2020ರಲ್ಲಿ ಹೆಚ್ಚಲಿದೆ ಸೈಬರ್ ಬೆದರಿಕೆ
.jpg)
ಹೊಸದಿಲ್ಲಿ, ಜು. 22: ಭಾರತದಲ್ಲಿ ಮುಂದಿನ ಕೆಲವು ವರ್ಷಗಳಲ್ಲಿ ಅತ್ಯಾಧುನಿಕ ಹಾಗೂ ವಿನಾಶಕಾರಿ ಸೈಬರ್ ಬೆದರಿಕೆ ಹೆಚ್ಚಲಿದೆ. 200 ದಶಲಕ್ಷ ಮಾಲ್ವೇರ್ (ಕಂಪ್ಯೂಟರ್ ವ್ವವಸ್ಥೆಯನ್ನು ಹಾಳುಗೆಡಹುವುದು) ಹಾಗೂ 1,90,000 ವಿಶಿಷ್ಟ ಒಳನುಸುಳವಿಕೆ ಮೂಲಕ ಈ ಬೆದರಿಕೆ ಉಂಟಾಗಲಿದೆ.
2000 ಇಸವಿಯಲ್ಲಿ ಸೈಬರ್ ಬೆದರಿಕೆ ವೈರಸ್ ಹಾಗೂ ತೊಂದರೆ ನೀಡುವ ದಾಳಿಗಳಿಂದ ಉಂಟಾಗುತ್ತಿತ್ತು. ಆದರೆ, ಈಗ ಅತ್ಯಾಧುನಿಕ ಮಾಲ್ವೇರ್ ಹಾಗೂ ಸುಧಾರಿತ ಸೇವೆ ನಿರಾಕರಣೆಯ ಸೈಬರ್ ಬೆದರಿಕೆ ಸೃಷ್ಟಿಯಾಗಿದೆ. ಇದು 2020ರ ವೇಳೆಗೆ ಗಂಭೀರ ಅಪಾಯ ಉಂಟು ಮಾಡಬಹುದು ಎಂದು ಭಾರತದ ಸೈಬರ್ ಭದ್ರತಾ ಮುಖ್ಯಸ್ಥ ಗುಲ್ಶನ್ ರೈ ಸಂಸತ್ತಿನ ಆರ್ಥಿಕ ಸ್ಥಾಯಿ ಸಮಿತಿಗೆ ತಿಳಿಸಿದರು.
ಕಳ್ಳತನ, ಬೇಹುಗಾರಿ, ನಕಲು ಮಾಡುವ ಉದ್ದೇಶದಿಂದ ಕೇಂದ್ರ, ರಾಜ್ಯ ಸರಕಾರವನ್ನು ಗುರಿಯಾಗಿರಿಸಿ ದಾಳಿ ನಡೆಯಲಿದೆ. 2015 ಹಾಗೂ 2016ರಲ್ಲಿ ಸರಕಾರಿ ವಲಯದಲ್ಲಿ ಶೇ. 27ರಿಂದ 29ರಷ್ಟು ಸೈಬರ್ ದಾಳಿ ನಡೆದಿತ್ತು.
ಸೈಬರ್ ಕ್ರಿಮಿನಲ್‌ಗಳ ಆದ್ಯತೆ ನೀಡುವ ಇತರ ವಲಯಗಳೆಂದರೆ ಬ್ಯಾಂಕಿಂಗ್, ಇಂಧನ, ಟೆಲಿಕಾಂ ಹಾಗೂ ಸೇನೆ. ಇದೆಲ್ಲವೂ ಸರಕಾರಿ ಸ್ವಾಮಿತ್ವದಲ್ಲಿ ಇದೆ. ತುರ್ತು ಸುದ್ದಿ ಸೇವೆ ಹಾಗೂ ಆ್ಯಪ್‌ಗಳು ಕ್ಲೌಡ್ ಹಾಗೂ ಕಾಗ್ನೇಟಿವ್ ತಂತ್ರಜ್ಞಾನಗಳು ಅಸ್ತಿತ್ವಕ್ಕೆ ಬರುತ್ತಿರುವುದು ಸೈಬರ್ ಭದ್ರತೆಗೆ ಸವಾಲಾಗಿ ಪರಿಣಮಿಸಿದೆ ಎಂದು ಇಂಡಿ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ತಂಡದ ಮುಖ್ಯಸ್ಥ ಸಮಿತಿಗೆ ಮಾಹಿತಿ ನೀಡಿದರು.







