ಲಿ ಶ್ರೀಮಂತಿಕೆಯ ಪ್ರತಿಷ್ಠೆ, ದಾಯಾದಿಗಳ ವೈಷಮ್ಯ, ಜಾತಿ, ವರ್ಗ, ಎಲ್ಲಾ ಅಂಶಗಳು ಬೆಳಕಿಗೆ ಬರುತ್ತಿದ್ದವು. ದೋಣಿ ಹರಾಜು ಹಿಡಿಯು ವವರು ಒಂದೊಂದು ಪಕ್ಷವಾಗಿ ಪೈಪೊಟಿ ನಡೆಸುತ್ತಿದ್ದರು. ತಾಲೂಕು ಬೋರ್ಡಿನವರು ತಮಗೆ ಆದಾಯ ಹೆಚ್ಚೆಚ್ಚು ಬರಲಿ ಎಂದು ಆ ವ್ಯಾಜ್ಯ ಗಳಿಗೆ ಉಪ್ಪು ಕಾರ ಹಾಕುತ್ತಿದ್ದರು. ಜನಸಾಮಾನ್ಯರಿಗೆ ಯಾರು ದೋಣಿ ಹರಾಜನ್ನು ಎಷ್ಟೆಷ್ಟಕ್ಕೆ ಹಿಡಿದು ದೋಣಿಯ ಸುಂಕ ಏರಿಸುತ್ತಾರೊ ಎಂಬ ಚಿಂತೆ. ಅದರಲ್ಲಿ ಕೆಲವು ಹರಾಜುದಾರರು ಸ್ವಂತ ದೋಣಿಗ ಳಿಲ್ಲದೆ ಯಾರ್ಯಾರಿಂದಲೋ ವೊಟ್ಟೆ ವೊಡಕು ಇರುವ ದೋಣಿಗಳನ್ನು ತಂದು ಹೊಳೆ ದಾಟುವವರ ಜೀವ ಹಿಂಡುತ್ತಿದ್ದರು. ಅಂತಹ ದೋಣಿಗಳಲ್ಲಿ ಜೀವ ಕೈಯಲ್ಲಿ ಹಿಡಿದು ಹೊಳೆ ದಾಟುವಂತಹ ಗೋಳು ಇರುತ್ತಿತ್ತು. ಹಳೆಯ ದೋಣಿ ಕೊಂಬುಗಟ್ಟಿದ್ದರೂ ಅಂತಹ ದೋಣಿಯಲ್ಲೇ ವರ್ಷವೆಲ್ಲ ಸುಧಾರಿಸುತ್ತಿದ್ದರು.

ಅದಕ್ಕಿಂತಲೂ ಮುಖ್ಯ ವಿಚಾರ ಏನೆಂದರೆ ಹರಾಜು ಹಿಡಿಯು ವವರು ದೋಣಿ ನಡೆಸುವವರಾಗಿರುತ್ತಿರಲಿಲ್ಲ. ಆ ಎಲ್ಲ ಗೋಳು ದೋಣಿ ನಡೆಸುವವನ ತಲೆಗೆ ಸುತ್ತುತ್ತಿತ್ತು. ದೋಣಿದಾಟಿಸಲು ಅನುಭವಿಗಳು ಪರಿಣಿತರೇ ಆಗಿರಬೇಕು. ಅಂತಹವರು ಕೆಲವೇ ಕೆಲವರು ದೋಣಿ ದಾಟಿಸುವು ದನ್ನು ತಮ್ಮ ಕಸುಬು ಮಾಡಿ ಕೊಂಡಿರುತ್ತಿದ್ದರು.

