ಜು. 25ರಂದು ನಗರದ ನೆಹರೂ ಮೈದಾನದಲ್ಲಿ ಫುಟ್‌ಬಾಲ್ ಟೂರ್ನಮೆಂಟ್
ಮಂಗಳೂರು, ಜು.24: ಕರ್ನಾಟಕ ಸ್ಟೇಟ್ ಫುಟ್‌ಬಾಲ್ ಅಸೋಸಿಯೇಶನ್ ಅಂಗ ಸಂಸ್ಥೆಯಾದ ದ.ಕ. ಜಿಲ್ಲಾ ಫುಟ್‌ಬಾಲ್ ಅಸೋಸಿಯೇಶನ್ ವತಿಯಿಂದ ಜು. 25ರಂದು ಬೆಳಗ್ಗೆ 9:45ಕ್ಕೆ ನಗರದ ನೆಹರೂ ಮೈದಾನದಲ್ಲಿ 21ನೆ ಇಂಡಿಪೆನ್‌ಡೆನ್ಸ್ ಕಪ್ ಫುಟ್‌ಬಾಲ್ ಟೂರ್ನಮೆಂಟ್ ನಡೆಯಲಿದೆ.
ಮೇಯರ್ ಕವಿತಾ ಸನಿಲ್ ಟೂರ್ನಮೆಂಟ್‌ನ್ನು ಉದ್ಘಾಟಿಸಲಿದ್ದಾರೆ. ದ.ಕ. ಜಿಲ್ಲಾ ಫುಟ್‌ಬಾಲ್ ಅಸೋಸಿಯೇಶನ್‌ನ ಪೋಷಕ ಹಾಗೂ ಶ್ರೀ ದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸದಾನಂದ ಶೆಟ್ಟಿ, ಮನಪಾ ಸದಸ್ಯರಾದ ದಿವಾಕರ್, ಅಬ್ದುಲ್ಲತೀಫ್, ಯೂತ್ ಆ್ಯಂಡ್ ಸ್ಪೋರ್ಟ್ಸ್‌ನ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜಾ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





