ಮಹಿಳಾ ವಿಶ್ವಕಪ್ ಫೈನಲ್: ಭಾರತದ ಗೆಲುವಿಗೆ 229 ರನ್‌ಗಳ ಸವಾಲು

ಲಾರ್ಡ್ಸ್ , ಜು.23: ಮಹಿಳಾ ವಿಶ್ವ ಕಪ್ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 228 ರನ್ ಗಳಿಸಿದೆ.
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡ ಭಾರತದ ಜೂಲನ್ ಗೋಸ್ವಾಮಿ(23ಕ್ಕೆ 3), ಪೂನಮ್ ಯಾದವ್(36ಕ್ಕೆ 2) ಮತ್ತು ರಾಜೇಶ್ವರಿ ಗಾಯಕ್‌ವಾಡ್(49ಕ್ಕೆ 1) ದಾಳಿಗೆ ಸಿಲುಕಿದ್ದರೂ ಸ್ಪರ್ಧಾತ್ಮಕ ಸವಾಲನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದೆ.
ನತಾಲಿಯಾ ಸ್ಕೀವರ್ (51) ವಿಕೆಟ್ ಕೀಪರ್ ಸಾರಾ ಟೇಲರ್(45) ಕೊಡುಗೆಯ ಫಲವಾಗಿ ಇಂಗ್ಲೆಂಡ್ ತಂಡದ ಸ್ಕೋರ್ 225ರ ಗಡಿ ದಾಟಿದೆ.
ಇಂಗ್ಲ್ಲೆಂಡ್‌ನ ಆಟಗಾರ್ತಿಯರಾದ ಲಾರೆನ್ ವಿನ್‌ಫೀಲ್ಡ್(24) , ಟಾಮಿ ಬೇವೌಂಟ್(23), ಕ್ಯಾಥರಿನಾ ಬ್ರಂಟ್(34), ಜೆನ್ನಿ ಗನ್(ಔಟಾಗದೆ 25) ಮತ್ತು ಲಾರಾ ಮಾರ್ಷ್(14) ಎರಡಂಕೆಯ ಸ್ಕೋರ್ ದಾಖಲಿಸಿದರು.
Next Story





