Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ವಾರ್ತಾಭಾರತಿವಾರ್ತಾಭಾರತಿ24 July 2017 12:07 AM IST
share
ಓ ಮೆಣಸೇ...

  ಡೋಕಾಲ್ ಗಡಿ ವಿಚಾರದಲ್ಲಿ ಎಲ್ಲ ದೇಶಗಳು ನಮ್ಮಂದಿಗಿವೆ

-ಸುಶ್ಮಾ ಸ್ವರಾಜ್,ಕೇಂದ್ರ ಸಚಿವೆ

ಪೂರ್ಣ ಪ್ರಮಾಣದ ರಕ್ಷಣಾ ಸಚಿವರು ಮಾತ್ರ ನಿಮ್ಮ ಜೊತೆಯಲ್ಲಿಲ್ಲ ಎನ್ನುವುದು ದುಃಖದ ಸಂಗತಿ.

---------------------

ನನ್ನ ಪತ್ನಿಗೆ ವರ್ಷದ ‘ಅತ್ಯುತ್ತಮ ಮಹಿಳಾ ಸಂಸದೆ’ ಗೌರವ ಸಂದಿರುವುದು ಹೆಮ್ಮೆಯ ವಿಚಾರ

-ಅಮಿತಾಭ್ ಬಚ್ಚನ್, ಬಾಲಿವುಡ್ ನಟ

ರಾಜಕೀಯದಲ್ಲೂ ಅತ್ಯುತ್ತಮವಾಗಿ ನಟಿಸಿರುವುದಕ್ಕೆ ಈ ಪ್ರಶಸ್ತಿ ಇರಬಹುದು.

---------------------
ಹಿಂದಿ ಹೇರಿಕೆ ಬಗ್ಗೆ ಎಂದು ನಾನು ಖಡಕ್ ಅಭಿಪ್ರಾಯ ವ್ಯಕ್ತಪಡಿಸಿದೆನೋ ಅಂದೇ ನಾನು ಹವ್ಯಾಸಿ ರಾಜಕಾರಣಿಯಾಗಿ ಬಿಟ್ಟೆ

-ಕಮಲ್ ಹಾಸನ್, ನಟ 
  ಜಿಎಸ್‌ಟಿ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿ ಮೋದಿ ದ್ರೋಹಿ, ದೇಶದ್ರೋಹಿಯೂ ಆಗಿದ್ದೀರಿ. ನೆನಪಿರಲಿ.
---------------------

ಪ್ರತಿಪಕ್ಷದವರು ಎಲ್ಲದರಲ್ಲೂ ಯಾಕೆ ತಪ್ಪು ಹುಡುಕುತ್ತಿದ್ದಾರೆ?
-ಯು.ಟಿ.ಖಾದರ್,ಸಚಿವ
ಬಹುಶಃ ಕೇಂದ್ರದ ಪ್ರತಿಪಕ್ಷದವರಂತೆ ಬಾಯಿ ಮುಚ್ಚಿಕೂರಬೇಕು ಎನ್ನುತ್ತೀರಾ?
---------------------
ಈ ಸಲ ಬೇರೆಯವರು ಸಿಎಂ ಆಗಲಿ ಎಂದು ಹೈಕಮಾಂಡ್ ಹೇಳಿದರೆ ಸಿದ್ದರಾಮಯ್ಯ ಒಪ್ಪಿಕೊಳ್ಳಬೇಕು.

-ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

ಈ ಸಲವೂ ಇವರೇ ಸಿಎಂ ಆಗಲಿ ಎಂದು ಜನ ಹೇಳಿದರೆ?

---------------------
ಕರುನಾಡಿಗೆ ಬೆಂಕಿ ಹಚ್ಚಲು ಯಾರಿಂದಲೂ ಅಸಾಧ್ಯ

-ಸಿದ್ದರಾಮಯ್ಯ, ಮುಖ್ಯಮಂತ್ರಿ

ಬೆಂಕಿ ಹಚ್ಚುವುದನ್ನೇ ರಾಜಕೀಯ ಎಂದು ತಿಳಿದುಕೊಂಡವರು ಇರುವವರೆಗೆ ಜಾಗೃತೆಯಾಗಿರಿ.

