Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಪ್ರತಿರೋಧಕ್ಕೆ ಇಬ್ಬರು ಪತ್ರಕರ್ತರು...

ಪ್ರತಿರೋಧಕ್ಕೆ ಇಬ್ಬರು ಪತ್ರಕರ್ತರು ತೆತ್ತ ಬೆಲೆ

ಸನತ್ ಕುಮಾರ್ ಬೆಳಗಲಿಸನತ್ ಕುಮಾರ್ ಬೆಳಗಲಿ24 July 2017 12:15 AM IST
share
ಪ್ರತಿರೋಧಕ್ಕೆ ಇಬ್ಬರು ಪತ್ರಕರ್ತರು ತೆತ್ತ ಬೆಲೆ

ರೈತರ ಆತ್ಮಹತ್ಯೆಗಳ ಬಗ್ಗೆ, ದಲಿತರ ಕಗ್ಗೊಲೆಗಳ ಬಗ್ಗೆ, ಮಹಿಳೆಯರ ಮಾರಾಟದ ಬಗ್ಗೆ, ಮರಳು ಗಣಿಗಾರಿಕೆ ಬಗ್ಗೆ, ಅರಣ್ಯನಾಶದ ಬಗ್ಗೆ ಬರೆಯುವ ಉಸಾಬರಿಗೆ ಹೋಗಬಾರದು. ಅದಾನಿ, ಅಂಬಾನಿ, ಮಿತ್ತಲ್‌ಗಳಂತಹ ಕಾರ್ಪೊರೇಟ್ ಧಣಿಗಳನ್ನು ಮತ್ತು ಆ ಕಂಪೆನಿಗಳ ಕಾವಲಿಗೆ ಇರುವ ಪ್ರಧಾನಿ ಬಗ್ಗೆ, ಪರಿವಾರದ ಬಗ್ಗೆ ಏನಾದರೂ ಬರೆದರೆ, ಮಾತನಾಡಿದರೆ, ಆ ಬಗ್ಗೆ ವಾಹಿನಿಗಳಲ್ಲಿ ಚರ್ಚಿಸಿದರೆ ನಿಮ್ಮ ನೌಕರಿ ಉಳಿಯುವ ಬಗ್ಗೆ ಗ್ಯಾರಂಟಿ ಇಲ್ಲ. ಇರುವ ಕೆಲಸ ಕಳೆದುಕೊಂಡು ಸಂಸಾರದೊಂದಿಗೆ ಬೀದಿಪಾಲು ಆಗಬೇಕಾಗುತ್ತದೆ.

ಪ್ರತಿರೋಧವಿಲ್ಲದ ಪ್ರಜಾಪ್ರಭುತ್ವ ಇಂದಿನ ಆಳುವ ವರ್ಗದ ಹೆಬ್ಬಯಕೆ ಆಗಿದೆಯೆಂದು ಕಳೆದ ವಾರ ಇದೇ ಅಂಕಣದಲ್ಲಿ ಬರೆದಿದ್ದೆ. ಇದನ್ನು ಬರೆದ ಒಂದೇ ವಾರದಲ್ಲಿ ಪ್ರತಿರೋಧದ ಉಸಿರೆತ್ತಿದ ಇಬ್ಬರು ಪತ್ರಕರ್ತರು ಪ್ರಭುತ್ವದ ವಕ್ರದೃಷ್ಟಿಗೆ ಬಲಿಯಾಗಿದ್ದಾರೆ. ಬರಲಿರುವ ದಿನಗಳಲ್ಲಿ ಇಂತಹ ಬಲಿದಾನಗಳು ಇನ್ನಷ್ಟು ನಡೆದರೆ ಅಚ್ಚರಿಪಡಬೇಕಿಲ್ಲ. ತುರ್ತು ಪರಿಸ್ಥಿತಿಗಿಂತ ಕೆಟ್ಟ ದಿನಗಳು ತುರ್ತು ಪರಿಸ್ಥಿತಿ ಘೋಷಿಸದೇ ಜಾರಿಗೆ ಬರುತ್ತಿವೆ.

