ಸೇತುವೆಯಿಂದ ಹಾರಿ ಆತ್ಮಹತ್ಯೆ

ಉಡುಪಿ, ಜು.24: ಸಂತೆಕಟ್ಟೆ ಸಮೀಪದ ಕೆ.ಜಿ.ರೋಡ್ ಸೇತುವೆಯಿಂದ ವ್ಯಕ್ತಿಯೊಬ್ಬರು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಸಂಜೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ನೇಜಾರಿನ ರಾಜೀವ ನಗರದ ಜೆವಿಯರ್ ರೋಡ್ರಿಗಸ್ (63) ಎಂದು ಗುರುತಿಸಲಾಗಿದೆ.
ಅವರು ಇಂದು ಬೆಳಗ್ಗೆ 10:30ಕ್ಕೆ ಮನೆಯಿಂದ ಸಂತೆಕಟ್ಟೆಗೆ ಹೋಗುವುದಾಗಿ ಹೇಳಿ ಹೊರಟಿದ್ದರು. ಸಂಜೆ 5:30ರ ಸುಮಾರಿಗೆ ಅವರು ಕೆ.ಜಿ.ರೋಡ್ ಸೇತುವೆಯಿಂದ ಹಾರಿ ನೀರಿನಲ್ಲಿ ಮುಳುಗಿ ಮೃತಪಟ್ಟರು ಎನ್ನಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





