ನವೆಂಬರ್ 16ರಿಂದ ಐಟಿಇ ಬಿಜ್

ಬೆಂಗಳೂರು, ಜು.24: ಬೆಂಗಳೂರು ಐ.ಟಿ.ಇ. ಬಿಜ್ 20ನೆ ಆವೃತ್ತಿ ಹಾಗೂ ಬೆಂಗಳೂರು ಇಂಡಿಯಾ ಬಯೋ 17ನೆ ಆವೃತ್ತಿಯನ್ನು ನ.16 ರಿಂದ ಮೂರು ದಿನಗಳ ಕಾಲ ನಗರದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗುವುದು ಎಂದು ರಾಜ್ಯ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಐಟಿಇ ಬಿಜ್ ಕಾರ್ಯಕ್ರಮದ ಥೀಮ್ ಅನಾವರಣಗೊಳಿಸಿ ಮಾತನಾಡಿದರು.
ಈ ಬಾರಿಯ ಐಟಿಇ ಬಿಜ್‌ನಲ್ಲಿ ಕೌಶಲ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಿದ್ದೇವೆ. ‘ಕಲ್ಪಿಸಿ, ನವೀಕರಿಸಿ ಮತ್ತು ಸಂಶೋಧಿಸಿ’ ಎಂಬ ಶೀರ್ಷಿಕೆ ಮೇಲೆ ಕಾರ್ಯಕ್ರಮ ಕೇಂದ್ರೀಕೃತವಾಗಿದೆ. ವೈಮಾನಿಕ, ಮಾಹಿತಿ ಹಾಗೂ ಜೈನ ತಂತ್ರಜ್ಞ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರಬೇಕು ಎಂಬುದು ನಮ್ಮ ಉದ್ದೇಶ ಎಂದು ತಿಳಿಸಿದರು.
ಜೈವಿಕ ತಂತ್ರಜ್ಞಾನದಲ್ಲಿ ಅವಕಾಶ ತೆರೆಯಲಾಗಿದ್ದು ಒಟ್ಟು, 20,000 ಕಂಪೆನಿಗಳಲ್ಲಿ 6000 ಉತ್ಪನ್ನಗಳು ಪ್ರದರ್ಶನವಾಗಲಿವೆ.ಗ್ರಾಮೀಣ ಪ್ರದೇಶದಿಂದ 350 ಹಾಗೂ 300 ಮಹಿಳಾ ಪ್ರದರ್ಶಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು
ಗೋಷ್ಠಿಯಲ್ಲಿ ಬಯೋಕಾನ್ ಸಂಸ್ಥೆಯ ಸಿಎಂಡಿ ಡಾ. ಕಿರಣ್ ಮುಜುಂದಾರ್ ಷಾ, ಇನ್ಪೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕರಾದ ಕ್ರಿಸ್ ಗೋಪಾಲಕೃಷ್ಣನ್ ಸೇರಿದಂತೆ ಇತರರು ಇದ್ದರು.





