ಜಿಎಸ್‌ಟಿ ವಿರುದ್ಧ ಎಲ್‌ಐಸಿ ಪ್ರತಿನಿಧಿಗಳ ಪ್ರತಿಭಟನೆ

ಮದ್ದೂರು, ಜು.24: ಜಿಎಸ್‌ಟಿ ವಾಪಸ್ ಪಡೆಯಲು ಒತ್ತಾಯಿಸಿ ಆ.2 ರಂದು ದೆಹಲಿಯ ಸಂಸತ್ ಭವನದ ಎದುರು ನಡೆಯಲಿರುವ ಧರಣಿಗೆ ಮಳವಳ್ಳಿ, ಮದ್ದೂರು ತಾಲೂಕಿನ ಎಲ್‌ಐಸಿ ಪ್ರತಿನಿಧಿಗಳು ಸೋಮವಾರ ಮದ್ದೂರಿನಿಂದ ಪ್ರಯಾಣ ಬೆಳೆಸಿದರು.
ಈ ಸಂದರ್ಭದಲ್ಲಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರದೀಪ್, ಕೇಂದ್ರ ಸರಕಾರ ಜಿಎಸ್‌ಟಿ ಜಾರಿಗೆ ತಂದ ಪರಿಣಾಮ ಎಲ್.ಐ.ಸಿ. ಮೇಲೆ ದುಷ್ಪರಿಣಾಮ ಬೀರಿದೆ ಎಂದರು.
1956 ರಿಂದ ಇಲ್ಲಿವರೆಗೂ ಎಲ್‌ಐಸಿಯಲ್ಲಿ ಜನರು ಸಣ್ಣ ಉಳಿತಾಯ ಮಾಡಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಇಂತಹ ಉಳಿತಾಯದ ಹಣದ ಮೇಲೆ ಶೇ.4.5ರಷ್ಟು ಜಿಎಸ್‌ಟಿ ತೆರಿಗೆ ವಿಧಿಸಿರುವುದು ಉಳಿತಾಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಟಿ.ರವಿ, ಯೋಗೇಶ್, ಸೋಮಪ್ಪ, ಶಾಂತಮಲ್ಲಪ್ಪ, ಮುತ್ತುರಾಜು, ಶಿವರಾಜು, ವಾಸು, ಕೃಷ್ಣ, ಅರವಿಂದಕುಮಾರ್, ಶಿವನಂಜೇಗೌಡ, ಶಿವಲಿಂಗಯ್ಯ, ಇತರರು ಉಪಸ್ಥಿತರಿದ್ದರು.
Next Story





