ಉಡುಪಿ: ಆದಾಯ ತೆರಿಗೆ ದಿನಾಚರಣೆ

ಉಡುಪಿ, ಜು.25: ಉಡುಪಿಯ ಆದಾಯ ತೆರಿಗೆ ಇಲಾಖೆ ಕಛೇರಿಯಲ್ಲಿ ಇತ್ತೀಚೆಗೆ ಆಯೋಜಿಸಲಾದ ಆದಾಯ ತೆರಿಗೆ ದಿನಾಚರಣೆಯನ್ನು ನಿವೃತ್ತ ಉಪಆಯುಕ್ತ ಎನ್.ಎಸ್.ಪೂಜಾರಿ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಇಲಾಖೆಯ ಉಪ ಆಯುಕ್ತ ನಾಗಭೂಷಣ್ ವಹಿಸಿದ್ದರು. ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷೆ ರೇಖಾ ದೇವಾನಂದ್, ಛೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಕೃಷ್ಣರಾವ್ ಕೊಡಂಚ, ಉಡುಪಿ ಟ್ಯಾಕ್ಸ್ ಬಾರ್ ಅಸೋಸಿಯೇಶನ್ ಅಧ್ಯಕ್ಷ ಪ್ರಸಾದ್ ಉಪಾಧ್ಯಾಯ, ಇಲಾಖಾಧಿಕಾರಿ ್ರೇಮ ಉಪಸ್ಥಿತರಿದ್ದರು.
ಆದಾಯ ಇಲಾಖಾ ಕಚೇರಿಯ ಸಮೀಪದಲ್ಲಿರುವ ಎರಡು ಅಂಗನವಾಡಿ ಶಾಲಾ ಮಕ್ಕಳಿಗೆ ಶಾಲಾ ಪರಿಕರ, ಹಣ್ಣು ಹಂಪಲು, ಆಟಿಕೆ ಸಾಮಾನುಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
Next Story





