Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಭಯೋತ್ಪಾದಕ ದಾಳಿಯ ಬೆದರಿಕೆ: ಭಾರತಕ್ಕೆ...

ಭಯೋತ್ಪಾದಕ ದಾಳಿಯ ಬೆದರಿಕೆ: ಭಾರತಕ್ಕೆ ಮೂರನೇ ಸ್ಥಾನ

ವಾರ್ತಾಭಾರತಿವಾರ್ತಾಭಾರತಿ23 July 2017 7:21 PM IST
share
ಭಯೋತ್ಪಾದಕ ದಾಳಿಯ ಬೆದರಿಕೆ: ಭಾರತಕ್ಕೆ ಮೂರನೇ ಸ್ಥಾನ

ಹೊಸದಿಲ್ಲಿ , ಜು.23: ಭಯೋತ್ಪಾದಕರ ದಾಳಿಯ ಬೆದರಿಕೆ ಎದುರಿಸುತ್ತಿರುವ ರಾಷ್ಟ್ರಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವರದಿಯಲ್ಲಿ ತಿಳಿಸಲಾಗಿದೆ. ಇರಾಕ್ ಮತ್ತು ಅಪಘಾನಿಸ್ತಾನ ಮೊದಲ ಎರಡು ಸ್ಥಾನದಲ್ಲಿವೆ.

ಈ ಹಿಂದೆ ಮೂರನೇ ಸ್ಥಾನದಲ್ಲಿದ್ದ ಪಾಕಿಸ್ತಾನ 2016ರ ಅಂಕಿ ಅಂಶದಂತೆ ಈ ಸ್ಥಾನವನ್ನು ಭಾರತಕ್ಕೆ ಬಿಟ್ಟುಕೊಟ್ಟು ನಾಲ್ಕನೇ ಸ್ಥಾನ ಪಡೆದಿದೆ. ಭಯೋತ್ಪಾದಕರ ಪ್ರಾಣಾಂತಿಕ ದಾಳಿ, ಗಾಯಗೊಂಡ ಪ್ರಕರಣಗಳು ಮುಂತಾದ ಪ್ರಕರಣಗಳ ಅಂಕಿ ಅಂಶಗಳ ಆಧಾರದಲ್ಲಿ ಈ ವರದಿ ಸಿದ್ದಪಡಿಸಲಾಗಿದೆ.
 2016ರಲ್ಲಿ ವಿಶ್ವದಾದ್ಯಂತ ಭಯೋತ್ಪಾದಕರು 11,072 ದಾಳಿಗಳನ್ನು ನಡೆಸಿದ್ದು ಇದರಲ್ಲಿ 927 ದಾಳಿಗಳನ್ನು ಭಾರತದಲ್ಲಿ ನಡೆಸಲಾಗಿದೆ. ಇದು 2015ರಲ್ಲಿ ನಡೆಸಲಾದ ಭಯೋತ್ಪಾದಕ ದಾಳಿಗಿಂತ ಶೇ.16ರಷ್ಟು ಅಧಿಕವಾಗಿದೆ. 2015ರಲ್ಲಿ ಭಯೋತ್ಪಾದಕ ದಾಳಿಯಿಂದ ಭಾರತದಲ್ಲಿ 289 ಮಂದಿ ಮೃತಪಟ್ಟಿದ್ದರೆ, 2016ರಲ್ಲಿ 337 ಮಂದಿ ಮೃತಪಟ್ಟಿದ್ದಾರೆ. ಇದೇ ವೇಳೆ , ಗಾಯಗೊಂಡವರ ಸಂಖ್ಯೆ 2015ರಲ್ಲಿ 500 ಆಗಿದ್ದರೆ ಕಳೆದ ವರ್ಷ 636 ಮಂದಿ ಗಾಯಗೊಂಡಿದ್ದರು.

