ಅಕಸ್ಮಿಕವಾಗಿ ಬೆಂಕಿ ತಗುಲಿ ಮೃತ್ಯು
ಗೋಣಿಬೀಡು, ಜು.24: ಅಕಸ್ಮಿಕವಾಗಿ ಬೆಂಕಿ ತಗುಲಿ ಜೀವನ್ಮರಣದೊಂದಿಗೆ ಸೆಣಸುತ್ತಿದ್ದ ಯುವತಿಯೋರ್ವಳು ಹಾನ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೋಣಿಭೀಡು ಪೊಲೀಸ್ ಠಾಣೆ ವ್ಯಾಪ್ತಿಯ ಜನ್ನಾಪುರ ಭದ್ರಾ ಎಸ್ಟೇಟ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಯುವತಿ ರೋಮಿಶಾ(21) ಮೃತಪಟ್ಟ ದುರ್ಧೈವಿ. ಈಕೆ ತನ್ನ ಮಲೆಯಲ್ಲಿ ಅಡುಗೆ ಮಾಡಲುಜು.22ರಂದು ಸೀಮೆಎಣ್ಣೆ ಒಲೆಗೆ ಬೆಂಕಿ ಹಚ್ಚುತ್ತಿದ್ದಾಗ ಅಕಸ್ಮಿಕವಾಗಿ ಬಟ್ಟೆಗೆ ಬೆಂಕಿ ತಗುಲಿ ದೇಹವು ತೀವ್ರ ಸುಟ್ಟ ಗಾಯವಾಗಿತ್ತು.
ತಕ್ಷಣ ಆಕೆಯನ್ನು ಮೂಡಿಗೆರೆ ಎಂಜಿ.ಎಂ.ಆಸ್ಪತ್ರೆಯಲ್ಲಿ ತಉರ್ತು ಚಿಕಿತ್ಸೆ ಬಳಿಕ ಹಾಸನ ಜಿಲ್ಲಾಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶೇ.7ಒ ಕ್ಕಿಂತಲೂ ಹೆಚ್ಚಿನ ಸುಟ್ಟ ಗಾಯದಿಂದ ಜೀವನ್ಮರಣದೊಂದಿಗೆ ಸೆಣಸಾಡಿದ ಯುವತಿ ಮೃತಪಟ್ಟಿದ್ದಾರೆ. ಈ ಕುರಿತು ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story