---------------------

ರಾಷ್ಟ್ರಪತಿ ಆಗುತ್ತೇನೆಂದು ನಾನು ಯಾವತ್ತೂ ಕನಸು ಕಂಡಿರಲಿಲ್ಲ

- ರಾಮನಾಥ್ ಕೋವಿಂದ್, ನಿಯೋಜಿತ ರಾಷ್ಟ್ರಪತಿ

ಅದು ಡಾ. ಅಂಬೇಡ್ಕರ್ ಕಂಡ ಕನಸು ಎನ್ನುವುದು ನಿಮಗೆ ನೆನಪಿರಲಿ.

---------------------

ಧ್ವಜದ ಸಾಂಸ್ಕೃತಿಕ ಬಳಕೆಗೆ ನಮ್ಮ ವಿರೋಧವಿಲ್ಲ

-ಸಿ.ಟಿ.ರವಿ, ಶಾಸಕ

ಮತ್ತೇಕೆ ಭಗವಾಧ್ವಜವನ್ನು ರಾಜಕೀಯಕ್ಕೆ ಬಳಕೆ ಮಾಡುತ್ತೀರಿ?

---------------------
 ಗುರು ಪರಂಪರೆ ದೇಶವನ್ನು ಉಳಿಸಿದೆ

 -ನಳಿನ್ ಕುಮಾರ್ ಕಟೀಲು, ಸಂಸದ

ಕಲ್ಲಡ್ಕದ ನಿಮ್ಮ ಗುರು ಪರಂಪರೆ ಅಳಿಸುವುದರಲ್ಲಿ ಹೆಚ್ಚು ಆಸಕ್ತಿ ತಾಳಿದೆ.

---------------------
ಶರತ್ ಕೊಲೆ ಪ್ರಕರಣವನ್ನು ತನಿಖೆ ಮಾಡಲು ದ.ಕ.ಜಿಲ್ಲಾ ಪೊಲೀಸರು ಸಮರ್ಥರಿದ್ದಾರೆ.

-ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆ ಮುಖಂಡ

ಹೌದೆ? ಹಾಗಾದರೆ ಎನ್‌ಐಎ ತನಿಖೆ ನಡೆಯಲೇ ಬೇಕಾಗುತ್ತದೆ.

---------------------
ಪತ್ರಕರ್ತರು ರಾಷ್ಟ್ರೀಯ ಪ್ರಜ್ಞೆ ಬೆಳೆಸಿಕೊಳ್ಳಬೇಕು.

-ವೀರಪ್ಪ ಮೊಯ್ಲಿ, ಸಂಸದ

ತಾವು ಬರೇ ಕೂದಲು ಬೆಳೆಸಿಕೊಂಡರೆ ಸಾಕೇ?
---------------------

ವೆಂಕಯ್ಯ ನಾಯ್ಡ್ಡು ಬಾಲ್ಯದಿಂದಲೂ ಬಿಜೆಪಿ ಜೊತೆ ಗುರುತಿಸಿಕೊಂಡವರು

-ಅಮಿತ್ ಶಾ, ಬಿಜೆಪಿ ಅಧ್ಯಕ್ಷ

ಬಿಜೆಪಿಯ ‘ಚೆಡ್ಡಿ’ ದೋಸ್ತ್ ಎಂದಾಯಿತು.

---------------------
ಯಡಿಯೂರಪ್ಪ ಮನೆಯನ್ನು ಮಧ್ಯರಾತ್ರಿ ತಲಾಶ್ ಮಾಡಿದ್ದು ಸರಿಯಲ್ಲ

- ಜಗದೀಶ್ ಶೆಟ್ಟರ್, ಬಿಜೆಪಿ ನಾಯಕ

ರಾಜಕಾರಣಿಗಳ ಮನೆಯಲ್ಲಿ ರಾತ್ರಿ ತಲಾಶ್ ಮಾಡಿದರೆ ಅಧಿಕಾರಿಗಳು ನೋಡಬಾರದ್ದನ್ನು ನೋಡಬೇಕಾದೀತು. ---------------------

ಗೋವಿನ ಹೆಸರಲ್ಲಿ ಹಿಂಸೆ ನಡೆಸುವವರ ವಿರುದ್ಧ ರಾಜ್ಯ ಸರಕಾರಗಳು ಕ್ರಮ ಜರುಗಿಸಲಿ

- ನರೇಂದ್ರ ಮೋದಿ, ಪ್ರಧಾನಿ

ರಾಜ್ಯ ಸರಕಾರಕ್ಕೆ ಸವಾಲು ಹಾಕುತ್ತಿರುವಂತಿದೆ.

