ನಂದಿಹಳ್ಳಿಯಲ್ಲಿ ಕಳ್ಳತನ ಮಾಡಿದ್ದ ಆರೋಪಿಗಳ ಬಂಧನ

ಹುಳಿಯಾರು, ಜು.23: ಹುಳಿಯಾರು ಸಮೀಪದ ನಂದಿಹಳ್ಳಿ ಗ್ರಾಮದ ಮನೆಯೊಂದರಲ್ಲಿ ಕಳ್ಳತನ ಮಾಡಿಕೊಂಡು ತಲೆಮರೆಸಿಕೊಂಡಿದ್ದ 4 ಜನ ಕಳ್ಳರನ್ನು ಬಂಧಿಸಿರುವ ಹುಳಿಯಾರು ಪೊಲೀಸರು ಅವರಿಂದ ನಗದು ಹಾಗೂ ಚಿನ್ನವನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ನೀಡಿರುವ ಘಟನೆ ಜರುಗಿದೆ.
ಕಳೆದ ವರ್ಷ ಡಿಸಂಬರ್‌ನಲ್ಲಿ ಹುಳಿಯಾರು ಹೋಬಳಿ ನಂದಿಹಳ್ಳಿ ಗ್ರಾಮದ ಬಸವರಾಜು ಎಂಬುವರ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಮೇಲ್ಚಾವಣೆಯ ಹೆಂಚು ತೆಗೆದು ಒಳನುಗಿದ್ದ ಕಳ್ಳರು 2.80.000 ರೂ. ಹಣ ಹಾಗೂ ಚಿನ್ನದ ಆಭರರಣವನ್ನು ಕದ್ದು ನಾಪತ್ತೆಯಾಗಿದ್ದರು.
ಈ ಬಗ್ಗೆ ಪ್ರಕರಣದ ಬೆನ್ನು ಹತ್ತಿದ ಹುಳಿಯಾರು ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ತಿಪಟೂರು ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ವೇಣುಗೋಪಾಲ್ ರವರ ನೇತೃತ್ವದಲ್ಲಿ ಸಿಪಿಐ ಮಾರಪ್ಪ ಹಾಗೂ ಪಿ.ಎಸ್.ಐ. ವೈ.ವಿ.ರವೀಂದ್ರ ಮತ್ತು ಸಿಬ್ಬಂದಿಗಳ ತಂಡ ಕಾರ್ಯಚಾರಣೆಯನ್ನ ನಡೆಸಿ. ಕಳ್ಳತನಕ್ಕೆ ಸಂಬಂಧಿಸಿದಂತೆ 4 ಜನರನ್ನು ಬಂಧಿಸಿದ್ದಾರೆ. ಈ ಸಂಬಂಧ ಆರೋಪಿಗಳಾದ ನಂದಿಹಳ್ಳಿ ನಿವಾಸಿಗಳಾದ ಗವಿರಂಗಯ್ಯ, ನಾಗರಾಜು, ಮಂಜುನಾಥ್, ಹರೀಶ್ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸಿದ ಪೋಲಿಸರು ಅವರ ಬಳಿಯಿದ್ದ 70 ಸಾವಿರ ನಗದು ಹಾಗೂ 38 ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು ವಶಕ್ಕೆ ಪಡೆದುಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.







