ಎಲ್ಲಾ ಭಾಷೆಗಳಲ್ಲೂ ಏಕರೂಪದ ನೀಟ್ ಪ್ರಶ್ನೆಪತ್ರಿಕೆ: ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್

ಹೊಸದಿಲ್ಲಿ, ಜು.23: ಇನ್ನು ಮುಂದೆ ನೀಟ್ ಪರೀಕ್ಷೆಗೆ ಎಲ್ಲಾ ಭಾಷೆಗಳಲ್ಲೂ ಪ್ರಶ್ನೆಪತ್ರಿಕೆಗಳು ಒಂದೇ ಆಗಿರಲಿವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ.
“ನೀಟ್ ಪರೀಕ್ಷೆಗೆ ಇನ್ನು ಮುಂದೇ ದೇಶಾದ್ಯಂತ ಬೇರೆ ಬೇರೆ ಭಾಷೆಗಳಲ್ಲಿ ಒಂದೇ ಪ್ರಶ್ನೆ ಪತ್ರಿಕೆ ಇರಲಿದೆ" ಎಂದವರು ಹೇಳಿದ್ದಾರೆ.
ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಇದ್ದ ಪ್ರಶ್ನೆಪತ್ರಿಕೆಗಿಂತ ಪ್ರಾದೇಶಿಕ ಭಾಷೆಯಲ್ಲಿದ್ದ ಪ್ರಶ್ನೆಪತ್ರಿಕೆಗಳು ಕಠಿಣವಾಗಿತ್ತು ಎನ್ನುವ ಪಶ್ಚಿಮ ಬಂಗಾಳ ಶಿಕ್ಷಣ ಸಚಿವರ ದೂರಿಗೆ ಉತ್ತರಿಸಿದ ಅವರು ಪ್ರಾದೇಶಿಕ ಹಾಗೂ ಇಂಗ್ಲಿಷ್ ಭಾಷೆಯ ಪ್ರಶ್ನೆ ಪತ್ರಿಕೆಗಳು ಏಕರೂಪದಲ್ಲಿ ಇರಲಿವೆ ಎಂದಿದ್ದಾರೆ.
Next Story