ಮಳೆಗಾಲದ ನೆರೆಯ ಹೊಳೆಯಲ್ಲಿ ದೋಣಿ ದಾಟುವುದೇ ಒಂದುವಿಶೇಷ ಅನುಭವ. ಈಚೆ ದಡದಿಂದ ಆಚೆ ದಡಕ್ಕೆ ಹೋಗಬೇಕೆಂ ದರೆ ಉಸಿರು ಬಿಗಿ ಹಿಡಿದು ದೋಣಿಯಲ್ಲಿ ಕೂರಬೇಕು. ಮಳೆ ಬಂದರೂ ಕೊಡೆ ಬಿಚ್ಚುವಂತಿಲ್ಲ. ಒಂದು ಕ್ಷಣ ಅಜಾಗ್ರತೆ ಮಾಡಿದರೆ ಅಥವಾ ಮಧ್ಯ ಹೊಳೆಯಲ್ಲಿ ದೋಣಿ ಹೋಗುವಾಗ ಗಾಳಿ ಬೀಸಿದರೆ ಆಚೆ ದಡದಲ್ಲಿರುವ ದಂಡೆಯನ್ನು ಬಿಟ್ಟು ಇನ್ನೊಂದಿಷ್ಟು ದೂರ ಕೆಳಗೆ ದೋಣಿ ಹೋಗಿಬಿಡುತ್ತಿತ್ತು. ಅಂತಹ ಸಂದರ್ಭದಲ್ಲಿ ದೋಣಿಯನ್ನು ಹಿಡಿತಕ್ಕೆ ತರಲು ಹರಸಾಹಸ ಮಾಡಬೇಕಾಗುತ್ತದೆ.

ಇನ್ನು, ಒಣಗಿ ಬಿದ್ದ ದೊಡ್ಡ ದೊಡ್ಡ ಮರಗಳು, ಹೊಳೆಯ ದಂಡೆಯಲ್ಲಿದ್ದ ಬಿದುರಿನ ಮೆಳೆಗಳು ನೆರೆ ಹೊಳೆಯಲ್ಲಿ ತೇಲಿ ಬಂದು ದೋಣಿಗೆ ಢಿಕ್ಕಿ ಹೊಡೆಯುವುದಿರುತ್ತದೆ. ಹೊಳೆಯಲ್ಲಿ ತೇಲಿ ಬರುವ ಹಾವುಗಳು ದೋಣಿ ಹತ್ತುವ ಪ್ರಯತ್ನ ಮಾಡುತ್ತವೆ. ಇಂತಹ ಅನೇಕ ಭೀಕರ ಅನುಭವಗಳು ಮಳೆಗಾಲದ ದೋಣಿ ದಾಟುವುದರಲ್ಲಿ ಇರುತ್ತದೆ.

ಇವೆಲ್ಲಕ್ಕಿಂತ ದೋಣಿಯಲ್ಲಿ ಇರುವಂತಹ ಅಸ್ಪಶ್ಯತೆಯ ಆಚರಣೆ ಬೇರೆ ಕಡೆ ಇಲ್ಲ. ದೋಣಿಯಲ್ಲಿ ಬ್ರಾಹ್ಮಣರೊಂದಿಗೆ ಬೇರಾವುದೇ ಕನಿಷ್ಠ ಜಾತಿಯ ಜನರು ಕುಳಿತು ದಾಟುವಂತಿರಲಿಲ್ಲ. ಬ್ರಾಹ್ಮಣರಲ್ಲದ ಬೇರೆ ಜಾತಿಯ ಶ್ರೀಮಂತರೇ ಆಗಿರಲಿ ಅವರಿಗೆ ಆಚೆ ಹೋಗುವ ಯಾವುದೇ ತುರ್ತಿರಲಿ ಅವರು ದೋಣಿಯಲ್ಲಿ ಮುಂಚಿತವಾಗಿಯೇ ಕುಳಿತಿದ್ದರೂ ಬ್ರಾಹ್ಮಣರು ಬಂದರೆ ಬಿಟ್ಟು ಇಳಿಯಬೇಕು. ಈ ಪದ್ಧತಿ ದೋಣಿ ಇರುವವರೆಗೂ ಕಟ್ಟು ನಿಟ್ಟಾಗಿ ಜಾರಿಯಲ್ಲಿತ್ತು.

