ಮಕ್ಕಳ ಪ್ರತಿಭೆಗೆ ಪೋಷಕರು ನೀರೆರೆದು ಪೋಷಿಸಬೇಕು: ಶ್ರೀ ಚಂದ್ರಶೇಖರ್‌ಸ್ವಾಮೀಜಿ

ತುಮಕೂರು, ಜು.23: ಮನುಷ್ಯ ಯಾವುದೇ ಕ್ಷೇತ್ರದಲ್ಲಾದರೂ ಮುಂದೆ ಬರಬೇಕೆಂದರೆ ಸತತ ಪ್ರಯತ್ನ ಮತ್ತು ಪರಿಶ್ರಮದಿಂದ ಮಾತ್ರ ಸಾಧ್ಯ ಎಂದು ಬೆಟ್ಟದಹಳ್ಳಿ ಗವಿಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ತಿಳಿಸಿದ್ದಾರೆ.
ನಗರದ ಸಿದ್ದಿ ವಿನಾಯಕ ಸಮುದಾಯ ಭವನದಲ್ಲಿ ತುಮಕೂರು ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ವೀರಶೈವ ಲಿಂಗಾಯತ ನೌಕರರ ಸಮಾವೇಶ ಗುರುವಂದನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು, ತಮ್ಮ ಮಕ್ಕಳ ಪ್ರತಿಭೆಯನ್ನು ಪೋಷಕರು ಗುರುತಿಸಿ, ಅದಕ್ಕೆ ನೀರೆರೆದು ಪೋಷಿಸುವ ಕೆಲಸವನ್ನು ಮಾಡಬೇಕು. ಆಗ ಮಕ್ಕಳು ಯಾವುದೇ ಕ್ಷೇತ್ರದಲ್ಲಾದರೂ ಯಶಸ್ಸಿನ್ನು ಕಾಣುತ್ತಾರೆ ಎಂದರು.
ವೀರಶೈವ ಲಿಂಗಾಯತ ಧರ್ಮದ ತತ್ವವನ್ನು ತಿಳಿದುಕೊಂಡರೆ ಯಾವುದೇ ಭೇದ ಉಂಟಾಗುವುದಿಲ್ಲ. ಪದಗಳು ಬೇರೆ ಬೇರೆ ಆಗಿರಬಹುದು ಆದರೆ ತತ್ವ ಒಂದೇ ಎಂದು ಶ್ರೀಚಂದ್ರಶೇಖರ ಸ್ವಾಮೀಜಿ ತಿಳಿಸಿದರು.
ಮಾಜಿ ಸಂಸದ ಜಿ.ಎಸ್ ಬಸವರಾಜು ಮಾತನಾಡಿ, ಪ್ರತಿಭೆ ಪ್ರತಿಯೊಬ್ಬ ಮನುಷ್ಯನಲ್ಲೂ ಇದ್ದೇ ಇರುತ್ತದೆ ಅದನ್ನು ಪ್ರೋತ್ಸಾಹಿಸಿ ಬೆಳೆಸಿದರೆ ಅವರು ಮುಂದೆ ಬರುತ್ತಾರೆ. ನೌಕರಿ ಹಿಡಿಯುವುದಕ್ಕಿಂತ ನೌಕರಿ ಕೊಡುವಂತಹ ಕ್ಷೇತ್ರದತ್ತ ಮುಖ ಮಾಡಿ ಅದರಲ್ಲಿ ಯಶಸ್ಸುನ್ನು ಕಾಣಬೇಕು. ನೌಕರಿ ಹಿಡಿದು ಗುಲಾಮರಾಗಿ ಜೀವನ ನಡೆಸುವುದಕ್ಕಿಂತ ತಮ್ಮ ಸ್ವಂತ ಕಾಲಿನ ಮೇಲೆ ನಿಂತು ಯಾರ ಹಂಗಿಲ್ಲದೆ ಬದುಕುವಂತಹ ಕ್ಷೇತ್ರದಲ್ಲಿ ಮುಂದೆ ಬರಲು ಮುನ್ನುಗ್ಗಿದಾಗ ದೇಶ ಅಭಿವೃದ್ದಿ ಪಥದಲ್ಲಿ ಸಾಗುತ್ತದೆ ಎಂದರು.
