ಕ್ಯಾಂಪಸ್‌ನಲ್ಲಿ ಸಮರ ಟ್ಯಾಂಕರ್ ಸ್ಥಾಪಿಸಿ: ಕೇಂದ್ರಕ್ಕೆ ಜೆಎನ್‌ಯು ಮನವಿ

ಹೊಸದಿಲ್ಲಿ, ಜು. 24: ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯ (ಜೆಎನ್‌ಯು)ದ ಕ್ಯಾಂಪಸ್‌ನಲ್ಲಿ ಸಮರ ಟ್ಯಾಂಕರ್ ಒಂದನ್ನು ಸ್ಥಾಪಿಸುವಂತೆ ಜೆಎನ್‌ಯು ಉಪ ಕುಲಪತಿ ಎಂ. ಜಗದೀಶ್ ಕುಮಾರ್ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ವಿಶ್ವವಿದ್ಯಾನಿಲಯದ ಆವರಣದಲ್ಲಿ ಸಮರ ಟ್ಯಾಂಕರ್ ಒಂದನ್ನು ಸ್ಥಾಪಿಸುವುದರಿಂದ ವಿದ್ಯಾರ್ಥಿಗಳು ಯೋಧರ ತ್ಯಾಗ ಹಾಗೂ ಪರಾಕ್ರಮ ನೆನಪಿಸಿಕೊಳ್ಳುವರು ಎಂದು ಅವರು ಇಲ್ಲಿ ನಡೆದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಕ್ಯಾಂಪಸ್‌ನಲ್ಲಿ ತ್ರಿವರ್ಣ ಧ್ವಜ ರ್ಯಾಲಿ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು, ಶಿಕ್ಷಣತಜ್ಞರು ಹಾಗೂ ಮಾಜಿ ಯೋಧರು 2,200 ಚದರ ಅಡಿ ಉದ್ದದ ತ್ರಿವರ್ಣ ಧ್ವಜದೊಂದಿಗೆ ಗಂಗಾ ಧಾಬಾದಿಂದ ಸಮಾವೇಶದ ಕೇಂದ್ರದ ವರೆಗೆ ಸಾಗಿದರು.
ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಜನರಲ್ ವಿ.ಕೆ. ಸಿಂಗ್, ನಿವೃತ್ತ ಯೋಧ ಮೇಜರ್ ಜನರಲ್ ಜಿ.ಡಿ. ಬಕ್ಷಿ, ಹಾಗೂ ಕ್ರಿಕೆಟಿಗ ಗೌತಮ್ ಗಂಭೀರ್ ಮೊದಲಾದವರು ರ್ಯಾಲಿಯಲ್ಲಿ ಪಾಲ್ಗೊಂಡರು. ಹುತಾತ್ಮ ಯೋಧರ 23 ಕುಟುಂಬಗಳು ಕೂಡ ರ್ಯಾಲಿಯಲ್ಲಿ ಭಾಗಿಯಾದವು.





