ಜು. 29: ‘ಮುಲ್ಕಿ ಸಂದರಾಮ ಶೆಟ್ಟಿ ಸಂಸ್ಮರಣೆ 2017’ ಕಾರ್ಯಕ್ರಮ
ಮಂಗಳೂರು, ಜು.25: ಮುಲ್ಕಿ ಸುಂದರಾಮ ಶೆಟ್ಟಿ ಅಭಿಮಾನಿ ಬಳಗ ಮತ್ತು ವಿಜಯ ಬ್ಯಾಂಕ್ ವರ್ಕರ್ಸ್ ಹಾಗೂ ಆಫಿಸರ್ಸ್ ಯೂನಿಯನ್ ಮಂಗಳೂರು ಇದರ ವತಿಯಿಂದ ಜು. 29ರಂದು ‘ಮುಲ್ಕಿ ಸಂದರಾಮ ಶೆಟ್ಟಿ ಸಂಸ್ಮರಣೆ 2017’ ಕಾರ್ಯಕ್ರಮವನ್ನು ನಗರದ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅವರ ಅಭಿಮಾನಿ ಬಳಗದ ಗೌರವಾಧ್ಯಕ್ಷ ಎ.ಸದಾನಂದ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೇಶದ ಅಗ್ರಗಣ್ಯ ಸಾಧಕರಾಗಿರುವ ಕರಾವಳಿಯ ಹೆಮ್ಮೆಯ ಸಾಮಾಜಿಕ ನೇತಾರ ದಿ. ಮುಲ್ಕಿ ಸುಂದರಾಮ ಶೆಟ್ಟಿಯ ಸ್ಮರಣೆಯ ಕಾರ್ಯಕ್ರಮ ಅವರ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದು. ಈ ಕಾರ್ಯಕ್ರಮದಲ್ಲಿ ಮುಲ್ಕಿ ದುಗ್ಗಣ್ಣ ಸಾವಂತ, ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ಡಾ. ವಿನಯ ಹೆಗ್ಡೆ, ಎಂ.ಬಿ. ಪುರಾಣಿಕ್, ಡಾ.ಶಾಂತರಾಮ ಶೆಟ್ಟಿ, ನಳಿನ್ ಕುಮಾರ್ ಕಟೀಲ್, ಅಪ್ಪಣ್ಣ ಹೆಗ್ಡೆ, ಎ.ಜೆ.ಶೆಟ್ಟಿ, ಮಂಜುನಾಥ ಭಂಡಾರಿ, ಸವಣೂರು ಸೀತಾರಾಮ ರೈ, ಚಂದ್ರಹಾಸ ರೈ ಬೆಂಗಳೂರು, ದುಬೈ ಸರ್ವೋತ್ತಮ ಶೆಟ್ಟಿ, ಪ್ರಕಾಶ್ ಶೆಟ್ಟಿ ಬೆಂಗಳೂರು, ವಿಜಯನಾಥ ವಿಠಲ ಶೆಟ್ಟಿ, ಲೀಲಾಕ್ಷ ಬಿ.ಕರ್ಕೇರಾ, ಅರವಿಂದ ಪೂಂಜಾ, ಇಂದ್ರಾಳಿ ಜಯಕರ ಶೆಟ್ಟಿ, ಸುಳ್ಯ ಜಯಪ್ರಕಾಶ್ ರೈ, ಕಾಪು ಲಿಲಾಧರ ಶೆಟ್ಟಿ, ಮುಲ್ಕಿ ಸುಕುಮಾರ ಶೆಟ್ಟಿ, ಮನೋಹರ ಶೆಟ್ಟಿ, ಜಯರಾಜ ರೈ. ಪ್ರದೀಪ್ ಕುಮಾರ್ ಕಲ್ಕೂರ, ಹನುಮಂತ ಕಾಮತ್, ಹರಿಪ್ರಸಾದ್ ರೈ ಬೆಳ್ಳಿಪ್ಪಾಡಿ, ಐಕಳ ಹರಿಶ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಕೋಸ್ಟಲ್, ಸುರೇಂದ್ರ ಶೆಟ್ಟಿ ಕುಂದಾಪುರ, ವಾಸುದೇವ ಶೆಟ್ಟಿ ಕಾಪು, ರಮೇಶ್ ಶೆಟ್ಟಿ, ಚಂದ್ರ ಶೇಖರ ಸುವರ್ಣ, ಸುನಿಲ್ ಆಳ್ವ, ಸಾಯಿರಾಂ ಕುದ್ರೋಳಿ, ಯಶವಂತ ಮೆಂಡನ್, ಸುಬ್ಬಯ್ಯ ಹೆಗ್ಡೆ, ಗಿರಿಧರ ಶೆಟ್ಟಿ , ವಿಜಯ ಬ್ಯಾಂಕಿನ ಎ.ಬಿ.ಶೆಟ್ಟಿ, ವಿಶ್ವನಾಥ ನಾಯಕ್, ಮುದ್ದಣ್ಣ ಶೆಟ್ಟಿ, ಶಾಂತರಾಮ ಶೆಟ್ಟಿ, ಶಾಂತರಾಮ ಶೆಟ್ಟಿ , ಮಲ್ಲಿ ಕಾರ್ಜುನ ಮುದಿನೂರು ಮೊದಲಾದವರು ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ಸಾಧಕ ಮುಲ್ಕಿ ಸುಂದರಾಮ ಶೆಟ್ಟಿಯವರ ಸಾಧನೆಯನ್ನು ನೆನಪಿಸಿಕೊಳ್ಳುವ ಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸದಾನಂದ ಶೆಟ್ಟಿ ತಿಳಿಸಿದ್ದಾರೆ.
