ಲೈಂಗಿಕ ದೌರ್ಜನ್ಯ: ಆರೋಪ
ಬೆಂಗಳೂರು, ಜು.25: ಬಸ್‌ಗಾಗಿ ಕಾಯುತ್ತಿದ್ದ ಯುವಕನೊಬ್ಬನ ಮೇಲೆ ಮಂಗಳಮುಖಿಯರು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿರುವ ಆರೋಪ ಕೇಳಿಬಂದಿದೆ.
ನಗರದ ಹೆಬ್ಬಾಳದ ಬಸ್ ನಿಲ್ದಾಣ ಸಮೀಪ ದೊಡ್ಡಬಳ್ಳಾಪುರ ಮೂಲದ ನಾಗರಾಜು(ಹೆಸರು ಬದಲಾಯಿಸಿದೆ) ಎನ್ನುವ ಯುವಕ ರಾತ್ರಿ 11 ಗಂಟೆ ವೇಳೆಯಲ್ಲಿ ಬಸ್‌ಗಾಗಿ ಕಾಯುತ್ತಿದ್ದ ವೇಳೆ ಅಲ್ಲಿಗೆ ಬಂದ ಮೂವರು ಮಂಗಳಮುಖಿಯರು ನಾಗರಾಜು ಬಳಿ ಬಂದು ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.
ಬಳಿಕ ಮೊಬೈಲ್ ಕಸಿದು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾರೆ. ರಕ್ಷಣೆಗಾಗಿ ಕೂಗಿಕೊಂಡು, ಅಲ್ಲಿಂದ ತಪ್ಪಿಸಿಕೊಂಡು ಬಂದು ಹೆಬ್ಬಾಳ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
Next Story





