ಆದಾಯ ತೆರಿಗೆ ಸಂಗ್ರಹ: ಕರ್ನಾಟಕ 3ನೇ ಅತಿ ದೊಡ್ಡ ರಾಜ್ಯ: ಬಿ.ಕೆ ಪಾಂಡ

ತುಮಕೂರು, ಜು.24: ದೇಶದ ಅಭಿವೃದ್ದಿಗೆ ತೆರಿಗೆಗಳು ಅತ್ಯವಶ್ಯಕವಾಗಿದ್ದು, ದೇಶದಲ್ಲಿ ಕಳೆದ ವರ್ಷ 10 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದ್ದು ಕರ್ನಾಟಕದಲ್ಲಿ 1.30ಲಕ್ಷ ಕೋಟಿ ಸಂಗ್ರಹವಾಗಿತ್ತು ಎಂದು ಕರ್ನಾಟಕ ರಾಜ್ಯ ಆದಾಯ ತೆರಿಗೆ ಆಯುಕ್ತರಾದ ಬಿ.ಕೆ.ಪಾಂಡ ತಿಳಿಸಿದ್ದಾರೆ.
ನಗರದ ಸಿದ್ಧಾರ್ಥ ತಾಂತ್ರಿಕ ಕಾಲೇಜಿನಲ್ಲಿ ಆದಾಯ ತೆರಿಗೆ ಇಲಾಖೆ ವತಿಯಿಂದ ಆಯೋಜಿಸಿದ್ದ ಆದಾಯ ತೆರಿಗೆ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಭಾರತದಲ್ಲಿ ಬ್ರಿಟೀಷ್ ಆಡಳಿತವಿದ್ದಾಗ 1860ರ ಜುಲೈ -24ರಂದು ಪ್ರಥಮ ಬಾರಿಗೆ ಸರಕಾರದ ವತಿಯಿಂದ ತೆರಿಗೆ ಸಂಗ್ರಹ ಆರಂಭವಾಯಿತು. ಇಂದು ದೇಶದ ಸರ್ವಾಂಗಿಣ ಪ್ರಗತಿಗಾಗಿ ನಾವು ಹೆಚ್ಚು ತೆರಿಗಗಳನ್ನು ಪರೋಕ್ಷಾವಾಗಿ ಹಾಗೂ ಅಪರೋಕ್ಷ ತೆರಿಗಳನ್ನು ಸಂಗ್ರಹಿಸಬೇಕಿದೆ. ದೇಶದಲ್ಲಿ ಇಂದು ಇ-ಪೈಲಿಂಗ್ ಪದ್ದತಿ ಅನುಸರಣಿಯಿಂದಾಗಿ ತೆರಿಗೆ ಪಾವತಿ ಸರಳಿಕರಣಗೊಂಡ ಕಾರಣ ಇಡೀ ವಿಶ್ವದಲ್ಲೇ ಶೇ. 100ರಷ್ಟು ಇ-ಪೈಲಿಂಗ್ ವ್ಯವಸ್ಥೆ ದೇಶಗಳಲ್ಲಿ ಭಾರತವು ಒಂದಾಗಿದೆ ಎಂದರು.
ತುಮಕೂರು ಜಿಲೆಯಲ್ಲಿ ಕಳೆದ ವರ್ಷ ರೂ.100 ಕೋಟಿ ಆದಾಯ ತೆರಿಗೆ ಸಂಗ್ರಹ ಗುರಿಯಿತ್ತು.135 ಕೋಟಿ ರೂ.ಗಳ ತೆರಿಗೆ ಸಂಗ್ರಹ ಮಾಡಿ ಗುರಿ ಮೀರಿದ ಸಾಧನೆಯಾಗಿದೆ. ಇದಕ್ಕಾಗಿ ತುಮಕೂರು ಜಿಲ್ಲೆಯ ಎಲ್ಲಾ ಆದಾಯ ತೆರಿಗೆ ಅಧಿಕಾರಿಗಳನ್ನು ಅಭಿನಂದಿಸುವುದಾಗಿ ತಿಳಿಸಿದರು.
ಲೆಕ್ಕಪರಿಶೋಧಕ ಆಂಜಿನಪ್ಪ ಮಾತನಾಡಿ, ಆದಾಯ ತೆರಿಗೆ ಇಲಾಖೆ ಬಗ್ಗೆ ಜನರಲ್ಲಿರುವ ಭೀತಿಯನ್ನು ಹೊಗಲಾಡಿಸಿದಲ್ಲಿ ಜನ ತಾವಾಗೇ ಮುಂದೆ ಬಂದು ಆದಾಯ ತೆರಿಗೆ ಪಾವತಿಸುತ್ತಾರೆ. 1973-74ರಲ್ಲಿ ದೇಶದಲ್ಲಿ ಶೇ.93ರಷ್ಟು ತೆರಿಗೆಗಳಿದ್ದವು. ಇದರಿಂದಾಗಿ ಖಾಸಗಿಯವರು ಕಾರ್ಖಾನೆ ಮತ್ತು ಉದ್ದಿಮಿಗಳನ್ನು ಸ್ಥಾಪಿಸಲು ಹಿಂಜರಿಯುತ್ತಿದ್ದರು, ಆದರೆ ಇಂದು ಕಾಲ ಬದಾಲಾಗಿದ್ದು, ಸರ ಕಾರಗಳು ತೆರಿಗೆ ನೀತಿಗಳನ್ನು ಜನ ಸ್ನೇಹಿ ಮಾಡಿರುವುದರಿಂದ ಹಾಗೂ ತೆರಿಗೆಳ ವಿನಾಯ್ತಿಯಿಂದಾಗಿ ಜನ ಇಂದು ಖಾಸಗಿಯಾಗಿ ಕಾರ್ಖಾನೆ ಮತ್ತು ಉದ್ದಿಮೆಗಳನ್ನು ಆರಂಬಿಸಿರುವುದರಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಕಡಿಮೆಯಾಗುತ್ತಿದೆ ಎಂದರು.
ಸಮಾರಂಭದಲ್ಲಿ ತುಮಕೂರು ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರಾದ ನಂದಿನಿದಾಸ್ ಮತ್ತು ಭುವನೇಶ್ವರಿಯವರು ಉಪಸ್ಥಿತರಿದ್ದರು.







