ಶಾರುಖ್, ಬಚ್ಚನ್, ದೇವಗನ್‌ಗೆ ಇಡಿ ನೊಟೀಸು

ಮುಂಬೈ, ಜು. 22: ಇದುವರೆಗೆ ನಟ ಶಾರುಖ್ ಖಾನ್ ಮಾತ್ರ ಜ್ಯಾರಿ ನಿರ್ದೇಶನಾಲಯದ ಪಶ್ನೆಯ ಸುರಿಮಳೆಗೆ ಉತ್ತರಿಸುತ್ತಿದ್ದರು. ಆದರೆ, ಈಗ ಬಚ್ಚನ್ ಕುಟುಂಬ ಹಾಗೂ ಅಜಯ್ ದೇವಗನ್ ಜ್ಯಾರಿ ನಿರ್ದೇಶನಾಲಯದ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ.
ಕಳೆದ 13 ವರ್ಷಗಳ ವಿದೇಶಿ ವಿನಿಮಯ ರವಾನೆ ಕುರಿತು ವಿವರವನ್ನು ಹಂಚಿಕೊಳ್ಳುವಂತೆ ಸರಕಾರದ ಸಂಸ್ಥೆ ಬಚ್ಚನ್ ಕುಟುಂಬದ ಎಲ್ಲ ಸದಸ್ಯರಿಗೆ ನೋಟಿಸ್ ಜಾರಿ ಮಾಡಿದೆ. ವಿದೇಶಿ ವಿನಿಮಯ ರವಾನೆ ಕುರಿತು ಮಾಹಿತಿ ನೀಡುವಂತೆ ಬಾಲಿವುಡ್‌ನ ಆ್ಯಕ್ಷನ್ ನಟ ಅಜಯ್ ದೇವಗನ್‌ಗೆ ಕೂಡ ಜಾರಿ ನಿರ್ದೇಶನಾಲಯ ನೊಟೀಸು ನೀಡಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ ಕಲಂ 37ರ ಅನ್ವಯ ಅಮಿತಾಭ್ ಬಚ್ಚನ್, ಪತ್ನಿ ಜಯಾ, ಪುತ್ರ ಅಭಿಷೇಕ್, ಸೊಸೆ ಐಶ್ವರ್ಯಾ ರೈ ಹಾಗೂ ದೇವಗನ್‌ಗೆ ನೋಟಿಸ್ ಜಾರಿ ಮಾಡಲಾಗಿದೆ.
2004ರಲ್ಲಿ ರಿಸರ್ವ್ ಬ್ಯಾಂಕ್ ಉದಾರವಾದಿ ರವಾನೆ ಯೋಜನೆ (ಎಲ್‌ಆರ್‌ಎಸ್) ಪರಿಚಯಿಸಿತ್ತು. ಅಲ್ಲಿಂದ ಬಚ್ಚನ್ ಹಾಗೂ ಅವರ ಕುಟುಂಬ ತಮ್ಮ ವಿದೇಶಿ ರವಾನೆ ಯನ್ನು ಬಹಿರಂಗಗೊಳಿಸುತ್ತಿತ್ತು. ಅವರ ಎಲ್ಲ ಹಣ ವರ್ಗಾವಣೆ ಬ್ಯಾಂಕ್‌ನ ಚಾನೆಲ್‌ಗಳ ಮೂಲಕವೇ ನಡೆಯುತ್ತಿದೆ ಎಂದು ಬಾಲಿವುಡ್‌ನ ವ್ಯಕ್ತಿಯೋರ್ವರು ಹೇಳಿದ್ದಾರೆ.







