Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಡಿಜಿಟಲ್ ಲೋಕದಲ್ಲಿ ಕನ್ನಡ ಬಳಸುವಲ್ಲಿನ...

ಡಿಜಿಟಲ್ ಲೋಕದಲ್ಲಿ ಕನ್ನಡ ಬಳಸುವಲ್ಲಿನ ಆಲಸ್ಯ

ಡಿಜಿಟಲ್ ಕನ್ನಡ

ಎ. ಸತ್ಯನಾರಾಯಣಎ. ಸತ್ಯನಾರಾಯಣ23 July 2017 2:41 PM IST
share
ಡಿಜಿಟಲ್ ಲೋಕದಲ್ಲಿ ಕನ್ನಡ ಬಳಸುವಲ್ಲಿನ ಆಲಸ್ಯ

ಬ್ಯಾಂಕಿನ ಎಟಿಎಂನಿಂದ ಹಣವನ್ನು ಹೊರತೆಗೆಯುವಾಗ ಆ ಎಟಿಎಂ ಯಂತ್ರವು ಗ್ರಾಹಕರೊಂದಿಗೆ ಸಂವಹನ ಮಾಡುತ್ತದೆ. ಕೆಲವೊಂದು ಬ್ಯಾಂಕ್‌ಗಳ ಎಟಿಎಂಗಳ ಸಂವಹನ ಭಾಷೆಗಳು ಇಂಗ್ಲಿಷ್ ಮತ್ತು ಹಿಂದಿ ಎರಡೇ ಆಗಿರುತ್ತವೆ. ಹಲವು ಎಟಿಎಂಗಳಲ್ಲಿ ಕನ್ನಡವನ್ನೂ ಸಹ ಅಳವಡಿಸಲಾಗಿದೆ. ಆರಂಭದಲ್ಲಿ, ನಿಮ್ಮ ಭಾಷೆಯನ್ನು ಆಯ್ಕೆಮಾಡಿಕೊಳ್ಳಿ ಎಂದು ಹೇಳುತ್ತಾ ಕನ್ನಡ, ಹಿಂದಿ ಮತ್ತು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಒದಗಿಸುತ್ತದೆ. ಆಗ, ನಾವು ಎಷ್ಟು ಜನ ಕನ್ನಡ ಭಾಷೆಯನ್ನು ಆಯ್ಕೆಮಾಡಿಕೊಳ್ಳುತ್ತೇವೆ? ಇಂಗ್ಲಿಷ್‌ನ್ನು ಆಯ್ದುಕೊಂಡಿರುವವರಿಗೆ ಹೋಲಿಸಿದರೆ ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಅತ್ಯಂತ ಕಡಿಮೆ ಇರುವುದನ್ನು ಅಂಕಿಅಂಶಗಳು ಸಾರಿ ಹೇಳುತ್ತಿವೆ. ಇದರಿಂದ, ಕನ್ನಡಿಗರು ಕನ್ನಡವನ್ನು ತಮ್ಮ ಆಯ್ಕೆಯ ಭಾಷೆಯನ್ನಾಗಿ ಬಳಸುವುದಿಲ್ಲ ಎಂಬ ಸಂದೇಶವು ಬ್ಯಾಂಕಿಗೆ ಹೋಗಿರುವುದು ಖಚಿತ. ಹೀಗಾಗಿ, ಕನ್ನಡಿಗರಿಗೆ ಭಾಷಾ ಸವಲತ್ತುಗಳನ್ನು ನೀಡುವುದು ವ್ಯರ್ಥ ಎಂಬ ನಿರ್ಣಯಕ್ಕೆ ಬ್ಯಾಂಕು ಗಳು ಬರುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ. ಹೊಸ ಹೊಸ ಸೌಲಭ್ಯಗಳ ತಂತ್ರಾಂಶವನ್ನು ಸಿದ್ಧಪಡಿಸುವಾಗ ಬ್ಯಾಂಕುಗಳು ಸಹಜ ವಾಗಿ ಕನ್ನಡವನ್ನು ಕೈಬಿಡುತ್ತವೆ. ನಮ್ಮ ಅಭಿಮಾನ ಶೂನ್ಯತೆಯು ಭಾಷಾ ಸವಲತ್ತುಗಳನ್ನು ಒದಗಿಸುವ ಸಂಕಲ್ಪಗಳಿಗೆ ಕಡಿವಾಣವನ್ನು ಹಾಕುತ್ತವೆ ಎನ್ನುವುದನ್ನು ನಾವು ಇಲ್ಲಿ ತಿಳಿದುಕೊಳ್ಳಬೇಕು.

