ಯಂತ್ರಕ್ಕೆ ಸಿಲುಕಿ ಯುವಕ ಸಾವು

ನಾಗಮಂಗಲ, ಜು.23: ಜಮೀನು ಉಳುಮೆ ಮಾಡುತ್ತಿದ್ದಾಗ ರೋಟವೇಟರಿ ಯಂತ್ರಕ್ಕೆ ಸಿಲುಕಿ ಯುವಕನೋರ್ವ ಸ್ಥಳದಲ್ಲೆ ಸಾವನ್ನಪ್ಪಿರುವ ದುರ್ಘಟನೆ ತಾಲೂಕಿನ ಗಿಡುವಿನ ಹೊಸಹಳ್ಳಿ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಗ್ರಾಮದ ಲಕ್ಕೇಗೌಡರ ಮಗ ಲೋಕೇಶ್(22) ಸಾವನ್ನಪ್ಪಿದ ದುರ್ದೈವಿಯಾಗಿದ್ದು, ಈತ ತನ್ನ ಜಮೀನು ಉಳುಮೆಗಾಗಿ ತಾಲೂಕಿನ ಅಘಲಯ ಬಳಿಯ ಚಟ್ಟನಹಳ್ಳಿ ಗ್ರಾಮದ ರವಿ ಎಂಬುವರಿಗೆ ಸೇರಿದ ರೋಟವೇಟರಿ ಟ್ರ್ಯಾಕ್ಟರ್ ಬಾಡಿಗೆಗೆ ಕರೆಸಿದ್ದಾಗ ಘಟನೆ ಸಂಭವಿಸಿದೆ.
ತಡರಾತ್ರಿಯಾದರೂ ಜಮೀನಿನ ಉಳುಮೆ ಮುಂದುವರಿದಿತ್ತು. ಈ ಸಂದರ್ಭದಲ್ಲಿ ರೋಟವೇಟರಿ ಯಂತ್ರಕ್ಕೆ ಸಿಲುಕಿಕೊಂಡಿದ್ದ ಹುಲ್ಲನ್ನು ತೆಗೆಯಲು ಲೋಕೇಶ್ ಯತ್ನಿಸಿದ್ದು, ಇದನ್ನು ತಿಳಿಯದ ಚಾಲಕ ಯಂತ್ರವನ್ನು ಹಿಂದಕ್ಕೆ ಚಲಿಸಿದ್ದಾನೆ. ಆಗ ಯಂತ್ರಕ್ಕೆ ಸಿಲುಕಿ ಲೋಕೇಶ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





