ದಿಲ್ಲಿ: ಲೋಕನಾಯಕ್ ಭವನದಲ್ಲಿ ಬೆಂಕಿ ಆಕಸ್ಮಿಕ

ಹೊಸದಿಲ್ಲಿ, ಜು. 24: ದಿಲ್ಲಿಯಲ್ಲಿ ಹಲವು ಸರಕಾರಿ ಕಚೇರಿಗಳಿರುವ ಲೋಕನಾಯಕ್ ಭವನ್‌ನ ನಾಲ್ಕನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಸಾವು, ನೋವುಗಳು ಸಂಭವಿಸಿಲ್ಲ.
ಈ ಕಟ್ಟಡದಲ್ಲಿ ಜಾರಿ ನಿರ್ದೇಶನಾಲಯದ ಕೇಂದ್ರ ಕಚೇರಿ, ಸಿಬಿಐ, ಆದಾಯ ತೆರಿಗೆ ಹಾಗೂ ರಾಷ್ಟ್ರೀಯ ವಿಕೋಪ ಪ್ರತಿಕ್ರಿಯೆ ಪಡೆಯ ಕೆಲವು ಕಚೇರಿಗಳು ಇವೆ.
ಬೆಂಕಿ ನಂದಿಸಲು 26 ಅಗ್ನಿಶಾಮಕ ದಳ ಹಾಗೂ ಅಗ್ನಿಶಮನ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ.
ಒಂದು ಮಹಡಿಯಲ್ಲಿ ಬೆಂಕಿ ಹತ್ತಿಕೊಂಡಿದ್ದು, ಮೂರು ಮಹಡಿಗಳಲ್ಲಿ ದಟ್ಟ ಹೊಗೆ ಆವರಿಸಿದೆ ಎಂಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story





