ಬಿಎಂಟಿಸಿ: 12 ಲಕ್ಷ ದಂಡ ವಸೂಲಿ

ಬೆಂಗಳೂರು, ಜು.24: ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಂದ ಜೂನ್ ತಿಂಗಳಲ್ಲಿ 12 ಲಕ್ಷಕ್ಕೂ ಅಧಿಕ ದಂಡ ವಸೂಲಿ ಮಾಡಲಾಗಿದೆ.
ಅನಿಧಿಕೃತ ಸಂಚಾರ ತಪ್ಪಿಸಲು ಹಾಗೂ ಸಾರಿಗೆ ಆದಾಯ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರದಾದ್ಯಂತ ಸಂಚರಿಸುವ ಸಾರಿಗೆ ಬಸ್‌ಗಳಲ್ಲಿನ 22,881 ಟ್ರಿಪ್‌ಗಳನ್ನು ತಪಾಸಣೆಗೆ ಒಳಪಡಿಸಿ 8036 ಟಿಕೆಟ್ ರಹಿತ ಪ್ರಯಾಣಿಕರಿಂದ 12.26 ಲಕ್ಷಕ್ಕೂ ಅಧಿಕ ದಂಡ ವಸೂಲಿ ಮಾಡಿದ್ದು, 2353 ಪ್ರಕರಣಗಳನ್ನು ನಿರ್ವಾಹಕರ ಮೇಲೆ ದಾಖಲಿಸಲಾಗಿದೆ.
ಜೊತೆಗೆ, ಮಹಿಳಾ ಪ್ರಯಾಣಿಕರಿಗಾಗಿ ಮೀಸಲಿರಿಸಿದ ಆಸನಗಳಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಪುರುಷರಿಂದ 30 ಸಾವಿರ ರೂ.ಗಳಷ್ಟು ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story





