ಮಿಲಿಟರಿ ಸಹಕಾರಕ್ಕೆ ಇರಾನ್-ಇರಾಕ್ ಅಂಕಿತ

ಟೆಹ್ರಾನ್,ಜು.24: ಭಯೋತ್ಪಾದನೆ ಹಾಗೂ ತೀವ್ರವಾದದ ವಿರುದ್ಧ ಹೋರಾಡಲು ಮತ್ತು ಉಭಯದೇಶಗಳ ನಡುವೆ ಸೇನಾ ಸಹಕಾರವನ್ನು ಬಲಪಡಿಸುವ ಮಹತ್ವದ ಒಪ್ಪಂದಗಳಿಗೆ ಇರಾನ್ ಹಾಗೂ ಇರಾಕ್ ರವಿವಾರ ಸಹಿಹಾಕಿವೆ. ಇರಾನ್ ಜೊತೆ ಇರಾಕ್ ಮಿಲಿಟರಿ ಒಪ್ಪಂದವನ್ನು ಏರ್ಪಡಿಸಿರುವುದು ವಾಶಿಂಗ್ಟನ್‌ನ ಆತಂಕಕ್ಕೆ ಕಾರಣವಾಗಿದೆಯೆನ್ನಲಾಗಿದೆ.
ಗಡಿಭದ್ರತೆಯೂ, ಸೇನಾ ವ್ಯೆಹ ರಚನೆ ಹಾಗೂ ತರಬೇತಿಗೆ ಸಂಬಂಧಿಸಿದ ತಿಳುಳಿಕಾ ಒಪ್ಪಂದಗಳಿಗೆ ಇರಾನ್‌ನ ರಕ್ಷಣಾ ಸಚಿವ ಹೊಸ್ಸೆನ್ ದೆಹಾಘಾನ್ ಹಾಗೂ ಅವರ ಇರಾಕ್ ಸಹವರ್ತಿ ಇರ್ಫಾನ್ ಅಲ್-ಹಿಯಾಲಿ ಸಹಿ ಹಾಕಿದರೆಂದು ಇರಾನ್‌ನ ಅಧಿಕೃತ ಸುದ್ದಿಸಂಸ್ಥೆ ಇರ್ನಾ ವರದಿ ಮಾಡಿದೆ.
ಇರಾನ್ ಜೊತೆ ಇರಾಕ್ ಮಿಲಿಟರಿ ಒಪ್ಪಂದದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆತಂಕ ವ್ಯಕ್ತಪಡಿಸಿದ್ದಾರೆ. ಸಿರಿಯಾ,ಯಮನ್ ಹಾಗೂ ಇರಾಕ್‌ಗಳಲ್ಲಿ ಇರಾನ್ ಶಿಯಾ ಬಂಡುಕೋರರಿಗೆ ನೆರವು ನೀಡುತ್ತಿದ್ದು, ಆ ದೇಶಗಳಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸುತ್ತಿದೆಯೆಂದು ಅಮೆರಿಕದ ಆರೋಪವಾಗಿದೆ.
ಅಮೆರಿಕ ಅಧ್ಯಕ್ಷರಾಗಿ ಟ್ರಂಪ್ ಆಯ್ಕೆಯಾದ ಬಳಿಕ ಇರಾನ್ ಹಾಗೂ ಅಮೆರಿಕ ನಡುವಿನ ಬಾಂಧವ್ಯ ಇನ್ನಷ್ಟು ವಿಷಮಿಸಿದೆ. ಇರಾನ್ ಉಗ್ರಗಾಮಿ ಸಂಘಟನೆಗಳಿಗೆ ನೆರವು ನೀಡುತ್ತಿದ್ದು, ಮಧ್ಯಏಶ್ಯಾ ಹಾಗೂ ಗಲ್ಫ್ ಪ್ರದೇಶದಲ್ಲಿ ಅಸ್ಥಿರತೆಗೆ ಯತ್ನಿಸುತ್ತಿದೆಯೆಂದು ಟ್ರಂಪ್ ಆರೋಪಿಸಿದ್ದಾರೆ.
2003ರಲ್ಲಿ ಸದ್ದಾಂ ಹುಸೈನ್ ಪತನದ ಬಳಿಕ ಇರಾನ್- ಇರಾಕ್ ಬಾಂಧವ್ಯದಲ್ಲಿ ಗಣನೀಯವಾದ ಸುಧಾರಣೆಯಾಗಿತ್ತು. ಈ ತಿಂಗಳ ಆರಂಭದಲ್ಲಿ ಟ್ರಂಪ್ ಹೇಳಿಕೆಯೊಂದನ್ನು ನೀಡಿ ಪುಂಡು ಆಳ್ವಿಕೆಗಳಿರು ವ ಉತ್ತರ ಕೊರಿಯ, ಇರಾನ್ ಹಾಗೂ ಸಿರಿಯಗಳಿಂದ ಜಗತ್ತಿಗೆ ಬೆದರಿಕೆ ಎದುರಾಗಿದೆ’’ ಎಂದು ಹೇಳಿದ್ದರು. ಇರಾನ್ ಸರಕಾರವು ಇರಾಕ್‌ನಲ್ಲಿ ಬಂಡುಕೋರರಿಗೆ ತರಬೇತಿ ಹಾಗೂ ಶಸ್ತ್ರಾಸ್ತ್ರಗಳನ್ನು ನೀಡಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆಯೆಂದು ಅಮೆರಿಕ ಸೇನೆ ಆಪಾದಿಸಿದೆ. ಆದರೆ ಇದನ್ನು ಅಲ್ಲಗಳೆದಿರುವ ಇರಾನ್ ಆಡಳಿತವು ಇರಾಕ್‌ನಲ್ಲಿ ಅಮೆರಿಕ ಪಡೆಗಳ ಉಪಸ್ಥಿತಿಯೇ ಹಿಂಸಾಚಾರಕ್ಕೆ ಕಾರಣವಾಗಿದೆಯೆಂದು ಹೇಳಿಕೊಂಡಿದೆ.