ದೋಣಿಗಳನ್ನು ಸಾಮಾನ್ಯವಾಗಿ ಮಾವಿನ ಮರಗಳಿಂದ ಮಾಡು ತ್ತಿದ್ದರು. ದೋಣಿ ಮಾಡುವ ಮಾವಿನ ಮರಗಳು ಹತ್ತು ಜನರು ತಬ್ಬಿಕೊ ಳ್ಳುವಷ್ಟು ದಪ್ಪವಿರಬೇಕು. ಅಂತಹ ದೊಡ್ಡ ದೊಡ್ಡ ಮರಗಳನ್ನು ಕಡಿದು ಎರಡೂ ತುದಿಯನ್ನೂ ಚೂಪಾಗಿ ಕೆತ್ತಿ ಮಧ್ಯದ ಅಷ್ಟು ಭಾಗವನ್ನು ಕಡಿದು ತೋಡಿ ತೆಗೆಯುತ್ತಿದ್ದರು. ಅಂತಹ ದೋಣಿಗಳು ಹತ್ತು ವರ್ಷಗಳಿಗೂ ಹೆಚ್ಚು ಬಾಳಿಕೆ ಬರುತ್ತಿದ್ದವು.

ಸಮುದ್ರದಲ್ಲಿ ಬಳಸುವಂತಹ ದೋಣಿಗಳು ನಮ್ಮ ಸಿಹಿನೀರಿನ ಹೊಳೆಗಳಲ್ಲಿ ಬಾಳಿಕೆ ಬರುವುದಿಲ್ಲ. ಅಲ್ಲದೇ ನಮ್ಮ ಹೊಳೆಗಳ ವೇಗವಾದ ಹರಿವಿನ ಹೊಡೆತಕ್ಕೆ ಸರಿಯಾದ ರೂಪ ದಲ್ಲಿ ಇರಬೇಕಾಗುತ್ತಿತ್ತು. ಅಂದರೆ ಅಗಲವಾದ ದೋಣಿಗಳನ್ನು ಇಂತಹ ಹೊಳೆಗಳಲ್ಲಿ ದಾಟಿ ಸಲು ಆಗುವುದಿಲ್ಲ. ಮಳೆ ನಾಡಿನ ದೋಣಿಗಳೆಲ್ಲವೂ ಸಪೂರವಾಗಿ, ಉದ್ದವಾಗಿ, ಒಬ್ಬರ ಹಿಂದೆ ಒಬ್ಬರು ಕುಳಿತು ಕೊಳ್ಳುವಷ್ಟು ಮಾತ್ರ ಅಗಲವಾಗಿ ರಬೇಕು. ಅಂತಹ ದೋಣಿಗಳನ್ನು ನಿರ್ದಿಷ್ಟವಾದ ದೋಣಿ ಗಂಡಿಗಳೆಂದು ಕರೆಯುವಂತಹ ಜಾಗಗಳ ಲ್ಲಿ ಕಟ್ಟಿ ಹಾಕಿರುತ್ತಾರೆ. ಶೃಂಗೇರಿ ಯಂತಹ ಪುಟ್ಟ ತಾಲೂಕಿ ನಲ್ಲಿ ಮಠದ ದೋಣಿ ಗಂಡಿಯೂ ಸೇರಿ 6 ದೋಣಿ ಗಂಡಿಗಳಿ ದ್ದವು. ಆಗಿನ ದೋಣಿ ರೂಟ್‌ಗಳೆಂದರೆ ಕಾರ್ಕಿ- ಹುಂಬಳಗೆರೆ, ಹೊಳೆ ಹದ್ದು- ನೆಮ್ಮಾರು, ಎಡಗಲಿ- ನೆಮ್ಮಾರು, ಕರೆಮನೆ- ವಿದ್ಯಾರ ಣ್ಯಪುರ, ಕಾಗೆ ಹಿಂಡ್ಲು- ಶೃಂಗೇರಿ ಪೇಟೆ, ಪೊಡೂರು - ಅಡ್ಡಗದ್ದೆ ನಾರ್ವೆ- ಹೆಬ್ರಿ ಗುಂಡಿ ಮುಂತಾದವು. ಆ ದೋಣಿ ಗಂಡಿಗಳ ಎರಡೂ ದಡದಲ್ಲಿ ಬಸ್‌ಸ್ಟಾಪ್‌ಗಳಂತೆ ದೋಣಿ ಕೊಟ್ಟಿಗೆ ಇರುತ್ತಿತ್ತು. ದೋಣಿ ಕೊಟ್ಟಿಗೆಯಲ್ಲಿ ಸದಾ ಬೆಂಕಿ ಉರಿಯುತ್ತಲೇ ಇರುತ್ತಿತ್ತು. ಮಳೆಯಲ್ಲಿ ತೊಯ್ದು ಚಳಿ ಹಿಡಿದವರು ಮೈ ಕಾಯಿಸಿಕೊಳ್ಳುತ್ತಿದ್ದರು. ಇಲ್ಲದಿದ್ದರೆ ದೋಣಿಗಂಡಿಗೆ ಯಾರೂ ಬರದಿದ್ದಾಗ ದೋಣಿ ನಡೆಸುವವರು ತಮ್ಮ ಮೈಕೈ ಮತ್ತು ಸೂಡಿದ ಕಂಬಳಿಯನ್ನು ಒಣಗಿಸುತ್ತಾ ಕುಳಿತಿರುತ್ತಿದ್ದರು. ದೋಣಿ ದಾಟಬೇಕಾದವರು ಎದುರಿನ ದಡದಲ್ಲಿ ದೋಣಿ ಇದ್ದರೆ ಅದನ್ನು ಜೋರಾಗಿ ಕೂಗಿ ಕರೆಯಬೇಕಾಗಿತ್ತು. ಮಳೆಯ ಸದ್ದು, ಹೊಳೆಯ ಸದ್ದಿನಿಂದಾಗಿ ಸಣ್ಣದಾಗಿ ಕೂಗಿದರೆ ಅದು ಆಚೆಯ ದಡಕ್ಕೆ ತಲುಪುತ್ತಿರಲಿಲ್ಲ.

