Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ದುಬಾರಿ ವಿಮಾನಗಳಲ್ಲಿ...

ದುಬಾರಿ ವಿಮಾನಗಳಲ್ಲಿ ಪ್ರಯಾಣಿಸದ,ಹೋಟೆಲ್‌ಗಳಲ್ಲಿ ತಂಗದ ಅಮಿತ್ ಶಾ

ರಾಷ್ಟ್ರಮಟ್ಟದ ಪತ್ರಿಕೆಯ ವಿಶೇಷ ವರದಿಯ ಹಿಂದಿನ ಅಸಲಿಯತ್ತಿದು........

ವಾರ್ತಾಭಾರತಿವಾರ್ತಾಭಾರತಿ24 July 2017 10:46 PM IST
share
ದುಬಾರಿ ವಿಮಾನಗಳಲ್ಲಿ ಪ್ರಯಾಣಿಸದ,ಹೋಟೆಲ್‌ಗಳಲ್ಲಿ ತಂಗದ ಅಮಿತ್ ಶಾ

ಹೊಸದಿಲ್ಲಿ,ಜು.24: ‘‘ಅಮಿತ್ ಶಾ ಅವರು ಎಂದೂ ವಿಶೇಷ ವಿಮಾನಗಳಲ್ಲಿ ಪ್ರಯಾಣಿಸುವುದಿಲ್ಲ, ಹೋಟೆಲ್‌ಗಳಲ್ಲಿ ತಂಗುವುದಿಲ್ಲ...ಬದಲಿಗೆ ಪಕ್ಷದ ಕಾರ್ಯಕರ್ತರ ಮನೆಗಳಲ್ಲಿ ಉಳಿದುಕೊಳ್ಳುವುದಕ್ಕೆ ಆದ್ಯತೆ ನೀಡುತ್ತಾರೆ ’’ ಫೈನಾನ್ಶಿಯಲ್ ಎಕ್ಸ್‌ಪ್ರೆಸ್‌ನಲ್ಲಿ ಬಿಜೆಪಿ ಅಧ್ಯಕ್ಷರ ಸರಳ ಜೀವನಶೈಲಿಯ ಕುರಿತು ಪ್ರಕಟವಾಗಿದ್ದ ಬರಹದ ಶೀರ್ಷಿಕೆ ಇದು. ಈ ‘ಎಂದೂ’ ಎನ್ನುವುದು ಬಹಳ ಶಕ್ತಿಯುತ ಶಬ್ದವಾಗಿದೆ. ಈ ಕಥೆಯ ಅಸಲಿಯತ್ತು ಇಲ್ಲಿದೆ.....