ಮಾಧ್ಯಮಗಳಲ್ಲಿ ಕೆಲಸ ಮಾಡುವವರು, ಅದು ಮುದ್ರಣ ಮಾಧ್ಯಮವಾಗಿರಲಿ ಇಲ್ಲವೇ ವಿದ್ಯುನ್ಮಾನ ಮಾಧ್ಯಮವಾಗಿರಲಿ, ಈ ಕಾಲದಲ್ಲಿ ಕೆಲ ಕಟ್ಟುಪಾಡುಗಳನ್ನು ಪಾಲಿಸಬೇಕಾಗುತ್ತದೆ. ಕಣ್ಣ ಮುಂದೆ ನಡೆಯುತ್ತಿರುವ ಅನ್ಯಾಯಗಳನ್ನು ಕಂಡರೂ ಕುರುಡತನ ನಟಿಸಬೇಕಾಗುತ್ತದೆ. ಕಿವಿಗೆ ಕೆಟ್ಟ ಸುದ್ದಿ ಬಿದ್ದರೆ, ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಬಿಟ್ಟುಬಿಡಬೇಕು. ಮಾತನಾಡಬೇಕೆಂದು ಅನ್ನಿಸಿದ ಮಾತುಗಳನ್ನು ಗಂಟಲ ಒಳಗೇ ಇಟ್ಟುಕೊಳ್ಳಬೇಕು. ಗಾಂಧೀಜಿ ಆಶ್ರಮದ ಮೂರು ಮಂಗಗಳಂತೆ ಕಣ್ಣು, ಕಿವಿ ಮತ್ತು ಬಾಯಿ ಮುಚ್ಚಿಕೊಂಡಿದ್ದರೆ ಸುಖವಾಗಿರಬಹುದು.

ರೈತರ ಆತ್ಮಹತ್ಯೆಗಳ ಬಗ್ಗೆ, ದಲಿತರ ಕಗ್ಗೊಲೆಗಳ ಬಗ್ಗೆ, ಮಹಿಳೆಯರ ಮಾರಾಟದ ಬಗ್ಗೆ, ಮರಳು ಗಣಿಗಾರಿಕೆ ಬಗ್ಗೆ, ಅರಣ್ಯನಾಶದ ಬಗ್ಗೆ ಬರೆಯುವ ಉಸಾಬರಿಗೆ ಹೋಗಬಾರದು. ಅದಾನಿ, ಅಂಬಾನಿ, ಮಿತ್ತಲ್‌ಗಳಂತಹ ಕಾರ್ಪೊರೇಟ್ ಧಣಿಗಳನ್ನು ಮತ್ತು ಆ ಕಂಪೆನಿಗಳ ಕಾವಲಿಗೆ ಇರುವ ಪ್ರಧಾನಿ ಬಗ್ಗೆ, ಪರಿವಾರದ ಬಗ್ಗೆ ಏನಾದರೂ ಬರೆದರೆ, ಮಾತನಾಡಿದರೆ, ಆ ಬಗ್ಗೆ ವಾಹಿನಿಗಳಲ್ಲಿ ಚರ್ಚಿಸಿದರೆ ನಿಮ್ಮ ನೌಕರಿ ಉಳಿಯುವ ಬಗ್ಗೆ ಗ್ಯಾರಂಟಿ ಇಲ್ಲ. ಇರುವ ಕೆಲಸ ಕಳೆದುಕೊಂಡು ಸಂಸಾರದೊಂದಿಗೆ ಬೀದಿಪಾಲು ಆಗಬೇಕಾಗುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಸುದ್ದಿ ಪ್ರಕಟನೆಗೂ ಮುನ್ನ ಸೆನ್ಸಾರ್‌ಶಿಪ್ ಇತ್ತು. ಆದರೆ ಯಾರೂ ಕೆಲಸ ಕಳೆದುಕೊಂಡಿರಲಿಲ್ಲ. ಆಗ ಖಾದ್ರಿ ಶಾಮಣ್ಣ ಅವರು ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿದ್ದರು.

