ನದಿಯಲ್ಲಿ 2 ಕಿ.ಮೀ. ಈಜಿ ಕೆಲಸಕ್ಕೆ ಹೋಗುವ ಜರ್ಮನಿಗ!

ಮ್ಯೂನಿಕ್ (ಜರ್ಮನಿ), ಜು. 25: ನಗರದ ವಾಹನ ನಿಬಿಡ ರಸ್ತೆಗಳಲ್ಲಿ ಪ್ರಯಾಣ ಮಾಡುವ ಪ್ರಯಾಸದಿಂದ ಬೇಸತ್ತ ಜರ್ಮನಿಗರೊಬ್ಬರು ಕೆಲಸದ ಸ್ಥಳ ಸೇರಲು ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ!
ಅವರು ಜರ್ಮನಿಯ ಮ್ಯೂನಿಕ್ ನಗರದ ಇಸಾರ್ ನದಿಯಲ್ಲಿ 2 ಕಿ.ಮೀ. ಈಜಿಕೊಂಡು ಈಗ ಕೆಲಸಕ್ಕೆ ಹೋಗುತ್ತಿದ್ದಾರೆ.
ನದಿಯಲ್ಲಿ ಇರಬಹುದಾದ ಗಾಜಿನ ಚೂರುಗಳಿಂದ ರಕ್ಷಿಸಿಕೊಳ್ಳಲು ಅವರು ರಬ್ಬರ್ ಪಾದರಕ್ಷೆಗಳನ್ನು ಧರಿಸುತ್ತಾರೆ.
ಕೆಲವು ಸಲ ತಾನು ಈಜಿಕೊಂಡು ಕೆಲಸಕ್ಕೆ ಹೋಗುವುದನ್ನು ನೋಡಿ ಸೇತುವೆಗಳಲ್ಲಿರುವ ಜನರು ನೋಡಿ ನಗುತ್ತಾರೆ ಎಂದು ಅವರು ಹೇಳುತ್ತಾರೆ. ಆದರೆ, ನಗರದ ಸಾರಿಗೆಯಲ್ಲಿ ಬಾಕಿಯಾಗುವುದಕ್ಕಿಂತ ಇದು ಹೆಚ್ಚು ಆರಾಮದಾಯಕ ಹಾಗೂ ಇದರಿಂದ ತನಗೆ ಬೇಗ ಕಚೇರಿ ತಲುಪಲು ಸಾಧ್ಯವಾಗಿದೆ ಎಂದು ಹೇಳುತ್ತಾರೆ.
Next Story





