Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಆನ್‌ಲೈನ್ ವಂಚಕರನ್ನು ನ್ಯಾಯಾಲಯಕ್ಕೆ...

ಆನ್‌ಲೈನ್ ವಂಚಕರನ್ನು ನ್ಯಾಯಾಲಯಕ್ಕೆ ಒಪ್ಪಿಸಿದ ಚಿಕ್ಕಮಗಳೂರು ಪೊಲೀಸರು

ವಾರ್ತಾಭಾರತಿವಾರ್ತಾಭಾರತಿ24 July 2017 10:02 PM IST
share
ಆನ್‌ಲೈನ್ ವಂಚಕರನ್ನು ನ್ಯಾಯಾಲಯಕ್ಕೆ ಒಪ್ಪಿಸಿದ ಚಿಕ್ಕಮಗಳೂರು ಪೊಲೀಸರು

ಚಿಕ್ಕಮಗಳೂರು, ಜುಲೈ 24: ಜನರನ್ನು ಆನ್‌ಲೈನ್ ಮೂಲಕ ವಂಚಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದ 21 ಮಂದಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸಿದರು.

ಇದಕ್ಕೂ ಮುನ್ನ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿಕ್ಕಮಗಳೂರು ನಗರದ ಮೋಹನ್‌ಭಟ್ ಎಂಬವರು ತಮ್ಮ ಪತ್ನಿಯ ದೂರವಾಣಿ ನಂಬರ್‌ಗೆ ಅಪರಿಚಿತನೋರ್ವ ಕರೆ ಮಾಡಿ ನಾವು ನಾಪ್ತೋಲ್‌ನಲ್ಲಿ ಆನ್‌ಲೈನ್ ಶಾಪಿಂಗ್ ಮಾಡುತ್ತಿದ್ದು, ನೀವು ಲಕ್ಕಿಡಿಪ್‌ನಲ್ಲಿ ಆಯ್ಕೆಯಾಗಿರುವ ಕಾರಣ ತಮಗೆ ಟಾಟಾ ಸಫಾರಿ ಕಾರನ್ನು ಬಹುಮಾನವಾಗಿ ಕೊಡಲಾಗುವುದು ಎಂದು ನಂಬಿಸಿ ಹಂತ ಹಂತವಾಗಿ ವಿವಿಧ ಬ್ಯಾಂಕ್‌ಗಳ ಖಾತೆಗಳಿಗೆ 1.42 ಲಕ್ಷ ಹಣವನ್ನು ಜಮಾವಣೆ ಮಾಡುವಂತೆ ಮಾಡಿ ಯಾವುದೇ ಬಹುಮಾನ ಕೊಡದೇ ವಂಚಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮೋಹನ್ ಭಟ್ ಅವರು ಜೂ.27 ರಂದು ನಗರಠಾಣೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ನಗರ ಪೊಲೀಸರು ಆರೋಪಿಗಳ ಜಾಡು ಹಿಡಿದು ತನಿಖೆ ನಡೆಸಲಾಗಿತ್ತು. ಜು.20 ರಂದು ಎಲ್ಲಾ ಆರೋಪಿಗಳನ್ನು ರಾಂಚಿಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಸಂದರ್ಭದಲ್ಲಿ ರಾಂಚಿ ಹೈಕೋರ್ಟ್‌ನ ವಕೀಲರೊಬ್ಬರು ನ್ಯಾಯಾಲಯಕ್ಕೆ ಹಾಜರಾಗಿ ಟ್ರ್ಯಾನ್ಸಿಟ್ ವಾರೆಂಟ್ ನೀಡದಂತೆ ವಾದಿಸಿದ್ದರು. ಒಂದು ಹಂತದಲ್ಲಿ ನ್ಯಾಯಾಧೀಶರು ಟ್ರ್ಯಾನ್ಸಿಟ್ ವಾರೆಂಟ್ ನೀಡಲು ನಿರಾಕರಿಸಿದ್ದರು. ಆದರೆ ಪ್ರರಕಣದ ತನಿಖಾಧಿಕಾರಿ ನಗರ ಠಾಣೆ ಪಿಎಸೈ ಎಲ್ಲಾ ಆರೋಪಿಗಳು ತನಿಖೆಗೆ ಅಗತ್ಯವಿರುವ ಬಗ್ಗೆ ಮನವರಿಕೆ ಮಾಡಿಕೊಟ್ಟ ನಂತರ ಟ್ರ್ಯಾನ್ಸಿಟ್ ವಾರೆಂಟ್ ಪಡೆಯುವಲ್ಲಿ ಯಶಸ್ವಿಯಾದರು.