ಅಂದಿನ ದೇವರಾಜ ಅರಸು ನೇತೃತ್ವದ ಸರಕಾರದಲ್ಲಿ ಮಂತ್ರಿಯಾಗಿದ್ದ ಎಂ.ವೈ.ಘೋರ್ಪಡೆ ಅವರು ಸಂಯುಕ್ತ ಕರ್ನಾಟಕ ಪತ್ರಿಕೆ ನಡೆಸುವ ಸಂಸ್ಥೆಯ ಮಾಲಕರಾಗಿದ್ದರು. ಖಾದ್ರಿ ಅವರು ಅಧಿಕಾರಿಗಳಿಗೆ ತಿಳಿಯದ ಭಾಷೆಯಲ್ಲಿ ಇಂದಿರಾ ಗಾಂಧಿ ಸರಕಾರದ ವಿರುದ್ಧ ಸೂಕ್ಷ್ಮವಾಗಿ ಬರೆಯುತ್ತಿದ್ದರು. ಆಗ ವೇಷ ಬದಲಿಸಿಕೊಂಡು ದೇಶದ ತುಂಬಾ ಓಡಾಡುತ್ತಿದ್ದ ಸಮಾಜವಾದಿ ನಾಯಕ ಜಾರ್ಜ್ ಫೆರ್ನಾಂಡಿಸ್ ಆಗಾಗ ಬಂದು ಯಾರಿಗೂ ಗೊತ್ತಾಗದಂತೆ ಖಾದ್ರಿ ಅವರನ್ನು ಭೇಟಿಯಾಗಿ ಹೋಗುತ್ತಿದ್ದರು. ಇದು ತುರ್ತು ಪರಿಸ್ಥಿತಿಯಲ್ಲಿನ ಪತ್ರಕರ್ತರ ಪರಿಸ್ಥಿತಿ.

ಆದರೆ ಈಗ ಅಘೋಷಿತ ತುರ್ತು ಪರಿಸ್ಥಿತಿಯ ಕಾಲ. ಕಾರ್ಪೊರೇಟ್ ಧಣಿಗಳನ್ನು ಟೀಕಿಸಿ, ಸುರಕ್ಷಿತವಾಗಿ ಉಳಿಯುವುದು ಈಗ ಸುಲಭವಲ್ಲ. ಈ ದೇಶದ ಭಾರೀ ದೊಡ್ಡ ಕಾರ್ಪೊರೇಟ್ ಕಂಪೆನಿ ಅದಾನಿ ಪವರ್ ಲಿಮಿಟೆಡ್ ಬಗ್ಗೆ ಎರಡು ಲೇಖನಗಳು ಬರೆದ ತಪ್ಪಿಗಾಗಿ ಮುಂಬೈಯ ಎಕನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿ ಪತ್ರಿಕೆಯ ಸಂಪಾದಕರಾಗಿದ್ದ ಪರಂಜೊಯ ಗುಹಾ ಟಾಕುರ್ತಾ ಕೆಲಸ ಕಳೆದುಕೊಂಡಿದ್ದಾರೆ.

