ವಿದ್ಯಾರ್ಥಿಗಳಿಗೆ ಶಿಕ್ಷಣ ಮಾರ್ಗದರ್ಶನ ಶಿಬಿರ

ಉಡುಪಿ, ಜು.25: ಉಡುಪಿಯ ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ವತಿಯಿಂದ 10ನೆ ತರಗತಿಯ ವಿದ್ಯಾರ್ಥಿಗಳಿಗೆ ಶಿಕ್ಷಣ ಮಾರ್ಗ ದರ್ಶನ ಶಿಬಿರವು ಇತ್ತೀಚೆಗೆ ಕುಂಜಿಬೆಟ್ಟಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಜರಗಿತು.
ಬಾರಕೂರು ಶ್ರೀಕಾಳಿಕಾಂಬಾ ದೇವಸ್ಥಾನದ ಎರಡನೇ ಮೊಕ್ತೇಸರ ದಯಾ ನಂದ ಆಚಾರ್ಯ ಶಿಬಿರವನ್ನು ಉದ್ಘಾಟಿಸಿದರು. ಸಂಘದ ಅಧ್ಯಕ್ಷ ವಾಸುದೇವ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಹರ್ಷವರ್ದನ ನಿಟ್ಟೆ ಮುಖ್ಯ ಅತಿಥಿಯಾಗಿ ದ್ದರು. ಬಿ.ಎ.ಆಚಾರ್ಯ ಮಣಿಪಾಲ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ ದರು. ಕೋಶಾಧಿಕಾರಿ ದಿವಾಕರ ಆಚಾರ್ಯ ವಂದಿಸಿದರು. ಸಂಘದ ಉಪಾ ಧ್ಯಕ್ಷ ವೆಂಕಟೇಶ ಆಚಾರ್ಯ ಕಾರ್ಯ್ರಮ ನಿರೂಪಿಸಿದರು.
ಮಣಿಪಾಲ ಮಾಧವ ಪೈ ಸ್ಮಾರಕ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕಿ ಜ್ಯೋತಿ ಆಚಾರ್ಯ, ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಬಿ.ಎ.ಆಚಾರ್ಯ, ನಿವೃತ್ತ ಶಿಕ್ಷಕ ದಾಮೋದರ ಆಚಾರ್ಯ, ಮಣಿಪಾಲ ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ.ದಾಸಾಚಾರ್ಯ ಶಿಕ್ಷಣ ಮತ್ತು ಉದ್ಯೋಗದ ಅಕಾಶಗಳ ಬಗ್ಗೆ ಮಾಹಿತಿ ನೀಡಿದರು.
2016-17ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ರಂಜಿತಾ ಆಚಾರ್ಯ ತ್ರಾಸಿ ಹಾಗೂ ಉಡುಪಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ರೋಹಿತ್ ಯು. ಆಚಾರ್ಯ ಅವರನ್ನು ಗೌರವಿಸಲಾ ಯಿತು. ಶಿಬಿರದಲ್ಲಿ ಉಡುಪಿ ತಾಲೂಕಿನ ಒಟ್ಟು 40 ವಿದ್ಯಾರ್ಥಿ ವಿದ್ಯಾರ್ಥಿನಿ ಯರು ಭಾಗವಹಿಸಿದ್ದರು.