ನ್ಯಾಯಾಧೀಶರು ಜು.20 ರಂದು ರಾತ್ರಿ ಟ್ರ್ಯಾನ್ಸಿಟ್ ವಾರೆಂಟ್ ನೀಡಿದ್ದು 96 ಗಂಟೆಯ ಅವಧಿಯೊಳಗೆ ಚಿಕ್ಕಮಗಳೂರಿನ ಸ್ಥಳೀಯ ನ್ಯಾಯಾಲಯಕ್ಕೆ ಎಲ್ಲಾ ಆರೋಪಿಗಳನ್ನು ಹಾಜರುಪಡಿಸುವಂತೆ ಆದೇಶಿಸಿದ್ದರು. ಅದರಂತೆ ಇಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ ಎಂದರು.

ಆರೋಪಿಗಳಿಂದ 65 ಮೊಬೈಲ್ ಪೋನ್, 12 ಎಟಿಎಂ ಕಾರ್ಡ್, 1 ಲ್ಯಾಪ್‌ಟಾಪ್, 1 ಪ್ರಿಂಟರ್, 30 ಸಾವಿರ ನಗದು ಮತ್ತು ಇತರೆ ದಾಖ ಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು. ಆರೋಪಿಗಳು ನಾಪ್ತೋಲ್‌ನಲ್ಲಿ ಆನ್‌ಲೈನ್ ಶಾಪಿಂಗ್ ಮಾಡಿದ ಗ್ರಾಹಕರ ವಿವರಗಳನ್ನು ತೆಗೆದುಕೊಂ ಡು ಅವರಿಗೆ ಕರೆಮಾಡಿ ನಿಮಗೆ ಬಹುಮಾನ ಬಂದಿದ್ದು, ಇದನ್ನು ಪಡೆಯಲು ಟ್ಯಾಕ್ಸ್ ಮತ್ತು ಇತರೆ ಖರ್ಚಿಗಾಗಿ ಹಣವನ್ನು ವಿವಿಧ ಬ್ಯಾಂಕ್‌ಗಳಲ್ಲಿ ಜಮಾವಣೆ ಮಾಡಿ ಕೊಂಡು ಮೋಸ ಮಾಡಿರುತ್ತಾರೆ ಎಂದರು.

ಮನೆಯಿಂದ ಕೆಲಸ ಮಾಡಿ ತಿಂಗಳಿಗೆ ಒಳ್ಳೆಯ ಸಂಬಳ ಪಡೆಯಲು ಹಾಗೂ ಲೈಂಗಿಕ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ಆರೋಪಿಗಳು ವಿವಿಧ ದಿನಪತ್ರಿಕೆ ಮತ್ತು ಇತರೆ ಕಡೆಗಳಲ್ಲಿ ಜಾಹೀರಾತುಗಳನ್ನು ನೀಡಿ ಮೊಬೈಲ್ ನಂಬರ್‌ಗೆ ಕರೆ ಮಾಡಲು ತಿಳಿಸುತ್ತಾರೆ. ಅದರಂತೆ ಗ್ರಾಹಕರು ಸದರಿ ಮೊಬೈಲ್ ನಂಬರ್‌ಗಳಿಗೆ ಕರೆ ಮಾಡಿದಾಗ ಅವರಿಂದಲೂ ಸಹ ಹಣ ಪಡೆದುಕೊಂಡು ವಂಚಿಸುವುದು ಇವರ ವೃತ್ತಿಯಾಗಿದೆ ಎಂದರು.

