ಪಿ.ಎಫ್.ಐ ಬಜ್ಪೆ ಡಿವಿಶನ್ ವತಿಯಿಂದ ಈದ್ ಮಿಲನ್ ಕ್ರೀಡಾಕೂಟ

ಬಜ್ಪೆ,ಜು.23: ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ ಬಜ್ಪೆ ಡಿವಿಶನ್ ಇದರ ವತಿಯಿಂದ ಈದ್ ಮಿಲನ್ ಕ್ರಿಡಾ ಕೂಟವು ಪಣಂಬೂರು ಬೀಚ್ ನಲ್ಲಿ ನಡೆಯಿತು ಪಾಪ್ಯುಲರ್ ಪ್ರಂಟ್ ದ.ಕ.ಜಿಲ್ಲಾ ಕಾರ್ಯದರ್ಶಿ ಎ.ಕೆ. ಆಶ್ರಪ್ ರವರು ಧ್ವಜಾರೋಹಣ ನೆರವೇರೆಸಿ ಪ್ರಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಕಾರ್ಯದರ್ಶಿ ಸಿರಾಜ್ ಕಾವೂರು,ಜಿಲ್ಲಾ ಸಮಿತಿ ಸದಸ್ಯರಾದ ಅಬ್ದುಲ್ ಮಜೀದ್ ಡಿವಿಶನ್ ಕಾರ್ಯದರ್ಶಿಗಳಾದ ರಿಯಾಝ್ ರವರು ಉಪಸ್ಥಿತರಿದ್ದರು.
ಬಜ್ಪೆ, ಸುಂಕದಕಟ್ಟೆ ,ಜೋಕಟ್ಟೆ,ಕಾವುರು ವ್ಯಾಪ್ತಿಯ ಕ್ರೀಡಾಳುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು .ನಝೀರ್ ಮುಸ್ಲಿಯಾರ್ ಸಮಾರೋಪ ಭಾಷಣ ಮಾಡಿದರು.ಜಮಾಲ್ ಕಾರ್ಯಕ್ರಮವನ್ನು ನಿರೂಪಿಸಿದರು.
Next Story





