ಹರ್ಮನ್‌ಪ್ರೀತ್‌ಗೆ ಡಿವೈಎಸ್ಪಿ ಹುದ್ದೆಯ ಕೊಡುಗೆ

ಚಂಡಿಗಡ, ಜು.24: ವಿಶ್ವಕಪ್ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ರಾಜ್ಯದ ಮಹಿಳಾ ಕ್ರಿಕೆಟರ್ ಹರ್ಮನ್‌ಪ್ರೀತ್ ಕೌರ್‌ಗೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಡಿವೈಎಸ್ಪಿ ಹುದ್ದೆಯ ಕೊಡುಗೆ ನೀಡಿದ್ದಾರೆ. ‘‘ಮೊಗಾ ಜಿಲ್ಲೆಯ ಕೌರ್ ಭಾರತದ ಉಪ ನಾಯಕಿಯಾಗಿ ಎಲ್ಲರಿಗೂ ಹೆಮ್ಮೆ ತಂದಿದ್ದಾರೆ. ಆಸ್ಟ್ರೇಲಿಯ ವಿರುದ್ಧ ಸೆಮಿ ಫೈನಲ್‌ನಲ್ಲಿ ಭರ್ಜರಿ ಶತಕ ಸಿಡಿಸಿ ತಂಡವನ್ನು ಫೈನಲ್‌ಗೆ ತಲುಪಿಸಿದ್ದರು. ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ದಿಟ್ಟ ಹೋರಾಟ ನೀಡಿದ್ದರು. ಆಕೆ ಇಚ್ಛಿಸಿದರೆ ಡಿವೈಎಸ್ಪಿ ಆಗಿ ನೇಮಕ ಮಾಡಲಾಗುವುದು’’ ಎಂದು ಅಮರಿಂದರ್ ಟ್ವೀಟ್ ಮಾಡಿದ್ದಾರೆ.
‘‘ಡಿವೈಎಸ್ಪಿ ಆಫರ್ ನೀಡಿರುವ ಪಂಜಾಬ್ ಸಿಎಂಗೆ ನಾನು ಕೃತಜ್ಞತೆ ಸಲ್ಲಿಸುವೆ. ನಮ್ಮ ಪುತ್ರಿಯರು ನಮಗೆ ಹೆಮ್ಮೆ ತಂದಿದ್ದಾರೆ’’ಎಂದು ಹರ್ಮನ್‌ಪ್ರೀತ್ ತಂದೆ ಹರ್ಮಂದರ್ ಸಿಂಗ್ ಪ್ರತಿಕ್ರಿಯಿಸಿದರು.
Next Story





