ದೇವಾಡಿಗ ಮಹಿಳೆಯರಿಂದ ಆಟಿಡೊಂಜಿ ದಿನ ಆಚರಣೆ

ಉಡುಪಿ, ಜು.23: ಉಡುಪಿ ದೇವಾಡಿಗರ ಮಹಿಳಾ ಸಂಘಟನೆ ವತಿಯಿಂದ ಮಾತೃ ಸಂಘದ ಸಹಯೋಗದೊಂದಿಗೆ ಚಿಟ್ಪಾಡಿ ದೇವಾಡಿಗರ ಸೇವಾ ಸಂಘದ ಸಭಾಭವನದಲ್ಲಿ ರವಿವಾರ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಯಾಗಿ ದೇವಾಡಿಗ ಮಹಿಳಾ ಸಂಘದ ಅಧ್ಯಕ್ಷೆ ಜ್ಯೋತಿ ದೇವಾಡಿಗ ಮಾತನಾಡಿ, ಈ ನೆಲದ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಿರಿಯರು ಪರಿಚಯಿಸಿದ ಸಂಪ್ರದಾಯ ಹಾಗೂ ಸಂಸ್ಕಾರಗಳನ್ನು ಕಾಪಾಡಿ ಕೊಂಡು ಬರುವುದು ನಮ್ಮ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು.
ತುಳು ಸಂಸ್ಕೃತಿ ಹಾಗೂ ಭಾಷೆ ವೈಶಿಷ್ಟತೆಯಿಂದ ಕೂಡಿದ್ದು, ಈ ಭಾಷೆ ಐದು ದ್ರಾವಿಡ ಭಾಷೆಗಳಲ್ಲಿ ಒಂದಾಗಿದೆ. ತುಳು ಸಂಸ್ಕೃತಿಯಲ್ಲಿ ಆಟಿ ತಿಂಗಳಿಗೆ ಪ್ರಮುಖ ಸ್ಥಾನಮಾನ ಇದೆ. ಆ ಸಮಯದಲಲಿ ನಮ್ಮ ಪೂರ್ವಿಕರು ಆರೋಗ್ಯ ವಂತರಾಗಿರಲು ಔಷಧೀಯ ಗುಣಗಳನ್ನು ಹೊಂದಿರುವ ಸೊಪ್ಪು, ತರಕಾರಿ ಗಳನ್ನು ಸೇವಿಸುತ್ತಿದ್ದರು ಎಂದರು.
ಕಾರ್ಯಕ್ರಮವನ್ನು ಮಹಿಳಾ ಸಂಘದ ಹಿರಿಯರಾದ ವನಜ ಬಿ. ಸೇರಿಗಾರ್ ಉದ್ಘಾಟಿಸಿದರು. ದೇವಾಡಿಗ ಮಹಿಳಾ ಸಂಘದ ನಾಗಿ ಸೇರಿಗಾರ್ ಗುಂಡಿ ಬೈಲು, ಶಾಂತಾ ಆರ್.ಸೇರಿಗಾರ್, ಲಲಿತಾ ಸೇರಿಗಾರ್, ಕಮಲಕೃಷ್ಣ ಸೇರಿ ಗಾರ್, ಕೊಡವೂರು ಸಂಘದ ಅಧ್ಯಕ್ಷ ಸೀತಾರಾಮ ದೇವಾಡಿಗ, ಸುಮನಾ ರಂಗಪ್ಪಸೇರಿಗಾರ್, ಸುದರ್ಶನ ಸೇರಿಗಾರ್, ಅಂಬಿಕಾ ನಾರಾಯಣ್ ಸೇರಿ ಗಾರ್ ಉಪಸ್ಥಿತರಿದ್ದರು.