ಮುಂಬೈಯಿಂದ ಪ್ರಕಟವಾಗುವ ಎಕನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿ (ಇಪಿಡಬ್ಲ್ಯೂ) ಯಾವುದೇ ಕಾರ್ಪೊರೇಟ್ ಕಂಪೆನಿ ನಡೆಸುವ ಪತ್ರಿಕೆಯಲ್ಲ. ಈ ದೇಶದ ಪ್ರಗತಿಪರ ಒಲವಿನ ಜನರು ಸೇರಿ ನಡೆಸುತ್ತಿರುವ ಪತ್ರಿಕೆ. ಉಳಿದ ಯಾವ ಪತ್ರಿಕೆಗಳಲ್ಲೂ ಸಿಗದ ಲೇಖನಗಳು ಅಲ್ಲಿ ಪ್ರಕಟವಾಗುತ್ತವೆ ಎಂದು ದೇಶ-ವಿದೇಶಗಳ ಎಡಪಂಥೀಯರು ಈ ಪತ್ರಿಕೆಯನ್ನು ತರಿಸಿಕೊಂಡು ಓದುತ್ತಾರೆ. ಅನೇಕರು ಅಂತರ್ಜಾಲ ಮೂಲಕ ಓದಿ ಸ್ಫೂರ್ತಿ ಪಡೆಯುತ್ತಾರೆ. ಈ ಪತ್ರಿಕೆಯನ್ನು ಸಮೀಕ್ಷಾ ಟ್ರಸ್ಟ್ ಎಂಬ ಚಿಂತನಶೀಲರ ದತ್ತಿ ನಿಧಿ ನಡೆಸುತ್ತದೆ.

ಇಂತಹ ಪತ್ರಿಕೆ ಒಮ್ಮಿಂದೊಮ್ಮೆಲೇ ಟಾಕುರ್ತಾ ಅವರಂತಹ ಪ್ರತಿಭಾನ್ವಿತ ಸಂಪಾದಕರ ಮೇಲೆ ಕೆಂಗಣ್ಣು ಬೀರಿದೆ. ನಿಮ್ಮ 15 ತಿಂಗಳ ಸಾರಥ್ಯ ತೃಪ್ತಿ ತಂದಿಲ್ಲವೆಂದರೆ, ಅದರ ಅರ್ಥವೇನು? ಟಾಕುರ್ತಾ ಅವರ ಪ್ರಕಾರ, ಮೋದಿಯವರ ಮಿತ್ರ ಅದಾನಿಯವರ ಕಂಪೆನಿಗಳ ಭಾರೀ ಹಗರಣದ ಬಗ್ಗೆ ತಾನು ಬರೆದ ಎರಡು ಲೇಖನಗಳ ನಂತರ ಪರಿಸ್ಥಿತಿ ಒಮ್ಮೆಲೇ ಬದಲಾಯಿತು. ಅದಾನಿಯವರು ಆಡಳಿತ ವರ್ಗದ ಮೇಲೆ ಒತ್ತಡ ತಂದಿದ್ದು ಮಾತ್ರವಲ್ಲ ವಕೀಲರಿಂದ ನೋಟಿಸ್ ನೀಡಿದರು. ಇದರಿಂದ ಬೆದರಿದ ಆಡಳಿತ ವರ್ಗ ಈ ಕ್ರಮ ಕೈಗೊಂಡಿದೆ. ರೋಮಿಲಾ ಥಾಪರ್ ಅಂತಹ ಇತಿಹಾಸಕಾರರು, ದೀಪಾಂಕರ ಗುಪ್ತಾ ಅಂತಹ ಸಮಾಜಶಾಸ್ತ್ರಜ್ಞರು ಟ್ರಸ್ಟಿಗಳಾಗಿರುವ ಸಂಸ್ಥೆಯಲ್ಲಿ ಇಂತಹ ಘಟನೆಗಳು ನಡೆಯುತ್ತವೆಯೆಂದರೆ ಈ ದೇಶ ಎಲ್ಲಿ ತಲುಪಿದೆ ಎಂಬುದು ಅರ್ಥವಾಗುತ್ತಿಲ್ಲ.