 ಈ ಮಧ್ಯೆ, ಪಾಕಿಸ್ತಾನದಲ್ಲಿ ಭಯೋತ್ಪಾದಕ ದಾಳಿಯಿಂದ ಮೃತಪಟ್ಟವರ ಸಂಖ್ಯೆ 2015ರಲ್ಲಿ 1,010 ಆಗಿದ್ದರೆ 2016ರಲ್ಲಿ 734 ಆಗಿದೆ.
   2016ರಲ್ಲಿ ಭಾರತದಲ್ಲಿ ನಡೆದ ಭಯೋತ್ಪಾದಕ ದಾಳಿ ಪ್ರಕರಣದ ಅರ್ಧಾಂಶದಷ್ಟು ಪ್ರಕರಣ ಜಮ್ಮು-ಕಾಶ್ಮೀರ, ಛತ್ತೀಸ್‌ಗಡ, ಮಣಿಪುರ ಮತ್ತು ಜಾರ್ಖಂಡ್‌ನಲ್ಲಿ ನಡೆದಿದೆ. 2016ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಶೇ.93ರಷ್ಟು ಹೆಚ್ಚಳವಾಗಿದೆ ಎಂದು ಅಮೆರಿಕದ ವರದಿಯಲ್ಲಿ ತಿಳಿಸಲಾಗಿದೆ. ಆದರೆ ಹೆಚ್ಚಳದ ಪ್ರಮಾಣ ಶೇ.54.81 ಎಂದು ಭಾರತದ ಗೃಹ ಸಚಿವಾಲಯದ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.
   ಭಯೋತ್ಪಾದಕರ ವಿರುದ್ಧ ಕಠಿಣ ನಿಲುವು ತಳೆದಿರುವ ಕೇಂದ್ರ ಸರಕಾರ ಕಾಶ್ಮೀರ ಸಮಸ್ಯೆಗೆ ರಾಜಕೀಯ ಪರಿಹಾರ ರೂಪಿಸುವ ಬದಲು ಇಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಿ ಭಯೋತ್ಪಾದಕರನ್ನು ಮಟ್ಟಹಾಕಲು ನಿರ್ಧರಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಎನ್‌ಸಿಎಸ್‌ಟಿಆರ್‌ಟಿ ಸಂಗ್ರಹಿಸಿರುವ ಅಂಕಿ ಅಂಶದ ಪ್ರಕಾರ 2015ರಲ್ಲಿ ಭಯೋತ್ಪಾದಕರು ದಾಳಿ ನಡೆಸಿ ಜನರನ್ನು ಅಪಹರಿಸುವ ಅಥವಾ ಅವರನ್ನು ಒತ್ತೆಯಾಳಾಗಿ ಇರಿಸಿಕೊಳ್ಳುವ ಪ್ರಕರಣ ಕಡಿಮೆಯಾಗಿದೆ. 2015ರಲ್ಲಿ ಇಂತಹ 866 ಪ್ರಕರಣ ದಾಖಲಾಗಿದ್ದರೆ 2016ರಲ್ಲಿ 317 ಪ್ರಕರಣ ದಾಖಲಾಗಿವೆ. ಒಟ್ಟಾರೆಯಾಗಿ, ಭಾರತದಲ್ಲಿ ಪ್ರತಿ ದಾಳಿಯಲ್ಲಿ ಸಾಯುವವರ ಸಂಖ್ಯೆ 0.4 ಆಗಿದ್ದರೆ ವಿಶ್ವಮಟ್ಟದಲ್ಲಿ ಇದು ಶೇ.2.4 ಆಗಿದೆ.

  2016ರಲ್ಲಿ ಬಿಹಾರದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಕ್ಸಲರು ನಡೆಸಿದ ದಾಳಿ ಅತ್ಯಂತ ಘಾತಕ ಭಯೋತ್ಪಾದಕ ದಾಳಿ ಎಂದು ಪರಿಗಣಿಸಲ್ಪಟ್ಟಿದೆ. ಭಾರತದಲ್ಲಿ 52 ಕ್ರಿಯಾಶೀಲ ಭಯೋತ್ಪಾದಕ ಗುಂಪುಗಳಿವೆ. 2015ರಲ್ಲಿ ಅಮೆರಿಕದ ವರದಿಯಲ್ಲಿ 45 ಕ್ರಿಯಾಶೀಲ ಭಯೋತ್ಪಾದಕ ಗುಂಪು ಭಾರತದಲ್ಲಿದೆ ಎಂದು ಉಲ್ಲೇಖಿಸಲಾಗಿತ್ತು. 2016ರಲ್ಲಿ ವಿಶ್ವದಾದ್ಯಂತ ನಡೆದ ಭಯೋತ್ಪಾದಕ ದಾಳಿಯಲ್ಲಿ 334 ಭಯೋತ್ಪಾದಕ ಗುಂಪುಗಳ ಕೈವಾಡ ಇರುವುದಾಗಿ ಅಮೆರಿಕದ ವರದಿ ತಿಳಿಸಿದೆ. 2015ರಲ್ಲಿ ಇಂತಹ 288 ಗುಂಪುಗಳಿದ್ದವು ಎಂದೂ ವರದಿ ತಿಳಿಸಿದೆ.