ಸಾಮಾನ್ಯವಾಗಿ ದೋಣಿ ನಡೆಸುವವರು ಹೊಳೆಯ ದಡಗಳಲ್ಲೇ ವಾಸಿಸುವವರಾಗಿರುತ್ತಾರೆ. ಅವರು ಮನೆಗಳಿಗೆ ಹೋಗಿ ಕುಳಿತರೆ ಇನ್ನಷ್ಟು ಜೋರು ಕೂಗು ಹಾಕಬೇಕಾಗುತ್ತದೆ. ಹಾಗಾಗಿ ಮಲೆನಾಡಿನ ಜನ ಜೋರಾಗಿ ಕೂಗು ಹಾಕುವುದನ್ನು ಅಭ್ಯಾಸ ಮಾಡಿಕೊಂಡಿ ರುತ್ತಾರೆ. ಮೆತ್ತಗೆ ಮಾತಾಡುವ ಮಲೆನಾಡಿನ ಜನ ಕಾಡಿನಲ್ಲಿ ಮಾತ್ರ ಕಾಣದ ಜಾಗಗಳಲ್ಲಿ ಪರಸ್ಪರ ಕೂಗು ಹಾಕಿಕೊಂಡು ತಾವಿರುವ ಜಾಗವನ್ನು ದೃಢೀಕರಿಸುತ್ತಾರೆ.

ಬ್ರಿಟಿಷರು ಮಲೆನಾಡಿಗರ ಕೂಗನ್ನು ಬಳಸಿಕೊಂಡು ಕೂಗಳತೆಯ ಸರ್ವೇ ಯನ್ನು ಜಾರಿಗೆ ತಂದಿದ್ದರು. ಮಲೆನಾಡಿನ ಗುಡ್ಡಗಳನ್ನೆಲ್ಲ ಅಳೆದು ಸರ್ವೇ ಮಾಡುವಾಗ ಗಿಡ, ಮರ, ಕಣಿವೆ, ಗುಂಡಿ, ಹಳ್ಳ ಕಾಡುಗಳಲ್ಲಿ ತಮ್ಮ ಅಳತೆಯ ಚೈನು ಹಿಡಿಯಲಾಗದೆ ಕೂಗಳತೆಯ ಮೂಲಕ ಬಾಂದ್ ಗುರುತಿಸು ತ್ತಿದ್ದರು. ಕೂಗು ಅಳತೆ ಎಂದರೆ ಪರಸ್ಪರ ಇಬ್ಬರು ದೂರದೂರದ ಒಂದು ಜಾಗದಲ್ಲಿ ನಿಂತು ಕೂಗುವುದು. ಆ ಕೂಗು ಮತ್ತೊಬ್ಬನ ಕಿವಿಗೆ ಸ್ಪಷ್ಟವಾಗಿ ಕೇಳಿಸಬೇಕು. ಅದಕ್ಕೆ ಪ್ರತಿಕ್ರಿಯೆಯಾಗಿ ಮತ್ತೊಬ್ಬನು ಕೂಗಬೇಕು. ಪರಸ್ಪರ ಇಬ್ಬರೂ ಕೂಗಿದ್ದು ಕೇಳಿಸಿದ ನಡುವಿನ ಜಾಗ ಎಷ್ಟು ಎಕರೆ ಎಂದು ಆ ಎರಡೂ ಜಾಗಗಳಿಗೆ ಬಾಂದಿನ ಗುರುತುಗಳನ್ನು ಮಾಡುತ್ತಿದ್ದರು. ಅದಕ್ಕೆ ಕೂಗು ಅಳತೆ ಎಂದು ಹೇಳುತ್ತಿದ್ದರು.