ಟಾಕುರ್ತಾ ಅವರದ್ದು ಈ ಕತೆಯಾದರೆ, ಮಹಾರಾಷ್ಟ್ರದ ನಿಖಿಲ್ ವಾಗ್ಲೆಯವರದ್ದು ಇನ್ನೊಂದು ವ್ಯಥೆ. ತುಂಬಾ ಚಿಕ್ಕ ವಯಸ್ಸಿನಲ್ಲೇ 38 ವರ್ಷಗಳ ಹಿಂದೆ ಮಾಧ್ಯಮ ಲೋಕಕ್ಕೆ ಕಾಲಿಟ್ಟ ನಿಖಿಲ್ ವಾಗ್ಲೆ ಅವರು ಅಪ್ಲಾ ಮಹಾನಗರ ಎಂಬ ಮರಾಠಿ ಸಂಜೆ ದಿನ ಪತ್ರಿಕೆ ನಡೆಸುತ್ತಿದ್ದರು. 70-80ರ ದಶಕದಲ್ಲಿ ಈ ಪತ್ರಿಕೆ ಎಷ್ಟು ಜನಪ್ರಿಯ ಆಗಿತ್ತೆಂದರೆ, ಅಂದಿನ ಮಹಾರಾಷ್ಟ್ರದ ಸರ್ವಾಧಿಕಾರಿ ಮತ್ತು ಶಿವಸೇನಾ ನಾಯಕ ಬಾಳಾ ಠಾಕ್ರೆ ಇದನ್ನು ನೋಡಿ ದಿಗಿಲುಕೊಳ್ಳುತ್ತಿದ್ದರು. ಠಾಕ್ರೆಯವರನ್ನು ಎದುರಿಸಲು ಸರಕಾರ ಹಿಂಜರಿಯುತ್ತಿದ್ದ ವೇಳೆಯಲ್ಲಿ ಅವರನ್ನು ಎದುರು ಹಾಕಿಕೊಂಡು ನಿಖಿಲ್ ವಾಗ್ಲೆ ಮನೆಮಾತಾದರು. ಸುಮಾರು 7 ರಿಂದ 8 ಸಲ ನಿಖಿಲ್ ವಾಗ್ಲೆಯವರ ಕಚೇರಿ ಮೇಲೆ ಹಲ್ಲೆ ನಡೆಯಿತು. ಖುರ್ಚಿ ಮತ್ತು ಟೇಬಲ್ ಸುಟ್ಟು ಹಾಕಿದರು. ಆದರೂ ಹೆದರದ ವಾಗ್ಲೆಯವರು ಮೈ ತುಂಬಾ ಬ್ಯಾಂಡೇಜ್ ಕಟ್ಟಿಕೊಂಡು ಛಲ ಬಿಡದೇ ಪತ್ರಿಕೆ ನಡೆಸಿದರು.

ಸಂಘ ಪರಿವಾರ ಮತ್ತು ಶಿವಸೇನೆಯಂತಹ ಫ್ಯಾಶಿಸ್ಟ್ ಕೋಮುವಾದಿ ಶಕ್ತಿಗಳೊಂದಿಗೆ ನಿರಂತರ ಹೋರಾಡಿಕೊಂಡು ಬಂದ ಕೆಲ ವರ್ಷಗಳ ಹಿಂದೆ ರಾಜದೀಪ್ ಸರ್ದೇಸಾಯಿ ಸಂಪಾದಕರಾಗಿದ್ದ ಸಿಎನ್‌ಎನ್-ಐಬಿಎನ್ ಸಂಸ್ಥೆಯ ಮರಾಠಿ ವಾಹಿನಿ ಐಬಿಎನ್ ಲೋಕಮತದ ಸಂಪಾದಕರಾಗಿ ನಿಖಿಲ್ ವಾಗ್ಲೆ ಕಾರ್ಯನಿರ್ವಹಿಸಿದರು. ಈ ವಾಹಿನಿ ಜನಪ್ರಿಯತೆ ಗಳಿಸಿತು. ಆದರೆ ಒಂದು ಕೆಟ್ಟ ದಿನ ಮುಖೇಶ್ ಅಂಬಾನಿ ಅವರು ಈ ವಾಹಿನಿ ಖರೀದಿಸಿದರು. ಅಂಬಾನಿ ಅವರು ಖರೀದಿಸಿದ ದಿನವೇ ಹುದ್ದೆಗೆ ರಾಜೀನಾಮೆ ನೀಡುವಂತೆ ವಾಗ್ಲೆಯವರಿಗೆ ನೋಟಿಸ್ ನೀಡಲಾಯಿತು.

