ಶಾಲೆಯಲ್ಲಿ ಬಾಲಕರಿಗೆ ಗೃಹವಿಜ್ಞಾನ ಕಡ್ಡಾಯ: ಪ್ರಸ್ತಾಪ ಸಲ್ಲಿಸಿರುವ ಕೇಂದ್ರ ಸರಕಾರ
.jpg)
ಹೊಸದಿಲ್ಲಿ, ಜು. 23: ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಸಿದ್ಧಪಡಿಸದ ಕರಡು ಪ್ರಸ್ತಾಪವನ್ನು ಕೇಂದ್ರ ಸಂಪುಟ ಅಂಗೀಕರಿಸಿದರೆ ಶಾಲೆಯಲ್ಲಿ ಬಾಲಕರಿಗೆ ಗೃಹ ವಿಜ್ಞಾನ ಕಲಿಕೆ ಕಡ್ಡಾಯವಾಗಬಹುದು.
ಮಹಿಳೆಯರಿಗಾಗಿ ರಾಷ್ಟ್ರೀಯ ನೀತಿ-2017ರ ಕರಡನ್ನು ಇತ್ತೀಚೆಗೆ ಅನುಮೋದಿ ಸಿರುವ ಸಚಿವರ ಗುಂಪು ಅದನ್ನು ಸಂಪುಟಕ್ಕೆ ಕಳುಹಿಸಿಕೊಟ್ಟಿದೆ ಎಂದು ಸಚಿವಾಲಯದ ವಕ್ತಾರ ತಿಳಿಸಿದ್ದಾರೆ.
ಯೌವನಾವಸ್ಥೆಯಲ್ಲಿ ಆರಂಭವಾಗುವ ಲಿಂಗತ್ವದ ಪಾತ್ರದ ಮರು ವ್ಯಾಖ್ಯಾನ, ಮಹಿಳೆಯರಿಗೆ ಹೊಸ ಉದ್ಯೋಗ ಅವಕಾಶ ಸೃಷ್ಟಿಸುವುದು ಹಾಗೂ ಅವರಿಗೆ ತೆರಿಗೆ ವಿನಾಯಿತಿ ನೀಡುವ ಉದ್ದೇಶದಿಂದ ಕರಡಿಗೆ ಹಲವು ಶಿಫಾರಸು ಮಾಡಲಾಗಿದೆ.
ಲಿಂಗತ್ವ ಸಂವೇದನೆ ಉತ್ತೇಜಿಸಲು ಹಾಗೂ ಬಾಲಕರು ಹಾಗೂ ಬಾಲಕಿಯರಿಗೆ ದೈಹಿಕ ಶಿಕ್ಷಣ ಹಾಗೂ ಗೃಹ ವಿಜ್ಞಾನ ಕಡ್ಡಾಯಗೊಳಿಸಲು ಶಾಲಾ ಪಠ್ಯವನ್ನು ಮರು ವಿನ್ಯಾಸವನ್ನು ಗೃಹ ಸಚಿವಾಲಯದ ಕರಡು ನೀತಿ ಪ್ರಸ್ತಾಪಿಸುತ್ತದೆ ದುಡಿಯುವ ಮಹಿಳೆಯರಿಗೆ ಉತ್ತೇಜನ, ಸಮಾನ ವೇತನೆ, ಮಹಿಳಾ ಸಂಸ್ಥೆಗಳಿಗೆ ತೆರಿಗೆ ವಿನಾಯತಿ, ಕಾರ್ಪೋರೇಟ್, ವಾಣಿಜ್ಯ ವಲಯ, ಗೃಹ ಸಂಕೀರ್ಣದಲ್ಲಿ ಕಡ್ಡಾಯ ಶಿಶು ಪಾಲನ ಕೇಂದ್ರಗಳನ್ನು ಒದಗಿಸುವಂತೆ ಮಸೂದೆ ಕೋರುತ್ತದೆ ಎಂದು ಅವರು ಹೇಳಿದ್ದಾರೆ.





