ಮೂಢನಂಬಿಕೆ ವಿರೋಧಿಯಾಗಿದ್ದ ಯು.ಆರ್.ರಾವ್ ನಿಧನಕ್ಕೆ ಸಂತಾಪ
ಬೆಂಗಳೂರು, ಜು. 24: ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಯ ಭಾರತದ ಖ್ಯಾತ ವಿಜ್ಞಾನಿ ಮತ್ತು ಇಸ್ರೋ(ಭಾರತ ಬಾಹ್ಯಾಕಾಶ ಸಂಸ್ಥೆಯ)ದ ಮಾಜಿ ಅಧ್ಯಕ್ಷ ಡಾ. ಯು.ಆರ್.ರಾವ್ ನಿಧನಕ್ಕೆ ಎಐಡಿಎಸ್‌ಒ ಸಂತಾಪವನ್ನು ಸೂಚಿಸಿದೆ.
ಅವರ ಸಾವು ಕೇವಲ ವಿಜ್ಞಾನ ಲೋಕಕ್ಕೆ ಮಾತ್ರ ಆದ ನಷ್ಟವಲ್ಲ ಅದು ಇಡೀ ಸಮಾಜ ಮತ್ತು ದೇಶಕ್ಕಾಗಿರುವ ನಷ್ಟವಾಗಿದೆ. ಇವರು ಕೇವಲ ವಿಜ್ಞಾನಿಯಾಗಿರದೆ ಸಮಾಜದಲ್ಲಿನ ಮೂಢನಂಬಿಕೆ, ಕಂದಾಚಾರಗಳ ವಿರೋಧಿ ಚಟುವಟಿಕೆಗಳ ಭಾಗವಾಗಿದ್ದರು.
ಸಾಮಾಜಿಕ ಕಳಕಳಿಯನ್ನು ಹೊಂದಿದ್ದ ಇವರು, ವಿದ್ಯಾರ್ಥಿ ಯುವಜನರಲ್ಲಿ ಒಂದು ವೈಜ್ಞಾನಿಕ ಮನೋಭಾವ ಬೆಳೆಸುವ ಚಟುವಟಿಕೆಗಳಿಗೆ ಪ್ರೇರಕರಾಗಿದ್ದರು. ಖ್ಯಾತ ವಿಜ್ಞಾನಿ ಐನ್‌ಸ್ಟೈನ್‌ರವರ 125ಜನ್ಮದಿನದ ಸಂದರ್ಭದಲ್ಲಿ ನಮ್ಮ ಸಂಘಟನೆ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಸಂದೇಶವನ್ನು ಕಳುಹಿಸಿ ವೈಜ್ಞಾನಿಕ ಚಿಂತನೆಗಳನ್ನು ಎಲ್ಲೆಡೆಯು ಹರಡುವ ಕಾರ್ಯ ಶ್ಲಾಘನೀಯ ಎಂದಿದ್ದರು ಎಂದು ಪ್ರಕಟಣೆ ತಿಳಿಸಿದೆ.
Next Story