ಮುಲ್ಕಿ ಸುಂದರಾಮ ಶೆಟ್ಟಿ ರಸ್ತೆ ನಾಮಕರಣ ಸಮಾಲೋಚನೆ:- ನಗರದ ಎಲ್‌ಎಚ್ ಎಚ್ ರಸ್ತೆಗೆ ಮುಲ್ಕಿ ಸುಂದರಾಮ ಶೆಟ್ಟಿ ರಸ್ತೆ ಎಂದು ನಾಮಕರಣ ಮಾಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದಾಗ ಅದಕ್ಕೆ ತಡೆಯಾಜ್ಞೆ ಬಂದಿರುವುದರಿಂದ ನೋವನ್ನುಂಟು ಮಾಡಿದೆ. ಮುಂದಿನ ಕ್ರಮದ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಸಲಾಗುವುದು. ಸಂತ ಅಲೋಶಿಯಸ್ ಕಾಲೇಜ್ ದೊಡ್ಡ ಸಂಸ್ಥೆ , ಹಾಗೆಯೇ ಸುಂದರ ರಾಮಶೆಟ್ಟಿಯವರು ವ್ಯಕ್ತಿಗತವಾಗಿ ಮಹತ್ವದ ಸಾಧನೆ ಮಾಡಿದವರು ಈ ಎರಡು ಹೆಸರುಗಳ ಮೂಲಕ ಸಂಸ್ಥೆಯ ಹಾಗೂ ವ್ಯಕ್ತಿಯ ಸಾಧನೆಯಲ್ಲಿ ಬದಲಾವಣೆಯಾಗುವುದಿಲ್ಲ .ಆದರೆ ಈ ವಿಚಾರದಲ್ಲಿ ಅನಗತ್ಯ ಗೊಂದಲ ಬೇಕಾಗಿರಲಿಲ್ಲ ಎಲ್ಲರ ಜೊತೆ ಇರುವ ಬಂಟ ಸಮುದಾಯಕ್ಕೂ ಈ ರೀತಿಯ ವಿವಾದ ಬೇಕಾಗಿಲ್ಲ ಎಂದು ಮುಲ್ಕಿ ಸುಂದರಾಮ ಶೆಟ್ಟಿ ಅಭಿಮಾನಿ ಬಳಗದ ಕಾರ್ಯಾಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದ್ದಾರೆ.
ಮುಲ್ಕಿ ಸುಂದರಾಮ ಶೆಟ್ಟಿ ಅವರ ಹೆಸರನ್ನು ಲೈಟ್ ಹೌಸ್ ಹಿಲ್ ರಸ್ತೆಗೆ ನಾಮಕರಣ ಮಾಡುವ ಬಗ್ಗೆ 2009ರಲ್ಲಿ ಪ್ರಕ್ರೀಯೆ ನಡೆದು ಮನಪಾ ವತಿಯಿಂದ ಸಾರ್ವಜನಿಕರ ಆಕ್ಷೇಪಣೆಯನ್ನು ಕೋರಲಾಗಿತ್ತು. ಆಗ ಯಾರೂ ಆಕ್ಷೇಪಣೆ ಸಲ್ಲಿಸದೇ ಇದ್ದ ಕಾರಣ ನಾಮಕರಣದ ಪ್ರಕ್ರಿಯೆಯನ್ನು ಕೈ ಗೆತ್ತಿಕೊಳ್ಳಲಾಗಿತ್ತು. ಅಂತಿಮ ಕ್ಷಣದಲ್ಲಿ ಈ ರೀತಿಯ ಸಮಸ್ಯೆ ಉಂಟುಮಾಡಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಅಭಿಮಾನಿ ಬಳಗದ ಅಧ್ಯಕ್ಷ ಡಾ.ಮೋಹನ್ ಆಳ್ವ ಮಾತನಾಡುತ್ತಾ ಕಾರ್ಯಕ್ರಮದ ಬಗ್ಗೆ ವಿವಿರ ನೀಡಿದರು. ಸುದ್ದಿಗೊಷ್ಠಿಯಲ್ಲಿ ವಿಜಯ ಬ್ಯಾಂಕ್ ಆಫಿಸರ್ಸ್ ಯೂನಿಯನ್‌ನ ಮಾಜಿ ಅಧ್ಯಕ್ಷ ಕರುಣಾಕರ ಶೆಟ್ಟಿ, ಸೀತಾಚಚರಣ್ ಶೆಟ್ಟಿ, ರಘುರಾಮ ಸುವರ್ಣ ಹಾಗೂ ವಸಂತ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.