 ಶೀರ್ಷಿಕೆಯಂತೆಯೇ ಇಡೀ ವರದಿಯು ಶಾ ಅವರ ಬಗ್ಗೆ ಹೊಗಳಿಕೆಗಳಿಂದಲೇ ತುಂಬಿದೆ. ‘ಅಮಿತ್ ಶಾ ಅವರು ಚುನಾವಣಾ ಪ್ರಚಾರದ ಸಂದರ್ಭಗಳನ್ನು ಹೊರತು ಪಡಿಸಿದರೆ ವಿಮಾನಗಳಲ್ಲಿ ಪ್ರಯಾಣಿಸಲು ಬಯಸುವುದಿಲ್ಲ. ಆಗಲೂ ಬಿಜೆಪಿ ಅಧ್ಯಕ್ಷರು ಸಾಮಾನ್ಯವಾಗಿ ವಾಣಿಜ್ಯಿಕ ಯಾನಗಳನ್ನೇ ಬಳಸುತ್ತಾರೆ. ಅಚ್ಚರಿಯ ಸಂಗತಿಯೆಂದರೆ ಲೇಹ್ ಅಥವಾ ಈಶಾನ್ಯ ಭಾರತದಂತಹ ದೂರದ ಪ್ರದೇಶಗಳಿಗೆ ಪ್ರಯಾಣಿಸು ವಾಗಲೂ ಶಾ ಅವರು ಆ ಪ್ರದೇಶಗಳಲ್ಲಿ ಕಾರ್ಯಾಚರಿಸುವ, ಇತರ ಪ್ರಯಾಣಿಕರೂ ಇರುವ ಪವನಹಂಸ ಹೆಲಿಕಾಪ್ಟರ್‌ಗಳಲ್ಲಿಯೇ ಪ್ರಯಾಣಿಸುತ್ತಾರೆ. ಬಿಜೆಪಿ ಅಧ್ಯಕ್ಷರ ಸರಳತೆ ಇಲ್ಲಿಗೇ ಮುಗಿಯಲಿಲ್ಲ...ಅಧಿಕೃತ ಪ್ರವಾಸಗಳ ಸಂದರ್ಭಗಳಲ್ಲಿಯೂ ಅವರು ಹೋಟೆಲ್‌ಗಳಲ್ಲಿ ತಂಗುವುದಿಲ್ಲ, ಬದಲಿಗೆ ಪಕ್ಷದ ಕಾರ್ಯಕರ್ತರ ಮನೆಗಳಲ್ಲಿ ಉಳಿದುಕೊಳ್ಳಲು ಇಷ್ಟಪಡುತ್ತಾರೆ. ಈ ವಿಷಯಗಳು ಇಂತಹ ಪ್ರಮುಖ ವ್ಯಕ್ತಿ ಇಷ್ಟೊಂದು ಸರಳವಾಗಿ ಏಕೆ ಬದುಕುತ್ತಿದ್ದಾರೆ ಎಂದು ಕೆಲವರಿಗೆ ಅಚ್ಚರಿಯನ್ನುಂಟು ಮಾಡಬಹುದು ’’ ಎಂದು ವರದಿಯು ಹೇಳಿಕೊಳ್ಳುತ್ತಲೇ ಹೋಗಿದೆ.

ನಿಜ,ಇವು ಅಚ್ಚರಿ ಮೂಡಿಸುವ ವಿಷಯಗಳು....ಸರಿ. ಆದರೆ ಫೈನಾನ್ಶಿಯಲ್ ಎಕ್ಸ್‌ಪ್ರೆಸ್‌ನಂತಹ ರಾಷ್ಟ್ರಮಟ್ಟದ ಪ್ರಮುಖ ವಾಣಿಜ್ಯ ಪತ್ರಿಕೆಯು ಈ ವಿಷಯಗಳನ್ನು ಓದುಗರ ಮುಂದಿಟ್ಟಿದ್ದು ಅದಕ್ಕೂ ಹೆಚ್ಚಿನ ಅಚ್ಚರಿಯಾಗಿದೆ.

ಈ ಅಂತರ್ಜಾಲ ಯುಗದಲ್ಲಿ ಗೂಗಲ್ ಸರ್ಚ್ ನಿಜಕ್ಕೂ ಅದ್ಭುತ ಸಾಧನವಾಗಿದೆ. ಬಳಸಲೂ ತುಂಬ ಸರಳ, ಆದರೂ ಬಹಳಷ್ಟು ಜನರು ಉತ್ಪ್ರೇಕ್ಷಿತ ಹೇಳಿಕೆಗಳನ್ನು ನೀಡುವ ಮುನ್ನ ಅದರ ಸತ್ಯಾಸತ್ಯತೆಯನ್ನು ಗೂಗಲ್ ಸರ್ಚ್ ಮೂಲಕ ಖಚಿತಪಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ವರದಿಯನ್ನು ಪ್ರಕಟಿಸುವ ಮುನ್ನ ಇಷ್ಟಾದರೂ ಕಾಳಜಿ ವಹಿಸಿದ್ದರೆ ಅದು ಈಗ ಮುಜುಗರ ಅನುಭವಿಸಬೇಕಿರಲಿಲ್ಲ.

