Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಚೀನಿ ಸರಕುಗಳನ್ನು ತಡೆಯಲು ಪ್ರಾರ್ಥನೆಗೆ...

ಚೀನಿ ಸರಕುಗಳನ್ನು ತಡೆಯಲು ಪ್ರಾರ್ಥನೆಗೆ ಮುನ್ನ ಐದು ಬಾರಿ ಈ ಮಂತ್ರವನ್ನು ಪಠಿಸಿ:ಆರೆಸ್ಸೆಸ್

ವಾರ್ತಾಭಾರತಿವಾರ್ತಾಭಾರತಿ23 July 2017 3:13 PM IST
share
ಚೀನಿ ಸರಕುಗಳನ್ನು ತಡೆಯಲು ಪ್ರಾರ್ಥನೆಗೆ ಮುನ್ನ ಐದು ಬಾರಿ ಈ ಮಂತ್ರವನ್ನು ಪಠಿಸಿ:ಆರೆಸ್ಸೆಸ್

ಹೊಸದಿಲ್ಲಿ,ಜು.23: ನೂತನ ಮಂತ್ರದೊಂದಿಗೆ ಚೀನಾ ಎಂಬ ‘ಅಸುರೀ ಶಕ್ತಿ’ಯನ್ನು ನಿವಾರಿಸಲು ಆರೆಸ್ಸೆಸ್ ಮುಂದಾಗಿದೆ! ಚೀನಿ ಸರಕುಗಳ ಬಳಕೆಯನ್ನು ಕೈಬಿಡುವಂತೆ ಭಾರತೀಯರನ್ನು ಉತ್ತೇಜಿಸುವ ಮೂಲಕ ಚೀನಾದ ಮೇಲೆ ಆರ್ಥಿಕ ದಾಳಿಯೊಂದನ್ನು ನಡೆಸುವ ನೀತಿಯೊಂದನ್ನು ಪ್ರತಿಪಾದಿಸಿರುವ ಆರೆಸ್ಸೆಸ್, ಈಗ ದೇವರಿಗೆ ಪ್ರಾರ್ಥನೆಯ ಮೂಲಕ ಆ ದೇಶವನ್ನು ಮಟ್ಟಹಾಕುವ ಪರಿಕಲ್ಪನೆಯೊಂದನ್ನು ಕಂಡುಕೊಂಡಿದೆ. ಹಿಂದುಗಳ ದೈನಂದಿನ ಪೂಜೆಯಾಗಿರಲಿ ಅಥವಾ ಮುಸ್ಲಿಮರ ನಮಾಝ್ ಆಗಿರಲಿ, ಪ್ರಾರ್ಥನೆಗೆ ಮುನ್ನ ಐದು ಬಾರಿ ಪಠಿಸಲು ಮಂತ್ರವೊಂದನ್ನು ಅದು ಮುಂದಿಟ್ಟಿದೆ.

ಭಾರತದಲ್ಲಿ ಸರ್ವವ್ಯಾಪಿಯಾಗಿರುವ ಚೀನಿ ಸರಕುಗಳನ್ನು ಬಹಿಷ್ಕರಿಸುವ ಮೂಲಕ ಆ ದೇಶಕ್ಕೆ ವಿಶ್ವದ ಬೃಹತ್ ಬಳಕೆದಾರ ಮಾರುಕಟ್ಟೆಯ ಲಾಭಗಳು ದೊರೆಯದಂತೆ ಮಾಡಲು ಉದ್ದೇಶಿಸಿರುವ ಆರೆಸ್ಸೆಸ್, ಚೀನಿ ಮೂಲದ್ದೆಂದು ಗೊತ್ತಿಲ್ಲದೆ ಚೀನಾದ ಸರಕುಗಳನ್ನು ಬಳಸುತ್ತಿರುವ ಭಾರತೀಯರಲ್ಲಿ ಆ ಬಗ್ಗೆ ಅರಿವು ಮೂಡಿಸಲೂ ಮುಂದಾಗಿದೆ.

ಯುದ್ಧವು ಅನಪೇಕ್ಷಿತ, ಆದರೆ ಅನಿವಾರ್ಯವಾದರೆ ದೇಶವು ಅದಕ್ಕೆ ಸಿದ್ಧ ಎಂದು ಪ್ರತಿಪಾದಿಸುತ್ತಿರುವ ಆರೆಸ್ಸೆಸ್,ಸಿಕ್ಕಿಮ್‌ನ ಡೋಕ್ಲಾಮ್ ಪ್ರದೇಶದಲ್ಲಿಯ ಸೃಷ್ಟಿಯಾಗಿರುವ ಭಾರತ-ಚೀನಾ ನಡುವಿನ ಬಿಕ್ಕಟ್ಟು ಕುರಿತಂತೆ ಕೇಂದ್ರದ ಕಠಿಣ ನಿಲುವನ್ನು ಬೆಂಬಲಿಸಿದೆ.

