ಬ್ಯಾಂಕಿಂಗ್ ನಿಯಂತ್ರಣ ಅಧ್ಯಾದೇಶದ ಸ್ಥಾನದಲ್ಲಿ ಮಸೂದೆ ಮಂಡನೆ

ಹೊಸದಿಲ್ಲಿ,ಜು.24: ಒತ್ತಡದಲ್ಲಿರುವ ಆಸ್ತಿಗಳ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಬ್ಯಾಂಕುಗಳಿಗೆ ನಿರ್ದೇಶಿಸಲು ಆರ್‌ಬಿಐಗೆ ಅಧಿಕಾರ ನೀಡುವ ಮಸೂದೆಯೊಂದನ್ನು ವಿತ್ತಸಚಿವ ಅರುಣ್ ಜೇಟ್ಲಿ ಅವರು ಸೋಮವಾರ ಲೋಕಸಭೆಯಲ್ಲಿ ಮಂಡಿಸಿದರು.
1949ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಿರುವ ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಮಸೂದೆ, 2017 ಈ ವರ್ಷದ ಮೇ ತಿಂಗಳಲ್ಲಿ ಹೊರಡಿಸಲಾಗಿದ್ದ ಬ್ಯಾಂಕಿಂಗ್ ನಿಯಂತ್ರಣ(ತಿದ್ದುಪಡಿ),2017ರ ಸ್ಥಾನದಲ್ಲಿ ಬರಲಿದೆ.
Next Story





