ಬ್ಯಾಟ್ ಚೆಂಡ್‌ದ ಗೊಬ್ಬು: ವಿಜೇತರಿಗೆ ಅಕ್ಕಿ ಮುಡಿ

ಉಡುಪಿ, ಜು.24: ದೊಡ್ಡಣಗುಡ್ಡೆಯ ಜವನೆರ ಕೂಟದ ಆಶ್ರಯದಲ್ಲಿ ಆಟಿಡೊಂಜಿ ದಿನದ ಪ್ರಯುಕ್ತ ಏರ್ಪಡಿಸಲಾದ ಬ್ಯಾಟ್ ಚೆಂಡ್‌ದ ಗೊಬ್ಬು ಕ್ರಿಕೆಟ್ ಪಂದ್ಯಾಟವನ್ನು ರವಿವಾರ ವಿಶಿಷ್ಟ ರೀತಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪ್ರಥಮ ಸ್ಥಾನ ಪಡೆದ ತಂಡಕ್ಕೆ ಐದು ಮುಡಿ ಅಕ್ಕಿ, ದ್ವಿತೀಯ ಸ್ಥಾನ ಗಳಿಸಿದ ತಂಡಕ್ಕೆ ಮೂರು ಮುಡಿ ಅಕ್ಕಿ ಹಾಗೂ ಸರಣಿ ಶ್ರೇಷ್ಠ ಮತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿ ವಿಜೇತರಿಗೆ ಅಂಕದ ಕೋಳಿಯನ್ನು ವಿತರಿಸಲಾಯಿತು. ಪಂದ್ಯಾಟದಲ್ಲಿ ಒಟ್ಟು 10 ತಂಡಗಳು ಪಾಲ್ಗೊಂಡಿದ್ದವು.
ಪಂದ್ಯಾಟದಲ್ಲಿ ಗುರುಶ್ರೀ ಗುಂಡಿಬೈಲು ತಂಡವು ಪ್ರಥಮ ಸ್ಥಾನ ಗೆದ್ದು ಕೊಂಡರೆ, ಸೈಮಂಡ್ಸ್ ಕಡಿಯಾಳಿ ದ್ವೀತೀಯ ಸ್ಥಾನ ಪಡೆದುಕೊಂಡಿತು. ರಾಘ ವೇಂದ್ರ ಕರ್ನ್ನಾಪಾಡಿ ಪಂದ್ಯ ಶ್ರೇಷ್ಠ ಮತ್ತು ಸುಜೀತ್ ಆಚಾರ್ಯ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.
ಪಂದ್ಯಾಟವನ್ನು ಉಡುಪಿ ನಗರಸಭಾ ಸದಸ್ಯ ರಮೇಶ ಪೂಜಾರಿ ರವಿವಾರ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ಸುರೇಶ ಬೀಡು, ಕಡಿಯಾಳಿ ದೇವಳದ ಆಡಳಿತ ಮಂಡಳಿಯ ಮೊಕ್ತೇಸರ ಶ್ರೀನಿವಾಸ ಹೆಬ್ಬಾರ್, ನಗರಸಭಾ ಸದಸ್ಯ ಸತೀಶ ಪುತ್ರನ್, ಉದ್ಯಮಿಗಳಾದ ರಾಧಾಕೃಷ್ಣ ಶೆಟ್ಟಿ, ಕಿಶೋರ್ ಆಚಾರ್ಯ, ಸುರೇಶ ನಾಯ್ಕ, ದಿನೇಶ ಗುಂಡಿ ಬೈಲು, ಮಾಧವ ಆಚಾರ್ಯ, ಪ್ರಭಾಕರ್ ಪೂಜಾರಿ ಉಪಸ್ಥಿತರಿದ್ದರು.