‘ಕೈಲಾಸ್,ಹಿಮಾಲಯ ಮತ್ತು ಟಿಬೆಟ್ ಚೀನದ ಅಸುರೀ ಶಕ್ತಿಯಿಂದ ಮುಕ್ತವಾಗಲಿ’ ಎನ್ನುವುದು ಹೊಸ ಮಂತ್ರ ಅಥವಾ ಸಂಕಲ್ಪವಾಗಿದ್ದು, ಪ್ರತಿಯೊಬ್ಬ ಭಾರತೀಯನೂ ಪ್ರಾರ್ಥನೆಗೆ ಮುನ್ನ ಇದನ್ನು ಪಠಿಸಬೇಕು ಎಂದು ಆರೆಸ್ಸೆಸ್ ಬಯಸಿದೆ.

ಇದು ಚೀನಾದ ಮುಖ್ಯ ಹಿತಾಸಕ್ತಿಗೆ ಹಾನಿಯನ್ನುಂಟು ಮಾಡುವ ಜೊತೆಗೆ ನಮ್ಮ ಪ್ರಯತ್ನಗಳಲ್ಲಿ ಆಧ್ಯಾತ್ಮಕ ಶಕ್ತಿಯನ್ನು ಆವಾಹಿಸುತ್ತದೆ ಮತ್ತು ಧನಾತ್ಮಕ ಕ್ರಿಯೆಯನ್ನು ಸೃಷ್ಟಿಸುತ್ತದೆ ಎಂದು ಹಿರಿಯ ಆರೆಸ್ಸೆಸ್ ಪ್ರಚಾರಕ ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಇಂದ್ರೇಶ ಕುಮಾರ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಚೀನಾ ಮೂಲತಃ ಸಾಮ್ರಾಜ್ಯವಾದಿಯಾಗಿದ್ದು ಆಕ್ರಮಣಕಾರಿ ಗುಣವನ್ನು ಹೊಂದಿದೆ. ಕನ್‌ಫ್ಯೂಷಿಯಸ್ ಸಿದ್ಧಾಂತದಿಂದ ದೂರ ಸರಿದಿರುವ ಅದು ಹಿಂಸೆಯ ಪ್ರತಿಪಾದಕ ನಾಗಿದೆ. ಭಾರತದೊಂದಿಗೆ ಚೀನಾದ ಇತ್ತೀಚಿನ ಸಂಘರ್ಷವು ನಮಗೆ ಹಲವಾರು ಮಿತ್ರರನ್ನು ದೊರಕಿಸಿದೆ ಮತ್ತು ಆ ದೇಶವು ಹಲವಾರು ಮಿತ್ರರನ್ನು ಕಳೆದುಕೊಂಡಿದೆ. ತಾವು ಭಾರತದೊಂದಿಗೂ ಇಲ್ಲ,ಈ ವಿಶ್ವದೊಂದಿಗೂ ಇಲ್ಲ,ಬದಲಿಗೆ ಹಿಂಸೆಯ ರಾಜಕೀಯವನ್ನು ಮುಂದುವರಿಸಲು ಬಯಸಿದ್ದೇವೆ ಎನ್ನುವುದನ್ನು ಚೀನಿಯರು ತೋರಿಸಿದ್ದಾರೆ. ಟಿಬೆಟ್‌ನ್ನು ವಶಪಡಿಸಿಕೊಳ್ಳುವ ಜೊತೆಗೆ ಭಾರತ,ನೇಪಾಳ ಮತ್ತು ಭೂತಾನದಂತಹ ಹಲವಾರು ದೇಶಗಳ ಭೂಪ್ರದೇಶಗಳನ್ನು ತಮ್ಮ ಹಿಡಿತದಲ್ಲಿಟ್ಟು ಕೊಂಡಿದ್ದಾರೆ. ಭಾರತ ಮತ್ತು ಭೂತಾನಗಳ ಯೋಧರು ಚೀನಾದ ಕುತಂತ್ರವನ್ನು ವಿಫಲಗೊಳಿಸಿದ್ದರಿಂದಲೇ ಡೋಕ್ಲಾಮ್‌ನ್ನು ಅವರ ಹಿಡಿತದಿಂದ ರಕ್ಷಿಸಲು ಸಾಧ್ಯವಾಗಿದೆ ಎಂದು ಕುಮಾರ್ ಹೇಳಿದರು.

  ಚೀನಾ ಈಗಾಗಲೇ ತನ್ನ ದುಸ್ಸಾಹಸದಿಂದಾಗಿ ಅಂತರರಾಷ್ಟ್ರೀಯ ಸಮುದಾಯದಿಂದ ಮೂಲೆಗೆ ತಳ್ಳಲ್ಪಟ್ಟಿದೆ. ಆದರೆ ಸ್ವದೇಶಿ ವಸ್ತುಗಳನ್ನೇ ಬಳಸುವಂತೆ ಮತ್ತು ಎಲ್ಲ ಬಗೆಯ ಚೀನಿ ತಯಾರಿಕೆಗಳನ್ನು ಬಹಿಷ್ಕರಿಸುವಂತೆ ಪ್ರತಿಯೋರ್ವ ಭಾರತೀಯನನ್ನು ಉತ್ತೇಜಿಸುವುದು ಚೀನಾದ ವಿರುದ್ಧ ದಾಳಿಗೆ ಅತ್ಯುತ್ತಮ ಮಾರ್ಗವಾಗಿದೆ ಎಂದು ಅವರು ನುಡಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X