ಬಹುತೇಕ ಎಲ್ಲ ಸ್ಮಾರ್ಟ್‌ಫೋನ್‌ಗಳು ಯುನಿಕೋಡ್ ಫಾಂಟ್ ತಂತ್ರಜ್ಞಾನ ಸಹಿತ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳನ್ನು ಇಂಟರ್‌ಫೇಸ್ ಭಾಷೆಯನ್ನಾಗಿ ನಿಗದಿಪಡಿಸಿಕೊಳ್ಳುವ ಸೌಲಭ್ಯ ನೀಡಿದ್ದಾರೆ. ಎಲ್ಲೆಲ್ಲಿ ಪಠ್ಯ (ಟೆಕ್ಟ್ಸ್) ಸಂದೇಶಗಳನ್ನು ಮೂಡಿಸುವ ಅವಕಾಶವಿದೆಯೋ ಅಲ್ಲೆಲ್ಲಾ ಕನ್ನಡವನ್ನು ಬಳಸುವ ಸೌಲಭ್ಯವು ಈಗ ಜಾಗತಿಕವಾಗಿ ದೊರೆಯುತ್ತಿದೆ. ಇಂತಹ ಸೌಲಭ್ಯಗಳನ್ನು ಬಳಸಿಕೊಳ್ಳುವುದರಲ್ಲಿ ನಾವು ಹಿಂದೆ ಬಿದ್ದರೆ, ಮುಂದೆ ಲಭ್ಯವಾಗುವ ಸೌಲಭ್ಯಗಳಿಗೆ ಕತ್ತರಿ ಬೀಳುವ ಸಾಧ್ಯತೆಗಳು ಇಲ್ಲದಿಲ್ಲ.