ಆನಂತರ ಎರಡು ವರ್ಷ ಯಾವುದೇ ಕೆಲಸವಿಲ್ಲದೆ ವಾಗ್ಲೆ ಮನೆಯಲ್ಲಿ ಕುಳಿತರು. 2014ರ ಲೋಕಸಭಾ ಚುನಾವಣೆಯಲ್ಲಿ ಅವರು ಯಾವುದೇ ಕೆಲಸದಲ್ಲಿ ಇರದಂತೆ ನೋಡಿಕೊಳ್ಳಲಾಯಿತು. ಆನಂತರ ಮೀ ಮರಾಠಿ ವಾಹಿನಿಯಲ್ಲಿ ಅವರಿಗೆ ಅವಕಾಶ ದೊರೆಯಿತು. ಅಲ್ಲಿ ಅವರು ತಮ್ಮ ಕಾರ್ಯಕ್ರಮದಲ್ಲಿ ನಡೆಸುತ್ತಿದ್ದ ಚರ್ಚೆ, ಬಯಲು ಮಾಡುತ್ತಿದ್ದ ಹಗರಣಗಳಿಂದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಾತ್ರವಲ್ಲ ಪ್ರಧಾನಿ ನರೇಂದ್ರ ಮೋದಿ ಅವರ ಕಣ್ಣು ಕೆಂಪಾಯಿತು. ಹೀಗಾಗಿ ಆ ಕೆಲಸವನ್ನೂ ಅವರು ಕಳೆದುಕೊಂಡರು.

2016ರ ನವೆಂಬರ್‌ನಲ್ಲಿ ಗೋವೆಯಲ್ಲಿ ನಡೆದ ದಕ್ಷಿಣಾಯನ ಸಮ್ಮೇಳನಕ್ಕೆ ನಿಖಿಲ್ ವಾಗ್ಲೆ ಬಂದಿದ್ದರು. ಅವರೊಂದಿಗೆ ಮಾತನಾಡುವ ಅವಕಾಶ ಸಿಕ್ಕಿತ್ತು. ಈಗ ಯಾವ ಕೆಲಸದಲ್ಲೂ ಇಲ್ಲ. ಮನೆಯಲ್ಲಿದ್ದೇನೆ. ಪುಸ್ತಕವೊಂದನ್ನು ಬರೆಯುತ್ತಿದ್ದೇನೆ ಎಂದು ಹೇಳಿದ್ದರು. ಬಿಜೆಪಿ, ಸಂಘ ಪರಿವಾರದವರು ಮತ್ತು ಕಾರ್ಪೊರೇಟ್ ಮಾಲಕರು ತಮಗೆ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಹೇಳಿದರು. ಅವರ ಮಾತುಗಳಲ್ಲಿ ಸೋಲಿನ ಛಾಯೆ ಇರಲಿಲ್ಲ. ಹೋರಾಟದ ಛಲ ಇತ್ತು.