  ವಿಶ್ವದಾದ್ಯಂತ ನಡೆದ ಭಯೋತ್ಪಾದಕರ ದಾಳಿ ಪ್ರಕರಣ: 2016ರಲ್ಲಿ 11,072 ಪ್ರಕರಣ ದಾಖಲಾಗಿದ್ದರೆ, 2015ರಲ್ಲಿ 12,121 ಪ್ರಕರಣ ದಾಖಲಾಗಿದೆ. ಅಲ್ಲದೆ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 2016ರಲ್ಲಿ 25,621 ಆಗಿದ್ದರೆ 2015ರಲ್ಲಿ 29,424 ಆಗಿತ್ತು. 2016ರಲ್ಲಿ ಅಪಘಾನಿಸ್ತಾನ, ಸಿರಿಯ, ನೈಜೀರಿಯ, ಪಾಕಿಸ್ತಾನ ಮತ್ತು ಯೆಮೆನ್‌ನಲ್ಲಿ ದಾಳಿ ಮತ್ತು ಹತ್ಯೆಯ ಪ್ರಕರಣ ಕಡಿಮೆಯಾಗಿರುವುದು ಈ ಇಳಿಕೆಗೆ ಕಾರಣ ಎಂದು ವರದಿ ತಿಳಿಸಿದೆ. ಭಯೋತ್ಪಾಕದರಿಂದ ತೊಂದರೆಗೊಳಗಾಗಿರುವ 104 ದೇಶಗಳಲ್ಲಿ ನಡೆದಿರುವ ದಾಳಿಯ ಶೇ.55ರಷ್ಟು ದಾಳಿ ಪ್ರಕರಣ ಇರಾಕ್, ಅಪಘಾನಿಸ್ತಾನ, ಭಾರತ, ಪಾಕಿಸ್ತಾನ ಮತ್ತು ಫಿಲಿಪೈನ್ಸ್‌ನಲ್ಲಿ ನಡೆದಿದೆ. ಭಯೋತ್ಪಾದಕರಿಂದ ಹತರಾದವರಲ್ಲಿ ಶೇ.75ರಷ್ಟು ಮಂದಿ ಇರಾಕ್, ಅಪಘಾನಿಸ್ತಾನ, ಸಿರಿಯ, ನೈಜೀರಿಯ ಮತ್ತು ಪಾಕಿಸ್ತಾನದಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟವರು ಎಂದು ವರದಿ ತಿಳಿಸಿದೆ.
 

ಘಾತಕ ಉಗ್ರ ಸಂಘಟನೆ: ನಕ್ಸಲರಿಗೆ ತೃತೀಯ ಸ್ಥಾನ :

ಇಲ್ಲಿ ಗಮನಾರ್ಹ ವಿಷಯವೆಂದರೆ ವಿಶ್ವದ ಅತ್ಯಂತ ಘಾತಕ ಉಗ್ರ ಸಂಘಟನೆಗಳಲ್ಲಿ ನಕ್ಸಲರನ್ನು ಮೂರನೇ ಘಾತಕ ಭಯೋತ್ಪಾದಕ ಸಂಘಟನೆ ಎಂದು ಅಮೆರಿಕ ವಿಶ್ಲೇಷಿಸಿದೆ. ಐಸಿಸ್ ಉಗ್ರ ಸಂಘಟನೆ ಮತ್ತು ತಾಲಿಬಾನ್ ಸಂಘಟನೆಗೆ ಅನುಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ನೀಡಲಾಗಿದೆ. ಬೋಕೊ ಹರಮ್ ಉಗ್ರ ಸಂಘಟನೆಯನ್ನು ಹಿಂದಿಕ್ಕಿರುವ ಸಿಪಿಐ(ಮಾವೋವಾದಿ) ನಕ್ಸಲರು ಕಳೆದ ವರ್ಷ 336 ಭಯೋತ್ಪಾದಕ ದಾಳಿ ನಡೆಸಿದ್ದು ಇದರಲ್ಲಿ 174 ಮಂದಿ ಮೃತಪಟ್ಟಿದ್ದು 141 ಮಂದಿ ಗಾಯಗೊಂಡಿದ್ದಾರೆ. ಭಾರತದಲ್ಲಿ ನಡೆದಿರುವ ಮೂರನೇ ಎರಡರಷ್ಟು ಭಯೋತ್ಪಾದಕ ದಾಳಿ ಪ್ರಕರಣದ ಹಿಂದೆ ನಕ್ಸಲರ ಪಾತ್ರವಿದೆ ಎಂದು ಅಮೆರಿಕದ ವರದಿಯಲ್ಲಿ ತಿಳಿಸಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X