ಮಳೆನಾಡಿನ ಕಾಡುಗಳಲ್ಲಿ ಹತ್ತಿರದಲ್ಲೇ ಇರುವವರನ್ನು ಪತ್ತೆ ಮಾಡಲಾಗುವುದಿಲ್ಲ. ಅದಕ್ಕಾಗಿ ಕೂಗು ಹಾಕುವ ಅಭ್ಯಾಸ ಇಟ್ಟು ಕೊಂಡಿರುತ್ತಾರೆ. ಆದರೆ ದೋಣಿ ಕೂಗು ವಿಶೇಷವಾಗಿ ರುತ್ತದೆ. ಆ ಕೂಗನ್ನು ಹಾಕಲು ಬಾರದ ಹೆಂಗಸರು ಮಕ್ಕಳು ಕೂಗು ಹಾಕುವವರು ಬರುವವರೆಗೂ ಕಾಯುವುದು ಅನಿವಾರ್ಯವಾಗಿತ್ತು. ದೋಣಿ ದಾಟಲು ವರುಷವೆಲ್ಲ ಒಂದು ದರ ನಿಗದಿಯಾಗಿರುತ್ತಿತ್ತು. ಅದು ಅಪರೂಪಕ್ಕೆ ಬರುವ ನೆರೆ ಹೊಳೆಗೆ ಮಾಮೂಲಿ ದರದ ನಾಲ್ಕು- ಐದು ಪಟ್ಟು ಹೆಚ್ಚಾಗಿರುತ್ತಿತ್ತು. ನೆರೆ ಹೊಳೆಯಲ್ಲಿ ಅನಿವಾರ್ಯವಾ ದವರು ಮಾತ್ರ ಓಡಾಡುತ್ತಿದ್ದರು. ಅಂತಹ ನೆರೆ ಹೊಳೆಯ ದೋಣಿ ದಾಟುವುದನ್ನು ದುಬಾರಿ ದೋಣಿ ಎನ್ನುತ್ತಿದ್ದರು.

ಹೆಚ್ಚು ನೆರೆ ಬಂದಾಗ ಆ ದುಬಾರಿ ದೋಣಿಯನ್ನು ದಿನಕ್ಕೆ ಒಂದೋ ಎರಡು ಬಾರಿ ಓಡಿಸಲಾಗುತ್ತಿತ್ತು. ದುಬಾರಿ ದೋಣಿ ದಾಟಬೇಕಾದರೆ ಎಲ್ಲರೂ ದುಡ್ಡು ಕೊಟ್ಟೇ ದಾಟಬೇಕಾಗಿತ್ತು. ಆ ದೋಣಿ ಅಪಾಯಕಾರಿ ಯೂ ಮತ್ತು ತುಂಬಾ ಸಾಹಸ ಶ್ರಮ ಪಡುವ ದೋಣಿಯಾದ್ದರಿಂದ ಅಂತಹ ದಿನಗಳಲ್ಲಿ ದೋಣಿ ಗುತ್ತಿಗೆ ಮಾಡಿಕೊಂಡಂತವರನ್ನೂ ಸಹ ದುಡ್ಡಿಲ್ಲದೆ ದೋಣಿ ದಾಟಿಸುತ್ತಿರಲಿಲ್ಲ. ಮಾಮೂಲಿ ಐದು ಹತ್ತು ಪೈಸೆ ಇದ್ದದ್ದು ನಾಲ್ಕಾಣೆಯಷ್ಟು ದುಬಾರಿಯಾಗಿರುತ್ತಿತ್ತು. ಡಾಕ್ಟರು, ಪಂಡಿತರಿಂದ ಕಾಯಿಲೆಗೆ ಔಷಧ ತರಬೇಕಾದವರು, ನೆಂಟರ ಮನೆಗೆ ಬಂದು ವಾಪಸ್ ಹೋಗಬೇಕಾದವರು ಮುಂತಾದ ಅನಿವಾರ್ಯವಾದಂತಹವರು ಮಾತ್ರ ಆ ದಿನಗಳಲ್ಲಿ ದೋಣಿಯಲ್ಲಿ ಹೊಳೆ ದಾಟುತ್ತಿದ್ದರು. ದೋಣಿಯಲ್ಲಿ ಅಪರೂಪಕ್ಕೆ ಓಡಾಡುವವರು ಮಾತ್ರ ಹಣ ಕೊಟ್ಟು ದಾಟುತ್ತಿದ್ದರು.