ಹೀಗೆ ಮನೆಯಲ್ಲಿ ಕೂತಿದ್ದ ನಿಖಲ್ ವಾಗ್ಲೆಯವರಿಗೆ ಟಿವಿ 9 ಮರಾಠಿ ವಾಹಿನಿ ಕರೆದು ಕಾರ್ಯಕ್ರಮವೊಂದನ್ನು ನಡೆಸಲು ಇತ್ತೀಚೆಗೆ ಒಪ್ಪಂದ ಮಾಡಿಕೊಂಡಿತು. ಅವರ ಕಾರ್ಯಕ್ರಮ ಮರಾಠಿಯಲ್ಲಿ ಜನಪ್ರಿಯವಾಗಿತ್ತು. ಆದರೆ ಜುಲೈ 19ರಂದು ಏಕಾಏಕಿ ಕಾರ್ಯಕ್ರಮ ರದ್ದುಗೊಳಿಸಲಾಯಿತು. ಒಂದು ವರ್ಷದ ಕಾಂಟ್ರಾಕ್ಟ್ ಇದ್ದರೂ ಹೇಳದೇ-ಕೇಳದೇ ವಾಹಿನಿ ಮುಖ್ಯಸ್ಥರು ಕಾರ್ಯಕ್ರಮ ರದ್ದುಪಡಿಸಿದರು. ಕಾರ್ಯಕ್ರಮದ ರದ್ದತಿ ಕುರಿತು ಒಂದು ತಿಂಗಳು ಮುಂಚಿತವಾಗಿ ನೋಟಿಸ್ ಸಹ ಜಾರಿಗೊಳಿಸಲಿಲ್ಲ. ರೈತರ ಆತ್ಮಹತ್ಯೆ ಮತ್ತು ಪ್ರತಿಭಟನೆ ಆಧರಿಸಿದ ಸುದ್ದಿಯೇ ಈ ಎಲ್ಲಾ ಬೆಳವಣಿಗೆಗೆ ಮುಳುವಾಯಿತು.

38 ವರ್ಷಗಳ ಪತ್ರಿಕಾ ಜೀವನದಲ್ಲಿ ಎಲ್ಲಾ ಪಕ್ಷಗಳನ್ನು ಟೀಕಿಸಿದ್ದೇನೆ. ಅನೇಕ ಬಾರಿ ದೈಹಿಕ ದಾಳಿ ನಡೆದಿದೆ. ಆದರೆ ಕಳೆದ ನಾಲ್ಕು ವರ್ಷಗಳ ಕಹಿ ಅನುಭವ ನನಗೆ ಆಗಿರಲಿಲ್ಲ ಎಂದು ನಿಖಿಲ್ ವಾಗ್ಲೆ ನೋವಿನಿಂದ ಹೇಳಿದ್ದಾರೆ. ಇದು ಬರೀ ಪರಂಜೊಯ ಗುಹಾ ಅಥವಾ ನಿಖಿಲ್ ವಾಗ್ಲೆಯವರ ಸಮಸ್ಯೆಯಲ್ಲ. ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡ ನಂತರ ರಾಜದೀಪ ಸರ್ದೇಸಾಯಿ ಮತ್ತು ಸಾಗರಿಕಾ ಘೋಷ್ ಸಿಎನ್‌ಎನ್-ಐಬಿಎನ್‌ನಿಂದ ಹೊರದೂಡಲ್ಪಟ್ಟರು. ಔಟ್‌ಲುಕ್ ಪತ್ರಿಕೆಯ ಕೃಷ್ಣಪ್ರಸಾದ್ ಕೆಲಸ ಕಳೆದುಕೊಂಡರು. ಸಿದ್ಧಾರ್ಥ್ ವರದರಾಜನ್ ಸಹ ಕೆಲಸ ಕಳೆದುಕೊಂಡಿದ್ದು, ಅವರ ಮೇಲೆ ಹೋದಲ್ಲಿ, ಬಂದಲ್ಲಿ ಗೂಂಡಾಗಿರಿ ನಡೆದಿದೆ. ಇದು ಇಂದಿನ ಮಾಧ್ಯಮದ ಸ್ಥಿತಿ. ಬರಲಿರುವ ದಿನಗಳು ಇನ್ನಷ್ಟು ಭಯಾನಕವಾಗಿವೆ. ಹಾಗೆಂದು ಕೈ ಚೆಲ್ಲಿ ಕೂರಬೇಕಿಲ್ಲ. ಬದುಕಲು ಸೆಣಸುತ್ತಲೇ ಇರಬೇಕು. 

share
ಸನತ್ ಕುಮಾರ್ ಬೆಳಗಲಿ
ಸನತ್ ಕುಮಾರ್ ಬೆಳಗಲಿ
Next Story
X