ಇಸ್ರೇಲ್ ಸೈನಿಕರಿಂದ ಗುಂಡು: ಇಬ್ಬರು ಫೆಲೆಸ್ತೀನಿಯರು ಮೃತ್ಯು

ಜೆರುಸಲೇಂ,ಜು. 23: ಇಸ್ರೇಲ್ ಸೈನಿಕರು ಮತ್ತು ಫೆಲೆಸ್ತೀನಿ ಪ್ರಜೆಗಳ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಫೆಲೆಸ್ತೀನಿಯರು ಮೃತಪಟ್ಟಿದ್ದಾರೆ. ಇಬ್ಬರು ಎರಡು ಪ್ರತ್ಯೇಕ ಘಟನಗಳಲ್ಲಿ ಮೃತಪಟ್ಟಿದ್ದಾರೆ ಎಂದು ಫೆಲೆಸ್ತೀನ್ ಆರೋಗ್ಯ ಸಚಿವಾಲಯ ದೃಢೀಕರಿಸಿದೆ.
ಅಲ್-ಇಸ್ರಿಯ ನಗರದಲ್ಲಿ ಮತ್ತು ವೆಸ್ಟ್‍ಬ್ಯಾಂಕ್‍ನಲಿ ಇಸ್ರೇಲ್ ಸೇನೆ ಮತ್ತು ಫೆಲೆಸ್ತೀನಿಹೋರಾಟಗಾರ ನಡುವೆ ಘರ್ಷಣೆ ನಡೆದಿದೆ. ಪ್ರತಿಭಟನಾಕಾರರ ಮೇಲೆ ಇಸ್ರೇಲ್ ಸೇನೆ ಅಶ್ರುವಾಯು ಪ್ರಯೋಗಿಸಿದೆ. ಗುಂಡುಹಾರಾಟ ನಡೆದಿಲ್ಲ ಎಂದು ಇಸ್ರೇಲ್ ಹೇಳುತ್ತಿದೆ.
ಮಸ್ಚಿದುಲ್ ಅಕ್ಸಾದಲ್ಲಿ ಇಸ್ರೇಲ್ ಹೇರಿದ ನಿಯಂತ್ರಣಗಳನ್ನುವಿರೋಧಿಸಿ ಫೆಲೆಸ್ತೀನಿಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ತೀವ್ರಗೊಂಡಂತೆ ಫೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ಇಸ್ರೇಲ್‍ನೊಂದಿಗಿರುವ ಎಲ್ಲ ಸಂಬಂಧಗಳನ್ನು ಕಡಿದುಕೊಳ್ಳಲಾಗುವುದು ಎಂದು ಶುಕ್ರವಾರ ತಿಳಿಸಿದ್ದಾರೆ.
Next Story