ಶಾ ‘ಎಂದೂ ’ವಿಶೇಷ ವಿಮಾನಗಳಲ್ಲಿ ಪ್ರಯಾಣಿಸುವುದಿಲ್ಲ ಮತ್ತು ಚುನಾವಣಾ ಸಂದರ್ಭಗಳನ್ನು ಹೊರತುಪಡಿಸಿ ವಿಮಾನಗಳಲ್ಲಿ ಪ್ರಯಾಣಿಸುವುದನ್ನು ಇಷ್ಟಪಡುವುದಿಲ್ಲ ಎಂದು ಪತ್ರಿಕೆಯು ಬಲವಾಗಿ ಪ್ರತಿಪಾದಿಸಿದೆ.

ಆದರೆ, ಈ ವರ್ಷದ ಫೆಬ್ರವರಿಯಲ್ಲಿ ರಾಹುಲ್ ಕನ್ವಲ್ ಅವರು ತಾನು ನಡೆಸಿದ್ದ ಅಮಿತ್ ಶಾ ಅವರ ವಿಶೇಷ ಸಂದರ್ಶನದ ಚಿತ್ರಗಳನ್ನು ಪೋಸ್ಟ್ ಮಾಡಿದ್ದರು. ಶಾ ಮತ್ತು ಕನ್ವಲ್ ಖಾಸಗಿ ಜೆಟ್ ವಿಮಾನದಲ್ಲಿ ಪರಸ್ಪರ ಎದುರುಬದುರಾಗಿ ಕುಳಿತು ಮಾತನಾಡುತ್ತಿದ್ದನ್ನು ಈ ಚಿತ್ರಗಳು ತೋರಿಸಿದ್ದವು.

 2017,ಮಾರ್ಚ್‌ನಲ್ಲಿ ಮಣಿಪುರದ ರಾಜಧಾನಿ ಇಂಫಾಲದಲ್ಲಿ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆಂದು ಶಾ ಮತ್ತು ಬಿಜೆಪಿ ನಾಯಕ ವೆಂಕಯ್ಯ ನಾಯ್ಡು ಅವರು ಪ್ರಯಾಣಿಸುತ್ತಿದ್ದ ವಿಶೇಷ ವಿಮಾನವು ಮಾರ್ಗಮಧ್ಯೆ ತಾಂತ್ರಿಕ ತೊಂದರೆಯಿಂದಾಗಿ ದಿಲ್ಲಿಗೆ ವಾಪಸಾಗಿತ್ತು.

ಅದೇ ತಿಂಗಳು ಪ್ರಧಾನಿ ಮೋದಿ ಮತ್ತು ಶಾ ಗುಜರಾತ್‌ನ ಸೋಮನಾಥದಲ್ಲಿದ್ದರು. ‘ಶಾ ಅವರು ವಾರಣಾಸಿಯಿಂದ 10 ಆಸನಗಳ ಬಾಡಿಗೆ ವಿಮಾನದಲ್ಲಿ ಆಗಮಿಸಿದರು ’ಎಂದು ಆಗ ಮಾಧ್ಯಮಗಳು ವರದಿ ಮಾಡಿದ್ದವು.

ಇನ್ನು ಹೆಲಿಕಾಪ್ಟರ್‌ಗಳ ವಿಷಯಕ್ಕೆ ಬರೋಣ....

ಶಾ ಅವರು ಹರಿದ್ವಾರಕ್ಕೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿರುವ ವೀಡಿಯೋ ವೀಕ್ಷಿಸಿ.

2016ರಲ್ಲಿ ಭಾರತವು ತೀವ್ರ ಬರಸದೃಶ ಸ್ಥಿತಿಯಲ್ಲಿದ್ದಾಗ ಹರ್ಯಾಣದಲ್ಲಿ ಶಾ ಅವರ ಹೆಲಿಕಾಪ್ಟರ್ ಇಳಿಯಲು ಹೆಲಿಪ್ಯಾಡ್‌ನ್ನು ಒದ್ದೆ ಮಾಡಲು ಸಾವಿರಾರು ಲೀ.ನೀರನ್ನು ವ್ಯಯಿಸಲಾಗಿತ್ತು.

