ಕಡಬ: ಸಾಲ ಬಾಧೆಯಿಂದ ರೈತ ಆತ್ಮಹತ್ಯೆ

ಕಡಬ, ಜು.23. ಠಾಣಾ ವ್ಯಾಪ್ತಿಯ ಕುಟ್ರುಪ್ಪಾಡಿ ನಿವಾಸಿ ರೈತನೋರ್ವ ಸಾಲ ಬಾಧೆಯಿಂದಾಗಿ ಬೇಸತ್ತು ಶನಿವಾರದಂದು ವಿಷ ಸೇವಿಸಿದ್ದು, ಭಾನುವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತಪಟ್ಟ ರೈತನನ್ನು ಕುಟ್ರುಪ್ಪಾಡಿ ಕಾಂಞರವಿಳ ನಿವಾಸಿ ರಾಜು(54) ಎಂದು ಗುರುತಿಸಲಾಗಿದೆ. ಅಪಾರ ಸಾಲದಿಂದಿದ್ದು, ಕೃಷಿಯಲ್ಲಿನ ಬೆಲೆಯೇರಿಕೆಯಿಂದಾಗಿ ಬೇಸತ್ತು ಶನಿವಾರ ಸಂಜೆ ವಿಷ ಸೇವಿಸಿದ ರಾಜುರವರು ಪುತ್ತೂರಿನ ಪ್ರಗತಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದರು. ಭಾನುವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆನ್ನಲಾಗಿದೆ.
Next Story