ಖಾಯಮ್ಮಾಗಿ ಓಡಾಡುವವರು, ಶಾಲೆಗೆ ಹೋಗುವ ಮಕ್ಕಳಿದ್ದಮನೆಯವರು, ಗುತ್ತಿಗೆ ರೂಪದಲ್ಲಿ ವರ್ಷಕ್ಕೊಮ್ಮೆ ಭತ್ತ ಅಳೆಯು ತ್ತಿದ್ದರು. ಅದಕ್ಕೆ ದೋಣಿ ಭತ್ತ ಎಂದು ಹೆಸರು. ದೋಣಿ ಭತ್ತವಲ್ಲದೆ, ದೋಣಿ ನಡೆಸುವವರಿಗೆ ಗೌರಿ ಹಬ್ಬಕ್ಕೆ ಮನೆಗೊಂದು ತೆಂಗಿನ ಕಾಯಿ ಕೊಡಬೇಕಾಗಿತ್ತು. ಈ ರೀತಿ ದೋಣಿಯವರಿಗೂ, ದೋಣಿ ದಾಟುವವರಿಗೂ ಅನಿವಾರ್ಯ ಸಂಬಂಧಗಳು ಇರುತ್ತಿದ್ದವು.

ತಾಲೂಕು ಬೋರ್ಡಿನವರ ನಿಯಮದಂತೆ ಜನರನ್ನು ಹೊಳೆ ದಾಟಿಸಬೇಕಾಗಿದ್ದರೂ ದೋಣಿಯವರ ಒಪ್ಪಿಗೆ ಇಲ್ಲದೆ ಯಾರಿಗೂ ಹೊಳೇ ದಾಟಲು ಸಾಧ್ಯವಿರಲಿಲ್ಲ. ದೋಣಿಗೆ ದುಡ್ಡಿಲ್ಲದವರು ದೋಣಿ ಯವನೊಂದಿಗೆ ಸಾಲ ಕೇಳಿ ಅದನ್ನು ಸರಿಯಾಗಿ ತೀರಿಸಲಾಗದವರು ಮೂರು ತಿಂಗಳಾದರೂ ಕ್ಷೌರ, ಗಡ್ಡ ಮಾಡಿಕೊಳ್ಳಲಾಗದೆ ಬೈರಾಗಿ ಗಳಂತೆ ಮನೆಯಲ್ಲೇ ಇರುತ್ತಿದ್ದರು. ಹಾಗೂ ಒಂದು ವೇಳೆ ಹೊಳೆ ದಾಟಲೇ ಬೇಕಂದಾದರೆ ದೋಣಿ ಗಂಡಿಯಲ್ಲಿ ದೋಣಿ ನಡೆಸುವ ವರ ಮರ್ಜಿಗಾಗಿ ಸುಮ್ಮನೆ ಕೂತಿರುತ್ತಿದ್ದರು. ದೋಣಿ ನಡೆಸುವ ವರು ಬೇಕಂತಲೇ ಎರಡು ಮೂರು ಸಾರಿ ಆಚೆ ಈಚೆ ಓಡಿಸಿದರೂ ಪುಕ್ಕಟೆ ಓಡಾಡುವವರನ್ನು ಮಾತಾಡಿಸುತ್ತಿರಲಿಲ್ಲ.