ಕಳೆದ ತಿಂಗಳು ಶಾ ಅವರನ್ನು ಹೊತ್ತಿದ್ದ ಹೆಲಿಕಾಪ್ಟರ್ ತಮಿಳುನಾಡಿನ ತಿರುವಣ್ಣಾಮಲೈ ಸರಕಾರಿ ಆರ್ಟ್ಸ್ ಕಾಲೇಜಿನ ಆವರಣದಲ್ಲಿಯ ತಾತ್ಕಾಲಿಕ ಹೆಲಿಪ್ಯಾಡ್‌ನಲ್ಲಿ ಇಳಿದಿತ್ತು. ತನ್ನ ದೇಶವ್ಯಾಪಿ ಪ್ರವಾಸದ ಅಂಗವಾಗಿ ಶಾ ನಗರಕ್ಕೆ ಭೇಟಿ ನೀಡಿದ್ದರು. ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ತನ್ನ ಓದುಗರನ್ನು ನಂಬಿಸಲು ಬಯಸಿದ್ದಂತೆ ಇವ್ಯಾವುದೂ ‘ಇತರ ಪ್ರಯಾಣಿಕರು ಇದ್ದ ಪವನಹಂಸ ಹೆಲಿಕಾಪ್ಟರ್ ’ಗಳಾಗಿರಲಿಲ್ಲ.

ಹೋಟೆಲ್‌ಗಳ ವಿಷಯ ಹೇಳುವುದಾದರೆ ಇಲ್ಲಿವೆ ಶಾ ಅವರ ತಾಜ್ ಬೆಂಗಳೂರಿನಲ್ಲಿಯ ವಾಸ್ತವ್ಯದ ಚಿತ್ರಗಳು. ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ಹೇಳಿದ್ದನ್ನು ನಂಬುವುದಾದರೆ ಬೆಂಗಳೂರಿನಲ್ಲಿ ಪಕ್ಷದ ಕಾರ್ಯಕರ್ತರು ಯಾರೂ ಇಲ್ಲದ್ದರಿಂದ ಶಾ ಹೋಟೆಲ್‌ನಲ್ಲಿ ತಂಗಿರಬಹುದು!

ಬಿಜೆಪಿಗೆ ತುಂಬ ನಿಕಟವಾಗಿರುವ ಪಿ.ಆರ್ ರಮೇಶ್ ಅವರು ತನ್ನ ಲೇಖನವೊಂದರಲ್ಲಿ ಶಾ ಉಳಿದುಕೊಂಡಿದ್ದ ಹೋಟೆಲ್‌ವೊಂದರ ಬಗ್ಗೆ ಬಣ್ಣಿಸಿದ್ದಾರೆ. ‘‘ಅಮಿತ್ ಅನಿಲಚಂದ್ರ ಶಾ ಅವರು ಉಳಿದುಕೊಂಡಿರುವ ಮುಝಫರ್‌ನಗರದ ಹೋಟೆಲ್‌ನ ರಿಸೆಪ್ಶನ್‌ನಲ್ಲಿ ಭಾರೀ ಗಾತ್ರದ ಹಲವಾರು ಖುರ್ಚಿಗಳನ್ನಿರಿಸಲಾಗಿದೆ ಮತ್ತು ಇದು ಅವರು ನಿರೀಕ್ಷಿಸಿರುವ ಅತಿಥಿಗಳ ವರ್ಗವನ್ನು ಸೂಚಿಸುತ್ತದೆ ’’ ಎಂದು ಅವರು ಬರೆದಿದ್ದಾರೆ. ಇವು ಶಾ ಅವರ ‘ಸರಳ ಬದುಕು’ತೋರಿಸುವ ಕೆಲವೇ ನಿದರ್ಶನಗಳು. ಇನ್ನಷ್ಟು ನಿದರ್ಶನಗಳು ಬೇಕೆಂದರೆ ಗೂಗಲ್ ಸರ್ಚ್ ಮಾಡಿ......

share
ವಾರ್ತಾಭಾರತಿ
ವಾರ್ತಾಭಾರತಿ
Next Story
X