ಜು. 26: ಆಳ್ವಾಸ್‍ನಲ್ಲಿ `ಕೇಳೆ ಸಖಿ ಚಂದ್ರಮುಖಿ' ನಾಟಕ
ಮೂಡುಬಿದಿರೆ, ಜು. 25: ಮಂಗಳೂರಿನ ರಂಗಸಂಗಾತಿ ಕಲಾವಿದರು ಪ್ರಸ್ತುತ ಪಡಿಸುವ `ಕೇಳೆ ಸಖಿ ಚಂದ್ರಮುಖಿ' ನಾಟಕವು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ವೇದಿಕೆಯಲ್ಲಿ ಜು. 26ರಂದು ಸಂಜೆ 6.45ಕ್ಕೆ ಪ್ರದರ್ಶನಗೊಳ್ಳಲಿದೆ.
ಪ್ರಜ್ಞಾ ಮತ್ತಿಹಳ್ಳಿ ನಿರ್ದೇಶನದ ನಾಟಕವನ್ನು ಶಶಿರಾಜ್ ಕಾವೂರು ನಿರ್ದೇಶಿಸಿದ್ದಾರೆ. ಹರೀಶ್ ಕಾಣೆಕೋಡಿ ಅವರ ರಂಗಸಜ್ಜಿಕೆ, ಸತೀಶ್ ಸುರತ್ಕಲ್ ಸಂಗೀತ ನಾಟಕಕ್ಕಿದೆ. ಆಸಕ್ತರಿಗೆ ನಾಟಕ ವೀಕ್ಷಿಸಲು ಮುಕ್ತ ಅವಕಾಶವಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





