ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗೆ ಸ್ವಾಗತ
ಮಂಗಳೂರು, ಜು.24: ಕೆಪಿಸಿಸಿ ನೂತನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡು ದ.ಕ. ಜಿಲ್ಲೆಗೆ ಪ್ರಥಮ ಬಾರಿ ಆಗಮಿಸುತ್ತಿರುವ ಪಿ.ವಿ. ಮೋಹನ್‌ಅವರಿಗೆ ಮಂಗಳೂರು ಕೇಂದ್ರ ನಿಲ್ದಾಣದಲ್ಲಿ ಸೊಮವಾರ ಬೆಳಗ್ಗೆ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಸ್ವಾಗತ ಕೋರಿದರು.
ಈ ಸಂದರ್ಭ ಮಾತನಾಡಿದ ಪಿ.ವಿ.ಮೋಹನ್ ನನಗೆ ಸಿಕ್ಕಿದ ಈ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸುವೆ. ಪಕ್ಷ ಮರಳಿ ಅಧಿಕಾರಕ್ಕೆ ಬರಬೇಕು ಮತ್ತು ‘ಮಿಷನ್ 2018’ರ ಯಶಸ್ವಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ದುಡಿಯಬೇಕು ಎಂದರು.
Next Story