ಸ್ವಲ್ಪ ಹೊತ್ತು ಕಾಯಿಸಿದ ಮೇಲೆ ಆ ದಿನವೂ ದುಡ್ಡು ತರದಿ ದ್ದವರಿಗೆ ಎಚ್ಚರಿಕೆ ಕೊಟ್ಟು ಬಹಳ ಹೊತ್ತು ಸತಾಯಿಸಿ ನಂತರ ಹೊಳೆ ದಾಟಿಸುತ್ತಿದ್ದರು.

ದೋಣಿ ನಡೆಸುವವರೂ ಎಲ್ಲರಿಗೂ ಅಚ್ಚುಮೆಚ್ಚಿನವ ರಾಗಿರುತ್ತಿ ದ್ದರು. ದೋಣಿ ನಡೆಸುವುದು ನಾಜೂಕಿನಷ್ಟೇ ಅಪಾಯದ ವೃತ್ತಿಯೂ ಆಗಿದೆ. ಹೆಚ್ಚು ಕಡಿಮೆಯಾದರೆ ದೋಣಿ ಮಗುಚಿದ ಉದಾಹರಣೆಗಳು ಉಂಟು. ಸದಾ ನೀರಿನ ಥಂಡಿಯಲ್ಲಿರುವ ದೋಣಿ ನಡೆಸುವವರ ಕಾಲಿಗೆ ಒಂದು ಅಪರೂಪವಾದ ರೋಗ ಬರುತ್ತದೆ. ಅದರಿಂದ ಅವರು ತುಂಬ ಹಿಂಸೆ ಅನುಭವಿಸುತ್ತಾರೆ.

ಮೂರು ಹೊತ್ತು ಥಂಡಿಯಲ್ಲಿಯೇ ಇರುವುದರಿಂದ ದೋಣಿ ನಡೆಸುವವರ ಕಾಲಿನ ಚರ್ಮ ಕೊಳೆಯುತ್ತಲೇ ಇರುತ್ತದೆ. ಕಾಲು ಒಣಗಿದರೆ ತುರಿಕೆ ಶುರುವಾಗುತ್ತದೆ. ಆ ತುರಿಕೆಯನ್ನು ತಡೆಯಲು ಸಾಧ್ಯವೇ ಇಲ್ಲ. ಅದಕ್ಕಾಗಿ ಅವರು ಕರೆ ಹಿಡಿಯುವಂತಹ ಎಣ್ಣೆಗಳನ್ನು ಮತ್ತು ಗೊದ್ದಮಟೆ ಮರದ ಸಿಪ್ಪೆಯನ್ನು ಜಜ್ಜಿ ಬೇಯಿಸಿ ಅದನ್ನು ಕಾಲಿಗೆ ಬಳಿದುಕೊಳ್ಳುತ್ತಾರೆ. ಆ ಔಷಧವು ಪಾದದ ಚರ್ಮಕ್ಕೆ ಅಂಟಿಕೊಳ್ಳುತ್ತದೆ. ಅಲ್ಲದೆ ಗೇರುಬೀಜಗಳನ್ನು ಸುಟ್ಟು ಅದರ ಎಣ್ಣೆಯನ್ನು ಸದಾ ಲೇಪಿಸಿಕೊಳ್ಳುತ್ತಾರೆ ಮತ್ತು ದೋಣಿಯ ಒಳ ಮತ್ತು ಹೊರಮೈಗೆ ಅದೇ ಗೇರು ಎಣ್ಣೆಯನ್ನು ಬಳಿಯುತ್ತಾರೆ.

