ಕಾಸರಗೋಡು: ಆಟಿ ಅಮಾವಾಸ್ಯೆ ಪ್ರಯುಕ್ತ ಪಿತೃ ತರ್ಪಣ

ಕಾಸರಗೋಡು, ಜು. 23: ಬೇಕಲ ತೃಕ್ಕನ್ನಾಡ್ ತ್ರಯಂಬಕೇಶ್ವರ ದೇವಸ್ಥಾನ ಪಿತೃ ತರ್ಪಣಕ್ಕೆ ಖ್ಯಾತಿಯನ್ನು ಪಡೆದಿದ್ದು, ಈ ಹಿನ್ನೆಲೆಯಲ್ಲಿ ಆಟಿ ಅಮಾವಾಸ್ಯೆ ಪ್ರಯುಕ್ತ ಇಂದು ನೂರಾರು ಮಂದಿ ಭಕ್ತರು ಅಗಲಿ ಹೋದ ತಮ್ಮ ಹಿರಿಯರಿಗೆ ಮೋಕ್ಷ ಲಭಿಸಲು ಪಿತೃ ತರ್ಪಣ ಅರ್ಪಿಸಿದರು.
ಸಮುದ್ರದ ಹತ್ತಿರ ಮತ್ತು ಸಮುದ್ರಕ್ಕೆ ಪಶ್ಚಿಮಾಭಿಮುಖವಾಗಿ ನೆಲೆಗೊಂಡಿರುವ ಒಂದು ಶಿವ ಕ್ಷೇತ್ರ ಇಲ್ಲಿನ ವೈಶಿಷ್ಟ್ಯವಾಗಿದೆ. ಈ ಕ್ಷೇತ್ರದಲ್ಲಿ ವರ್ಷಂಪ್ರತಿ ಆಷಾಡ ಅಮಾವಾಸ್ಯೆಯಂದು ಪಿತೃ ತರ್ಪಣ ವಿಧಿವಿಧಾನಗಳು ನಡೆಯುತ್ತದೆ. ಮುಂಜಾನೆ ಭಕ್ತರು ಸೇವಾ ಚೀಟಿ ಪಡೆದು, ಕ್ಷೇತ್ರದ ಹಿಂಭಾಗದಲ್ಲಿರುವ ಕ್ಷೇತ್ರ ಕೊಳದಲ್ಲಿ ಮಿಂದು, ಸಮುದ್ರ ಕಿನಾರೆಯಲ್ಲಿ ಈ ಸೇವೆಯನ್ನು ಸಲ್ಲಿ ಸುವರು. ಭಕ್ತರ ಸಂಖ್ಯೆಯ ಹೆಚ್ಚಳವನ್ನು ಪರಿಗಣಿಸಿ ಅವರಿಗೆ ಸಕಲ ಸೌಲಭ್ಯ ಹಾಗೂ ರಕ್ಷಣೆ ನೀಡುವುದಕ್ಕೆ ಎಲ್ಲಾ ಕ್ರಮ ತೆಗೆದುಕೊಳ್ಳಲಾಗುತ್ತದೆ.
Next Story