ಸ್ಮಾರ್ಟ್‌ಫೋನುಗಳಲ್ಲಿ ಕನ್ನಡ ಭಾಷೆಯ ಎಸ್ಸೆಮ್ಮೆಸ್ಸುಗಳನ್ನು ಇಂಗ್ಲಿಷ್‌ಲಿಪಿಯಲ್ಲಿ ಕಳುಹಿಸಿದರೆ ಅಂತಹ ಮೆಸೇಜ್‌ಗಳನ್ನು ‘ಕಂಗ್ಲಿಷ್ ಮೆಸೇಜ್’ಗಳು ಎನ್ನಲಾಗಿದೆ. ಡಿಜಿಟಲ್ ಲೋಕದಲ್ಲಿನ ಬಹುತೇಕರು ಇಂದಿಗೂ ಕಂಗ್ಲಿಷ್ ಮೆಸೇಜ್‌ಗಳನ್ನು ಕಳುಹಿಸುವು ದನ್ನು ಬಿಟ್ಟಿಲ್ಲ. ಅದು ಕಂಪ್ಯೂಟರ್ ಅಥವಾ ಸ್ಮಾರ್ಟ್ ಫೋನ್‌ನ ಇಂಗ್ಲಿಷ್ ಕೀಬೋರ್ಡ್ ಬಳಸಿ ಕಳುಹಿಸಿದ ಕನ್ನಡದ ಚುಟುಕು ಟೆಕ್ಸ್ಟ್ ಮೆಸೇಜ್‌ಗಳಾಗಿದ್ದರೆ ಅದು ಸಹನೀಯ. ಆದರೆ, ಉದ್ದುದ್ದದ ಕಂಗ್ಲಿಷ್‌ಮೆಸೇಜ್‌ಗಳನ್ನು ಓದುವುದು ಅನಿವಾರ್ಯವೇನಲ್ಲ ಮತ್ತು ಅಂಥದ್ದನ್ನು ಓದುವ ತಾಳ್ಮೆ ಇಂದು ಯಾರಲ್ಲೂ ಸಹ ಉಳಿದಿಲ್ಲ ಎಂಬುದು ಸತ್ಯ. ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಕನ್ನಡಾಭಿಮಾನವನ್ನು ಪ್ರಸರಿಸುವ ಮೆಸೇಜ್‌ಗಳೂ ಸಹ ಕಂಗ್ಲಿಷ್‌ನಲ್ಲಿರುವುದು ವಿಪ ರ್ಯಾಸವೇ ಸರಿ. ಕನ್ನಡಾಭಿಮಾನಿ ಗ್ರೂಪ್ ಸದಸ್ಯರು ‘‘ವಿಶ್ವದ ಪ್ರತಿಷ್ಠಿತ ಮೊಬೈಲ್ ಕಂಪೆನಿ ಆ್ಯಪಲ್ ಕೂಡ ಕನ್ನಡದ ಅವತರಣಿಕೆ ಯನ್ನು ಬಿಡುಗಡೆ ಮಾಡಿದ್ದರೂ, ಕನ್ನಡ ಸಂದೇಶವನ್ನು ಇಂಗ್ಲಿಷ್ ನಲ್ಲಿ ಕಳುಹಿಸಿರುವ ನಿಮಗೆ ನನ್ನ ದೊಡ್ಡ ಸಲಾಮು’’ ಎಂದು ಕುಟುಕಿರುವುದೂ ಉಂಟು. ಇಂತಹ ಗ್ರೂಪ್‌ಗಳಲ್ಲಿ ‘‘ಕನ್ನಡ ಸಂದೇಶ ಗಳು ಕನ್ನಡ ಲಿಪಿಯಲ್ಲಿಯೇ ಇರಲಿ’’ ಎಂಬ ಹಕ್ಕೊತ್ತಾಯಗಳಿಗೂ ಕೊರತೆಯಿಲ್ಲ. ಇಂಗ್ಲಿಷ್‌ನ್ನು ಇಂಗ್ಲಿಷ್ ಲಿಪಿಯಲ್ಲಿ ಮತ್ತು ಕನ್ನಡವನ್ನು ಕನ್ನಡ ಲಿಪಿಯಲ್ಲಿ ಮೂಡಿಸುವುದು ನ್ಯಾಯಸಮ್ಮತ ಮತ್ತು ಸರಿಯಾದ ಕ್ರಮ ಎಂಬುದನ್ನು ಈ ಸ್ಟೇಟಸ್ ಒತ್ತಿಹೇಳುತ್ತಿದೆ.

ಐಫೋನ್ ಒಳಗೊಂಡಂತೆ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಈಗ ಕನ್ನಡದ ಸೌಲಭ್ಯಗಳು ಲಭ್ಯ. ಒತ್ತಕ್ಷರಗಳ ಸಹಿತ ಕನ್ನಡ ಮೂಡಿಸು ವುದು ಕಷ್ಟದ ಕೆಲಸ ಎಂಬ ನೆಪಗಳನ್ನು ಒಡ್ಡುತ್ತಾ ಕಂಗ್ಲಿಷ್‌ನಲ್ಲಿಯೇ ಮೆಸೇಜ್‌ಗಳನ್ನು ಕಳುಹಿಸುವುದನ್ನು ಮುಂದುವ ರಿಸಿರುವುದಂತೂ ಕನ್ನಡಾಭಿಮಾನ ಶೂನ್ಯತೆಯ ಪರಮಾವಧಿ ಎನ್ನಬಹುದು. ಆಲಸ್ಯದಿಂದ ಹೊರಬಂದು ಸ್ಮಾರ್ಟ್ ಫೋನುಗಳಲ್ಲಿ ಕನ್ನಡ ವನ್ನು ಕನ್ನಡಲಿಪಿ ಯಲ್ಲಿಯೇ ಬಳಸುವುದಕ್ಕೆ ಇಂದೇ ಸಂಕಲ್ಪ ಮಾಡೋಣ ಮತ್ತು ಡಿಜಿಟಲ್ ಲೋಕದಲ್ಲಿ ಕನ್ನಡವನ್ನು ಉಳಿಸಿ ಬೆಳೆಸೋಣ.

share
ಎ. ಸತ್ಯನಾರಾಯಣ
ಎ. ಸತ್ಯನಾರಾಯಣ
Next Story
X