ನಾನು ಚಿಕ್ಕಂದಿನಲ್ಲಿ ಶಾಲೆಗೆ ಹೋಗುವಾಗ ನಮ್ಮ ಟೀಚರ್ ಒಬ್ಬರು ಯಾವಾಗಲೂ ಹಾಡುವ ಹಾಡೊಂದಿತ್ತು. ಅದು ‘ಅಂಬಿಗ ನಾ ನಿನ್ನ ನಂಬಿದೆ’ ಎಂಬುದು. ಆ ಹಾಡನ್ನು ರಾಗವಾಗಿ ಹಾಡುತ್ತಿದ್ದಾಗ ನಾವೆಲ್ಲ ಅಂದು ಪೇಟೆಯಿಂದ ದಿನವು ದೋಣಿ ದಾಟಿ ಶಾಲೆಗೆ ಬರುತ್ತಿದ್ದ ನಮ್ಮ ಮೇಡಮ್ ದೋಣಿ ನಡೆಸುವವನ ಕುರಿತಾಗಿಯೇ ಹಾಡುತ್ತಾರೆ ಎಂದು ಮಾತನಾಡಿಕೊಳ್ಳುತ್ತಿದ್ದೆವು. ಏಕೆಂದರೆ ಆತ ಆಗ ದೋಣಿ ದಾಟಿಸದಿದ್ದರೆ ನಮ್ಮ ಶಾಲೆಯೇ ನಡೆಯುತ್ತಿರಲಿಲ್ಲ. ನಮ್ಮ ಟೀಚರ್ ಅವರಷ್ಟೇ ದೋಣಿ ದಾಟಿಸುವವರು ಸಹ ನಮ್ಮ ಶಾಲೆ ನಡೆಯಲು ಮುಖ್ಯವಾಗಿದ್ದರು. ಆಗ ಸುಬ್ಬಣ್ಣ ಎನ್ನುವವರು ದೋಣಿ ದಾಟಿಸುತ್ತಿದ್ದರು.

ಅವರಿಗೆ ದೋಣಿ ಸುಬ್ಬಣ್ಣನೆಂದೇ ಹೆಸರು. ಅಂತೆಯೇ ದೋಣಿ ನಾರಾಯಣ, ಸೇಸ, ಶಿವಪ್ಪ ಎಂಬ ದೋಣಿ ಡ್ರೈವರ್‌ಗಳ ಹೆಸರು ನನಗೆ ನೆನಪಿದೆ. ನೆಮ್ಮಾರಿನಲ್ಲಿ ದೋಣಿ ನಡೆಸುತ್ತಿದ್ದವರು ಮುಸ್ಲಿಮರು.

ನಾನು ಸುಬ್ಬಣ್ಣನ ದೋಣಿಯಲ್ಲಿ ಅನೇಕ ವರ್ಷ ಹೊಳೆ ದಾಟು ತ್ತಿದ್ದು ಅವರಿಂದ ದೋಣಿ ನಡೆಸುವುದನ್ನೂ ಕಲಿತುಕೊಂಡಿದ್ದೆ. ನಾನು ಕಾಲೇಜಿಗೆ ಹೋಗುವವರೆಗೂ ನಮ್ಮೂರಿಗೆ ಸೇತುವೆಯೇ ಇರಲಿಲ್ಲ. ದೋಣಿಯೇ ನಮ್ಮ ಏಕೈಕ ಸಂಪರ್ಕ ಸೇತುವೆಯಾಗಿತ್ತು.

ಮಲೆನಾಡಿನ ಬದುಕಿನಲ್ಲಿ ಹೊಳೆ ದಾಟಿಸುವ ದೋಣಿಗಳ ಕಥಾನಕವು ಸಾಹಸಮಯ, ಅಪಾಯಕಾರಿ ಹಾಗೂ ಮನುಷ್ಯ ಬದುಕಿನ ಕಷ್ಟ-ಸುಖಗಳ ವಿಸ್ತರಣೆಯೇ ಆಗಿದ್ದವು. ಕಡುಕಂದು ಬಣ್ಣದಿಂದ ರಭಸವಾಗಿ ಹರಿಯುವ ಮಲೆನಾಡಿನ ಹೊಳೆಗಳಲ್ಲಿ ದೋಣಿಗಳು ಇತ್ತೀಚೆಗೆ ಅಪರೂಪವಾಗುತ್ತಿವೆ.

      

share
ಕಲ್ಕುಳಿ ವಿಠಲ್ ಹೆಗಡೆ
ಕಲ್ಕುಳಿ ವಿಠಲ್ ಹೆಗಡೆ
Next Story
X