ಸಮುದ್ರದಲ್ಲಿ ಮುಳುಗುತ್ತಿದ್ದ ಎರಡು ಆನೆಗಳನ್ನು ನೌಕಾಪಡೆ ರಕ್ಷಿಸಿದ್ದು ಹೀಗೆ..
ವೈರಲ್ ವೀಡಿಯೊ

ಕೊಲಂಬೋ, ಜು.24: ಸಮುದ್ರದಲ್ಲಿ ಮುಳುಗುತ್ತಿದ್ದ ಎರಡು ಆನೆಗಳನ್ನು ಶ್ರೀಲಂಕಾ ನೌಕಾಪಡೆ ಬೋಟ್ ಗಳು ಹಾಗೂ ಹಗ್ಗದ ಸಹಾಯದಿಂದ ರಕ್ಷಿಸಿರುವ ವಿಡಿಯೋವೊಂದು ವೈರಲ್ ಆಗಿದೆ.
ಶ್ರೀಲಂಕಾ ಕರಾವಳಿಯ ಒಂದು ಕಿಮೀ ದೂರದ ಸಮುದ್ರದಲ್ಲಿ ಎರಡು ಆನೆಗಳು ಅಪಾಯಕ್ಕೆ ಸಿಲುಕಿತ್ತು. ಮುಳುಗುತ್ತಿದ್ದ ಆನೆಗಳು ಸೊಂಡಿಲನ್ನು ಮೇಲಕ್ಕೆತ್ತಿ ಪ್ರಾಣ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿತ್ತು. ಈ ಸಂದರ್ಭ ಇದನ್ನು ಗಮನಿಸಿದ ಗಸ್ತು ಸಿಬ್ಬಂದಿ ತಕ್ಷಣ ನೌಕಾಪಡೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ನೌಕಾಪಡೆ ಹಗ್ಗಗಳು ಹಾಗೂ ಬೋಟ್ ಗಳ ಸಹಾಯದಿಂದ ಕಠಿಣ ಪರಿಶ್ರಮದೊಂದಿಗೆ ಆನೆಗಳನ್ನು ರಕ್ಷಿಸಿದ್ದಾರೆ.

2 ವಾರಗಳ ಹಿಂದೆ ಇದೇ ಪ್ರದೇಶದಲ್ಲಿ ಆನೆಯೊಂದು ಸಮುದ್ರದಲ್ಲಿ ಎಂಟು ಕಿ.ಮೀ,ವರೆಗೆ ಕೊಚ್ಚಿಕೊಂಡು ಹೋಗಿತ್ತು. ಆ ಸಮಯದಲ್ಲೂ ನೌಕಾಪಡೆ ಇದೇ ರೀತಿಯ ಕಾರ್ಯಾಚರಣೆ ನಡೆಸಿತ್ತು.
Next Story