ನಿವೃತ್ತ ಐಎಎಸ್ ಅಧಿಕಾರಿ ಸೋಮಶೇಖರ್ ಮಾತನಾಡಿ, ಪ್ರತಿಭಾ ಪುರಸ್ಕಾರ ಮಾಡಿ ಮಕ್ಕಳ ಭವಿಷ್ಯವನ್ನು ಅವರ ಕೈಲಿ ನೀಡುವುದು ಬೇಡ. ಪೋಷಕರು ಅವರ ಭವಿಷ್ಯವನ್ನು ಉತ್ತುಂಗ ಮಟ್ಟಕ್ಕೆ ಕೊಂಡೊಯ್ಯಲು ಪ್ರೋತ್ಸಾಹ ನೀಡಬೇಕಾಗಿದೆ.ಸೋಮಾರಿಗಳಿಗೆ ಯಾವುದೇ ಅದೃಷ್ಟ ಒಲಿಯುವುದಿಲ್ಲ. ಸತತ ಪ್ರಯತ್ನದಿಂದ ಮುಂದೆ ಬಂದ ವ್ಯಕ್ತಿಗಳಿಗೆ ಮಾತ್ರ ಅದೃಷ್ಟ ಅವರ ಅಂಗೈಲಿ ಇರುತ್ತದೆ ಎಂದರು.
ನೀವೃತ್ತ ನೌಕರೆರೆಲ್ಲಾ ಸೇರಿ ಪ್ರತಿ ವರ್ಷಕ್ಕೆ ಒಂದು ಸಾವಿರ ದೇಣಿಗೆ ನೀಡಿ ತುಮಕೂರಿನಲ್ಲಿ ಒಂದು ಕೋಚಿಂಗ್ ಸೆಂಟರ್ ಸ್ಥಾಪನೆ ಮಾಡಿ ಮಕ್ಕಳ ಭವಿಷ್ಯಕ್ಕೆ ಅಡಿಪಾಯ ಹಾಕೋಣ ಎಂಬ ಅಭಿಲಾಷೆಯನ್ನು ಡಾ.ಸಿ.ಸೋಮಶೇಖರ್ ವ್ಯಕ್ತ ಪಡಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜ್ಯೋತಿ ಪ್ರಕಾಶ್ ವಾತನಾಡಿ, ನಿಮ್ಮ ಭವಿಷ್ಯವನ್ನು ನೀವೇ ನಿರ್ಧಾರ ಮಾಡಿಕೊಳ್ಳಬೇಕು. ನಿಮ್ಮ ನಿರ್ಧಾರಕ್ಕೆ ತಕ್ಕಂತೆ ಸದೃಢ ಮನೋಭಾವನೆ ಹೊಂದಿ ಸದಾ ಯಸಸ್ಸಿನೆಡೆದೆ ಹೆಜ್ಜೆಯನ್ನಿಡಬೇಕು. ಸಮಾಜದಲ್ಲಿ ನಿಮ್ಮನ್ನು ಗುರುತಿಸುವ ಉತ್ತಮ ವ್ಯಕ್ತಿಯಾಗಿ ಬೆಳೆದ ಸಮಾಜಕ್ಕೇನಾದರೂ ಕೊಡುಗೆ ನೀಡುವಂತಹ ಕೆಲಸವನ್ನು ಮಾಡಬೇಕು ಎಂದರು.
ಸಮಾರಂಭದಲ್ಲಿ ಎಸ್.ಎಸ್ ಎಲ್.ಸಿ ಮತ್ತು ಪಿಯುಸಿಯ ಸುಮಾರು 176 ವಿದ್ಯಾರ್ಥಿಗಳಿಗೆ ಪ್ರತಿಭಾ ಪರುಸ್ಕಾರವನ್ನು ನೀಡಿ ಪುರಸ್ಕರಿಸಲಾಯಿತು. ಸಮಾರಂಭದಲ್ಲಿ ಸಿಡ್ಲೆಹಳ್ಳಿ ಮಹಾಸಂಸ್ಥಾನ ಮಠ ಶ್ರೀಗುರುಕುಲ ನಂದಾಶ್ರಮದ ಶ್ರೀಇಮ್ಮಡಿ ಕರಿಬಸವದೇಶಿ ಕೇಂದ್ರ ಮಹಾಸ್ವಾಮೀಜಿ, ಶ್ರೀಸಿದ್ದಿವಿನಾಯಕ ಸೇವಾಮಂಡಳಿ ಮತ್ತು ಟಿಜಿಎಂಸಿ ಬ್ಯಾಂಕ್‌ನ ಅಧ್ಯಕ್ಷ ಎನ್.ಆರ್. ಜಗದೀಶ ಆರಾಧ್ಯ, ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ ಶೇಕರ್, ತಿಪಟೂರು ಜೆ ಡಿ.ಎಸ್ ುುಖಂಡ ಲೋಕೇಶ್ವರಪ್ಪ, ಡಾ.ಪರಮೇಶ್ವರ್, ಎಸ್,ಸಿ ಮಂಜುನಾಥ್, ಕೊಪ್ಪಳ್ ನಾಗರಾಜ್, ಉಮೇಶ್ ಸೇರಿದಂತೆ ಮುಂತಾದವರು ಹಾಜರಿದ್ದರು.