ಪ್ರಕರಣದ ಪ್ರಮುಖ ಆರೋಪಿ ಕಾರಾಸಿಂಗ್ ವಿವಿಧ ರಾಜ್ಯಗಳಿಂದ ಜನರುಗಳನ್ನು ಕರೆದುಕೊಂಡು ಹೋಗಿ ರಾಂಚಿಯಲ್ಲಿ ಈ ಕೃತ್ಯವನ್ನು ಎಸಗುತ್ತಿದ್ದಾನೆ. ಪ್ರಕರಣದ ತನಿಖೆ  ಪ್ರಗತಿಯಲ್ಲಿದ್ದು, ಪ್ರಕರಣದಲ್ಲಿ ದಸ್ತಗಿರಿಯಾದಂತಹ ಆರೋಪಿಗಳಿಂದ ಮತ್ತು ಪ್ರಮುಖ ಆರೋಪಿಗಳನ್ನು ಪತ್ತೆಹಚ್ಚಿ ಅವರುಗಳಿಂದ ಇನ್ನು ಹೆಚ್ಚಿನ ಮಾಹಿತಿ ಪಡೆದುಕೊಳ್ಳಬೇಕಿದೆ ಎಂದರು.

 ಬಂಧಿತ ಆರೋಪಿಗಳು

ರಾಜ್ಯದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಬೆಣ್ಣೂರು ಗ್ರಾಮದ ಅಂಬರೀಶ್ ಮತ್ತು ನಾಗಲಿಂಗ, ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಮಠ ಸರ್ಕಲ್‌ನ ಸಂಜೀತ್, ಮೂಡಿಗೆರೆ ತಾಲ್ಲೂಕಿನ ಶಿವಾಜಿನಗರದ ಅಬ್ದುಲ್ಲಾ ಹಸೀಂ, ಗದಗ ಜಿಲ್ಲೆ ರೋಣ ತಾಲ್ಲೂ ಕಿನ ಹೊರಪೇಟೆಯ ಮಹಮ್ಮದ್ ಹುಸೇನ್, ರಾಯಚೂರು ಜಿಲ್ಲೆ ಗೌಡನಬಾವಿ ಗ್ರಾಮದ ಮಂಜುನಾಥ್.

ತೆಲಂಗಾಣ ರಾಜ್ಯದ ಬೆಳ್ಳಂಪಳ್ಳಿ ಜಿಲ್ಲೆಯ ಶಂಕರ್, ಕರೀಮ್‌ನಗರದ ರವೀಂದ್, ಪಳ್ಳಿತಾಂಡ ಗ್ರಾಮದ ರವಿ, ವೆಂಕಟ, ಮೆಹಬೂಬ್ ನಗರ ಜಿಲ್ಲೆಯ ಶ್ರೀನಿವಾಸ, ತ್ರೇಯಾ, ಆದಿಲಾಬಾದ್ ಜಿಲ್ಲೆಯ ಕೃಷ್ಣಮೂರ್ತಿ, ಸಂಜೀವ, ತಾಕೇಚಂದ್ ದೂಬೇ.
ಆಂಧ್ರಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯ ರಾಜಮೋಹನ್, ಬಿಹಾರ ರಾಜ್ಯದ ಗೋಪಾಲಗಂಗ್ ಜಿಲ್ಲೆಯ ವಿಜಯ ಕುಮಾರ್‌ಸಿಂಗ್.
ತಮಿಳುನಾಡು ರಾಜ್ಯದ ತಿರುವ ಲ್ಲೂರು ಜಿಲ್ಲೆಯ ಪಾರ್ತಿಬಾನ್, ಪ್ರವೀಣ್‌ಕುಮಾರ್, ವಿಘ್ನೇಶ್, ರಾಜ ಕುಮಾರ್ ಬಂಧಿತರಾಗಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿಗಳಾದ ಬಿಹಾರ ರಾಜ್ಯದ ಕತ್ರಿಸಾರಾಯಿ ವಾಸಿ ಕಾರಾಸಿಂಗ್ ಮತ್ತು ಕಲುಬುರ್ಗಿ ಜಿಲ್ಲೆಯ ಸೂರ್‌ಪುರಿ ವಾಸಿ ಕೋಟ್ರೇಶ್ ಎಂಬವರು ತಲೆಮರೆಸಿಕೊಂಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X