---------------------
ವಿದ್ಯುತ್ ವಿತರಣೆಯಲ್ಲಿ ಮೆಸ್ಕಾಂ ತಾರತಮ್ಯ ಮಾಡಬಾರದು
-  ಶಕುಂತಳಾ ಶೆಟ್ಟಿ, ಶಾಸಕಿ

ಬಿಲ್ ವಿತರಣೆಯ ಸಂದರ್ಭದಲ್ಲಿ ಮಾಡಿದರೆ ಅಡ್ಡಿಯಿಲ್ಲವೇ?
---------------------

ಜೆಡಿಎಸ್ ಒಡೆದ ಮನೆಯಲ್ಲ.
-ಎಚ್.ಡಿ.ರೇವಣ್ಣ , ಜೆಡಿಎಸ್ ಮುಖಂಡ  
ದೇವೇಗೌಡರು ಒಡೆದ ಮನೆ ತೋರಿಸಿ ಮಳೆ ಪರಿಹಾರಕ್ಕೆ ಅರ್ಜಿ ಹಾಕಿದ್ದಾರಂತೆ.

---------------------
  ಇನ್ನು ಮುಂದೆ ನಾನು ಯಾವುದೇ ಪಕ್ಷಕ್ಕೆ ಸಂಬಂಧಿಸಿದ ವ್ಯಕ್ತಿ ಅಲ್ಲ
-ವೆಂಕಯ್ಯ ನಾಯ್ಡು, ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ
ಬರೇ ಸಂಸ್ಥೆಗಷ್ಟೇ ಮೀಸಲೇ?
---------------------

ದೇಶದ ಜನತೆಯ ಮನೆ-ಮನಗಳಲ್ಲಿ ಪ್ರಧಾನಿ ಮೋದಿ ನೆಲೆಯೂರಿದ್ದಾರೆ

- ಅರಗ ಜ್ಞಾನೇಂದ್ರ, ಮಾಜಿ ಶಾಸಕ

ಹೌದು, ಒಂದು ಗಾಯದ ಹಾಗೆ.

---------------------
ಸ್ಪರ್ಧಾತ್ಮಕ ಯುಗದಲ್ಲಿ ಪ್ರಶಸ್ತಿ ಗೆಲ್ಲುವುದು ಸುಲಭವಲ್ಲ

-ಸಚಿನ್ ತೆಂಡೂಲ್ಕರ್, ಮಾಜಿ ಕ್ರಿಕೆಟಿಗ

ರಾಜ್ಯಸಭಾ ಸದಸ್ಯನಾಗುವಷ್ಟು ಯಾವುದೂ ಸುಲಭವಲ್ಲ.

---------------------

  ಐಪಿಎಸ್ ಅಧಿಕಾರಿಗಳ ವರ್ಗಾವಣೆ ಶಿಕ್ಷೆಯಲ್ಲ

  -ಟಿ.ಬಿ. ಜಯಚಂದ್ರ, ಕಾನೂನು ಸಚಿವ

ಹಾಗಾದರೆ ಭಿಕ್ಷೆಯೇ?
---------------------
ಗೋವಾದಲ್ಲಿ ಬೀಫ್ ಕೊರತೆಯಾದರೆ ಕರ್ನಾಟಕದಿಂದ ತರಿಸೋಣ

- ಮನೋಹರ್ ಪಾರಿಕ್ಕರ್, ಗೋವಾ ಸಿಎಂ

ಕರ್ನಾಟಕದಲ್ಲಿರುವ ಗೋರಕ್ಷಕರನ್ನೂ ಜೊತೆಗೆ ಆಮದು ಮಾಡಿಕೊಳ್ಳಿ.

---------------------

  ನನ್ನನ್ನು ರಾಜಕೀಯವಾಗಿ ಮಣಿಸಲು ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ

  -ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಅದಕ್ಕೆ ಬಿಜೆಪಿಯೊಳಗಿರುವ ಜನರೇ ಸಾಕಾಗುವುದಿಲ್ಲವೇ?
---------------------

ಕಾಂಗ್ರೆಸಿಗರ ರಕ್ತದ ಕಣ ಕಣದಲ್ಲೂ ದೇಶ ಭಕ್ತಿ ಅಡಗಿದೆ

-ರೋಷನ್ ಬೋಗ್, ಸಚಿವ

ರಕ್ತ ಪರೀಕ್ಷೆ ಮಾಡಿಸಿ, ಯಾವ ದೇಶ ಎನ್ನುವುದನ್ನು ಖಚಿತ ಮಾಡಿಕೊಳ್ಳಿ 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X